ಇದೀಗ ಹೊಸ ಪೊಗರು; 8 ನಿಮಿಷ ಟ್ರಿಮ್, 45 ಕೋಟಿ ಗಳಿಕೆ!

ಪೊಗರು ರಿಲೀಸಾಗಿ ಆರು ದಿನಗಳಾಗಿವೆ. ರಾಜ್ಯಾದ್ಯಂತ 45 ಕೋಟಿ ಗಳಿಕೆ ಆಗಿದೆ. ವಿವಾದಕ್ಕೂ ಗುರಿಯಾಗಿದ್ದಾಗಿದೆ. ಅದರ ಲವಾಗಿ ಎಂಟು ನಿಮಿಷದ ದೃಶ್ಯಾವಳಿಗಳು ಕಟ್ ಆಗಿವೆ. ಇಂದಿನಿಂದ ಹೊಸ ಪೊಗರು ಥೇಟರ್‌ಗಳಲ್ಲಿ ಪ್ರದರ್ಶನ ಕಾಣುವ ಸಾಧ್ಯತೆ ಇದೆ.

Dhruva sarja pogaru press meet 45 crore collection vcs

- ಪೊಗರು ಸಕ್ಸಸ್ ಮೀಟ್ ಕಾಯಕ್ರಮದ ಹೈಲೈಟ್ ಇದು. ಸಿನಿಮಾ ಗೆದ್ದಿರುವುದಕ್ಕೆ ಪುರಾವೆಯಾಗಿ ನಿರ್ಮಾಪಕ ಬಿಕೆ ಗಂಗಾಧರ್ ಕ್ಲೀನ್ ಶೇವ್ ಮಾಡಿಕೊಂಡು ನಗುತ್ತಾ ನಿಂತಿದ್ದರು. ವಿತರಕರಾದ ಬಾಷಾ, ಸುಪ್ರೀತ್, ಮುರಳಿ, ಮೋಹನ್, ಕುಮಾರ್ ಎಲ್ಲರೂ ಖುಷಿಯಾಗಿದ್ದರು.

ಪೊಗರು ಎಡಿಟ್ ವರ್ಷನ್‌ ಹೇಗಿದೆ? ಕ್ಷಮೆ ಕೇಳಿ ವಿವರ ಕೊಟ್ಟ ಧ್ರುವ 

ನಿರ್ದೇಶಕ ನಂದಕಿಶೋರ್ ‘ಸಿನಿಮಾ ಎಂಟು ನಿಮಿಷ ಟ್ರಿಮ್ ಆಗಿದೆ. ಸೆನ್ಸಾರ್ ಕೂಡ ಆಗಿದೆ. ಸರ್ಟಿಫಿಕೇಟ್ ಸಿಕ್ಕ ತಕ್ಷಣ ಕ್ಯೂಬ್‌ಗೆ ಅಪ್‌ಲೋಡ್ ಮಾಡಲಾಗುತ್ತದೆ. ಶುಕ್ರವಾರದಿಂದ ಹೊಸ ಪೊಗರು ನೋಡಬಹುದು’ ಎಂದು ಹೇಳಿದರು.

Dhruva sarja pogaru press meet 45 crore collection vcs

ಸಾರಾ ಗೋವಿಂದು, ‘ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ ಸಿನಿಮಾ ಪೊಗರು’ ಎಂದರೆ ತಾರಾ ‘ಮೊದಲು ಒಂದು ಸೀನ್‌ನಲ್ಲಿ ಇದ್ದೆ. ಈಗ ಆ ಸೀನ್ ಕೂಡ ಕಟ್ ಆಗಿದೆ’ ಅಂದರು. ನಿರ್ಮಾಪಕ ಸೂರಪ್ಪ ಬಾಬು, ‘ನಾನು ಸಾಯಬಹುದು. ಸಿನಿಮಾ ಸಾಯಲ್ಲ. ಅದಕ್ಕೆ ಅಷ್ಟೊಂದು ಮಂದಿ ಸಿನಿಮಾ ಮಂದಿರಕ್ಕೆ ಬಂದಿದ್ದೇ ಸಾಕ್ಷಿ’ ಎಂದರು.

ಪೊಗರು ಚಿತ್ರ ವಿವಾದ ಸುಖಾಂತ್ಯ: ಅಷ್ಟಕ್ಕೂ ಚಿತ್ರ ತಂಡ ಹೇಳಿದ್ದೇನು...?

ಕಲಾವಿದರಾದ ಚಿಕ್ಕಣ್ಣ, ಜಾನ್ ಲೂಕಾಸ್, ಕತೆಗಾರ ಅರುಣ್ ಬಾಲಾಜಿ, ಸಂಭಾಷಣಾಕಾರ ಪ್ರಶಾಂತ್ ರಾಜಪ್ಪ, ಕೊರಿಯೋಗ್ರಾರ್ ಮುರಳಿ ಇದ್ದರು. ಧ್ರವ ಸರ್ಜಾ, ‘ಯಾರೆಲ್ಲಾ ಪ್ರತಿಭಟನೆ ಮಾಡಿದರೋ ಅವರಲ್ಲಿ ಬಹಳಷ್ಟು ಮಂದಿ ಸಿನಿಮಾ ನೋಡಿರಲಿಕ್ಕಿಲ್ಲ. ಅವರು ಸಿನಿಮಾ ನೋಡದ ಮೇಲೆ ಮನಸ್ಸು ಬದಲಾಗಬಹುದು’ ಎಂದು ಹೇಳಿ ತಮ್ಮ ವಿಐಪಿಗಳಿಗೆ ಧನ್ಯವಾದ ಸಮರ್ಪಿಸಿ ಕಾರ್ಯಕ್ರಮಕ್ಕೆ ಪೂರ್ಣ ವಿರಾಮ ಇಟ್ಟರು.

Latest Videos
Follow Us:
Download App:
  • android
  • ios