Asianet Suvarna News Asianet Suvarna News

ಸಿನಿಮಾ ಆಗುತ್ತಿದೆ ಧರ್ಮಸ್ಥಳದ ಸೌಜನ್ಯ ಅತ್ಯಾಚಾರ - ಕೊಲೆ ಪ್ರಕರಣ, ಹೆಸರು ನೋಂದಣಿ!

ಧರ್ಮಸ್ಥಳದಲ್ಲಿ ನಡೆದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇತ್ತೀಚೆಗೆ ಬಾರಿ ಸದ್ದು ಮಾಡುತ್ತಿದೆ. ಸಿಬಿಐ ಕೋರ್ಟ್ ತೀರ್ಪಿನ ಬಳಿಕ ನಿಜವಾದ ಅಪರಾಧಿಗಳು ಯಾರು ಅನ್ನೋ ಪ್ರಶ್ನೆ ಹೆಚ್ಚಾಗಿದೆ. ಈ ಬೆಳವಣಿಗೆ ನಡುವೆ ಇದೀಗ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಇದೀಗ ಸಿನಿಮಾ ಆಗುತ್ತಿದೆ. ಫಿಲ್ಮ್ ಚೆಂಬರ್‌ನಲ್ಲಿ ಈ ಕುರಿತು ಹೆಸರು ನೋಂದಣಿಯಾಗಿದೆ.

Dharmasthala soujanya Case director lava set to action cut to Story of soujanya rape murder Title registered ckm
Author
First Published Jul 21, 2023, 12:52 PM IST

ಬೆಂಗಳೂರು(ಜು.21) ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರಾ ಹಾಗೂ ಕೊಲೆ ಪ್ರಕರಣ ರಾಜ್ಯದಲ್ಲಿ ಬಾರಿ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಸಿಬಿಐ ಕೋರ್ಟ್ ಆರೋಪಿ ಎಂದು ಜೈಲಿನಲ್ಲಿದ್ದ ಸಂತೋಷ್ ರಾವ್‌ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ದೋಷ ಮುಕ್ತಗೊಳಿಸಿತ್ತು. ಈ ತೀರ್ಪಿನ ಬಳಿಕ ಸೌಜನ್ಯ ಪ್ರಕರಣ ಮತ್ತೆ ಭುಗಿಲೆದ್ದಿದೆ. ನ್ಯಾಯಕ್ಕಾಗಿ ಸೌಜನ್ಯ ಪೋಷಕರು ಹಾಗೂ ಕೆಲ ಸಂಘಟನೆಗಳು ಹೋರಾಟ ನಡೆಸುತ್ತಿದೆ. ಇತ್ತ ಪೋಷಕರು ಹಾಗೂ ಸಂಘಟನೆಗಳು ನೇರವಾಗಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಕುಟುಂಬಸ್ಥರು ಹಾಗೂ ಇತರ ಕೆಲವರ ಮೇಲೆ ಮಾಡಿರುವ ಆರೋಪವನ್ನು ಮತ್ತಷ್ಟು ಗಂಭೀರಗೊಳಿಸಿದ್ದಾರೆ. ಈ ಬೆಳವಣಿಗೆ ನಡುವೆ ಇದೀಗ ಇದೇ ಸೌಜನ್ಯ ಪ್ರಕರಣ ಸಿನಿಮಾ ಆಗುತ್ತಿದೆ. ಬೆಂಗಳೂರಿನ ಫಿಲ್ಮ್ ಚೇಂಬರ್‌ನಲ್ಲಿ ಸೌಜನ್ಯ ಚಿತ್ರದ ಹೆಸರು ನೊಂದಣಿಯಾಗಿದೆ.

ಸ್ಟೋರಿ ಆಫ್ ಸೌಜನ್ಯ ಹೆಸರಿನಲ್ಲಿ ಹೆಸರು ನೋಂದಣಿಯಾಗಿದೆ. ಖ್ಯಾತ ನಿರ್ದೇಶಕ ಲವ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಲಿದೆ. ಇಂದು ಸಾಮಾಜಿಕ ಚಿತ್ರವಾಗಲಿದೆ ಎಂದು ನಿರ್ದೇಶಕರು ಲವ ಹೇಳಿದ್ದಾರೆ. ಇನ್ನು ಜೆಕೆ ವೆಂಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

 

ಧರ್ಮಸ್ಥಳ ಸೌಜನ್ಯ ಪ್ರಕರಣ ತೀರ್ಪಿನ ಬಳಿಕ ಕೊನೆಗೂ ಮೌನ ಮುರಿದ ವೀರೇಂದ್ರ ಹೆಗ್ಗಡೆ!

2012ರಲ್ಲಿ ಈ ಅತ್ಯಾಚಾರ ಹಾಗೂ ಕೊಲೆ ನಡೆದಿತ್ತು. ಬರೋಬ್ಬರಿ 11 ವರ್ಷಗಳಿಂದ ನ್ಯಾಯಾಕ್ಕಾಗಿ ಹೋರಾಟ ನಡೆಯುತ್ತಲೇ ಇದೆ. ಆರೋಪ, ಪ್ರತ್ಯಾರೋಪ ಹೆಚ್ಚಾಗಿದೆ. ನಿಜವಾದ ಆರೋಪಿಗಳು ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ. ಬಂಧಿತನಾಗಿದ್ದ ನಿರಪರಾಧಿಯನ್ನು ಇತ್ತೀಚೆಗೆ ಕೋರ್ಟ್ ಬಂಧ ಮುಕ್ಕಗೊಳಿಸಿತ್ತು.  

ಧರ್ಮಸ್ಥಳದ ಚಂದ್ರಪ್ಪ ಮತ್ತು ಕುಸುಮಾತಿ ದಂಪತಿಯ 17 ವರ್ಷದ ಪುತ್ರಿ ಸೌಜನ್ಯ, ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. 2012ರ ಅ.9ರಂದು ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದಾರಿ ಮಧ್ಯದ ಕಾಡಿನಲ್ಲಿ ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈಯಲಾಗಿತ್ತು.

ಕಾಲೇಜು ಮುಗಿಸಿ ಮನೆಗೆ ಹಿಂತಿರುಗಿದ ಸೌಜನ್ಯ, ಬಸ್‌ ಇಳಿದು ತೆರಳಿದ್ದಳು. ಆದರೆ, ಮನೆಗೆ ಹೋಗಿರಲಿಲ್ಲ. ಎಲ್ಲಿ ಹೋಗಿದ್ದಾಳೆ ಎಂದು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಆದರೆ, ಮರುದಿನ ಮತ್ತೊಮ್ಮೆ ಅದೇ ದಾರಿಯಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅರೆನಗ್ನ ಸ್ಥಿತಿಯಲ್ಲಿ ಸೌಜನ್ಯ ಶವ ಪತ್ತೆಯಾಗಿತ್ತು. ಶವಪತ್ತೆಯಾಗುವ ಮುನ್ನ ಮಳೆಯಾಗಿದ್ದರೂ ಆಕೆಯ ಬಟ್ಟೆಒದ್ದೆಯಾಗಿರಲಿಲ್ಲ. ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ ಎಂಬ ದೂರು ದಾಖಲಾಗಿತ್ತು. ಕೃತ್ಯದ ಬಗ್ಗೆ ಭಾರೀ ಶಂಕೆ ವ್ಯಕ್ತವಾಗಿದ್ದರಿಂದ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಪ್ರತಿಭಟನೆ ನಡೆದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದು ರಾಜ್ಯ ಮತ್ತು ದೇಶದ್ಯಾದಂತ ಪ್ರತಿಭಟನೆಗೆ ಕಾರಣವಾಗಿತ್ತು.

ಮುರುಘಾಶ್ರೀ ಪ್ರಕರಣ ಬಯಲು ಮಾಡಿದ್ದ 'ಒಡನಾಡಿ' ಇದೀಗ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಎಂಟ್ರಿ!

ಪ್ರತಿಭಟನೆಗಳು ತೀವ್ರಗೊಂಡ ಕೆಲವು ದಿನಗಳ ಬಳಿಕ ಸಂತೋಷ್‌ ರಾವ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆಯೂ ಸಾಕಷ್ಟುಅನುಮಾನಗಳು ವ್ಯಕ್ತವಾದಾಗ ನಂತರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲಾಗಿತ್ತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಬಳಿಕ ತನಿಖೆಯನ್ನು ಸರ್ಕಾರವು ಸಿಬಿಐ ಹಸ್ತಾಂತರಿಸಲಾಗಿತ್ತು. 2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಿತ್ತು.

ಆರೋಪ ಪಟ್ಟಿಯಲ್ಲಿ ಸಿಬಿಐ, ಆರೋಪಿ ಮೇಲಿ​ನ ಆರೋಪದ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ 2018ರಲ್ಲಿ ನ್ಯಾಯಾಲಯ ಮತ್ತೊಮ್ಮೆ ತನಿಖೆ ನಡೆಸುವಂತೆ ಸೂಚನೆ ನೀಡಿತ್ತು. ಆದರೆ, ಇದಕ್ಕೆ ತಡೆಯಾಜ್ಞೆ ಬಂದ ಕಾರಣ ತನಿಖಾ ಪ್ರಕ್ರಿಯೆ ನಡೆಸಲಾಗಲಿಲ್ಲ. ಆರೋಪಿ ಪರ ವಕೀಲರು ವಾದ ಮಂಡನೆಯನ್ನು ಮುಂದುವರಿಸಿದ್ದರು. ವಿಚಾರಣೆ ವೇಳೆಯಲ್ಲಿಯೂ ಸಿಬಿಐ ಪರ ವಕೀಲರು ಆರೋಪ ಸಾಬೀತು ಪಡಿಸುವಲ್ಲಿ ವಿಫಲವಾಗಿದ್ದರಿಂದ ಸಂತೋಷ್‌ರಾವ್‌ನನ್ನು ಆರೋಪಮುಕ್ತಗೊಳಿಸಿ ಆದೇಶಿಸಿದೆ.

Follow Us:
Download App:
  • android
  • ios