ಹೊಸ ಜನರೇಷನ್‌ನ ಪ್ರೀತಿ- ಪ್ರೇಮ ಹೇಗಿರುತ್ತದೆ ಎಂಬುದನ್ನು ಹೇಳುವ ಸಿನಿಮಾ ‘ನಿನ್ನ ಸನಿಹಕೆ’. ಇಷ್ಟಪಟ್ಟಹುಡುಗ- ಹುಡುಗಿ ಮದುವೆ ಆಗದೆ ಒಂದೇ ಮನೆಯಲ್ಲಿ ವಾಸ ಮಾಡುವುದಕ್ಕೆ ‘ಲಿವ್‌ ಇನ್‌ ರಿಲೇಷನ್‌ಶಿಪ್‌’ ಎನ್ನುತ್ತಾರೆ. 

ಆ ಜೀವನ ಹೇಳುವಷ್ಟು, ವರ್ಣಿಸುವಷ್ಟುಸುಲಭವಲ್ಲ ಎಂಬುದನ್ನು ಹೇಳುವ ಹೊತ್ತಿಗೆ ಬೇಕು, ಬೇಡದ ಎಲ್ಲ ಸನ್ನಿವೇಶ, ಕತೆ, ಪಾತ್ರಗಳು ಬಂದು ಸೇರಿಕೊಂಡು ಚಿತ್ರವನ್ನು ಸಾಧ್ಯವಾದಷ್ಟುಹಿಗ್ಗಿಸುತ್ತ, ಆಗಾಗ ಕುಗ್ಗಿಸುತ್ತ ಸಾಗುತ್ತದೆ ನಿರೂಪಣೆ. ಕನ್ನಡದ ಮಟ್ಟಿಗೆ ಒಂದಿಷ್ಟುಹೊಸದು ಎನಿಸುವ ಕತೆ ಇಲ್ಲಿದೆ, ಅದನ್ನು ಹೊಸದಾಗಿ ಕಟ್ಟಿಕೊಡುವುದಕ್ಕೆ ಪ್ರಯತ್ನಿಸಿದ್ದಾರೆ.

ಡಾ. ರಾಜ್ ಮೊಮ್ಮಗಳ ಸಿನಿಮಾಕ್ಕೆ ಕರೆಂಟ್ ಇಲ್ಲ... ನವರಂಗ್‌ಗೆ ಬನ್ನಿ ಎಂದ ರಘು ದೀಕ್ಷಿತ್

ಇದ್ದಕ್ಕಿದ್ದಂತೆ ಪರಿಚಯ ಆಗುವ ನಾಯಕ ಆದಿ ಮತ್ತು ನಾಯಕಿ ಅಮೃತ ಒಂದೇ ಮನೆ ಸೇರುತ್ತಾರೆ. ಆರಂಭದಲ್ಲಿ ಚೆನ್ನಾಗಿದ್ದವರು ಇದ್ದಕ್ಕಿದ್ದಂತೆ ಕಿತ್ತಾಡುತ್ತಾರೆ. ಆ ಕಿತ್ತಾಟ ಒಬ್ಬರನ್ನೊಬ್ಬರು ದೂರ ಮಾಡಿಕೊಳ್ಳುವ ಹಂತಕ್ಕೆ ಹೋಗುತ್ತದೆ. ಇನ್ನೇನು ಗಿಡವಾಗಿ ಬೆಳೆದ ಪ್ರೀತಿಯೊಂದು ಹೂವಾಗುವ ಹೊತ್ತಿಗೆ ಮುದುಡುತ್ತಿದೆ ಎಂದುಕೊಳ್ಳುವಾಗ ಮತ್ತೊಂದು ತಿರುವು ಎದುರಾಗಿ ಪ್ರೇಕ್ಷಕನ ಊಹೆಯನ್ನು ನಿಜ ಮಾಡುವಷ್ಟರಲ್ಲಿ ಸಿನಿಮಾ ಮುಕ್ತಾಯ ಆಗುತ್ತದೆ. ಇದಿಷ್ಟುಹೇಳಿದ ಕೂಡಲೇ ಒಂದಿಷ್ಟುಹಳೆಯ ಪ್ರೇಮ ಚಿತ್ರಗಳು ನೆನಪಾದರೂ ಅಚ್ಚರಿ ಇಲ್ಲ.

ತಾರಾಗಣ: ಸೂರಜ್‌ ಗೌಡ, ಧನ್ಯಾ ರಾಮ್‌ಕುಮಾರ್‌, ಅರುಣಾ ಬಾಲರಾಜ್‌, ಗಣೇಶ್‌ ರಾವ್‌, ಮಂಜುನಾಥ್‌ ಹೆಗಡೆ

ನಿರ್ದೇಶನ: ಸೂರಜ್‌ ಗೌಡ

ನಿರ್ಮಾಣ: ಅಕ್ಷಯ್‌ ರಾಜಶೇಖರ್‌, ರಂಗನಾಥ್‌ ಕುಡ್ಲಿ

ಸಂಗೀತ: ರಘು ದೀಕ್ಷಿತ್‌

ಛಾಯಾಗ್ರಹಣ: ಅಭಿಲಾಷ್‌ ಕಳತ್ತಿ

ರೇಟಿಂಗ್‌: 3

ಪ್ರೀತಿ ಇದ್ದ ಕಡೆ ಜಗಳ ಇರುತ್ತದೆ, ಜಗಳ ಇದ್ದ ಕಡೆ ಪ್ರೀತಿ ಇದ್ದು, ತ್ಯಾಗ ಮಾಡುವ ಹುಡುಗನಲ್ಲೇ ಕಾಡುವ ಪ್ರೇಮಿಯೂ ಇರುತ್ತಾನೆ ಎನ್ನುವ ತತ್ವವನ್ನು ಒಳಗೊಂಡ ‘ನಿನ್ನ ಸನಿಹಕೆ’ ಚಿತ್ರದ ಮೂಲಕ ರಾಜ್‌ಕುಮಾರ್‌ ಕುಟುಂಬದಿಂದ ಧನ್ಯಾ ರಾಮ್‌ಕುಮಾರ್‌ ನಾಯಕಿಯಾಗಿ ಚಿತ್ರರಂಗಕ್ಕೆ ಪರಿಚಯ ಆಗಿದ್ದಾರೆ. ಸೂರಜ್‌ ಗೌಡ ಹಾಗೂ ಧನ್ಯಾ ರಾಮ್‌ಕುಮಾರ್‌ ಜೋಡಿ ತೆರೆ ಮೇಲೆ ತುಂಬಾ ಚೆನ್ನಾಗಿ ಕಾಣುತ್ತದೆ, ಇಬ್ಬರ ಸ್ಕ್ರೀನ್‌ ಪ್ರೆಸೆನ್ಸ್‌ ಫ್ರೆಶ್‌ ಎನಿಸುತ್ತದೆ.

ಧನ್ಯಾ ರಾಮ್‌ಕುಮಾರ್ ಚಿತ್ರಕ್ಕಾಗಿ ಕಾಯ್ತಿದ್ದಾರೆ ಅಣ್ಣಾವ್ರ ಕುಟುಂಬ, ಫ್ಯಾನ್ಸ್

ತೀರಾ ಚಿಕ್ಕ ಕತೆಯನ್ನು ಅನಗತ್ಯವಾಗಿ ಎಳೆದಿರುವುದು, ಸಂಕಲನಕಾರರ ಉದಾರತನ ಚಿತ್ರದ ಮೈನಸ್‌. ರಘು ದೀಕ್ಷಿತ್‌ ಸಂಗೀತದಲ್ಲಿ ತೇಲಿ ಬರುವ ಹಾಡುಗಳಲ್ಲಿ ಮುಂಜಾನೆಯ ಮಂಜಿನಷ್ಟೆಹೊಸತನವಿದೆ. ಅಭಿಲಾಷ್‌ ಕಳತ್ತಿ ಛಾಯಾಗ್ರಹಣ ಚಿತ್ರದ ಪ್ರತಿ ದೃಶ್ಯವನ್ನು ಅಂದವಾಗಿ ಕಟ್ಟಿಕೊಟ್ಟಿದೆ. ಧನ್ಯಾ ರಾಮ್‌ಕುಮಾರ್‌ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದರೆ, ಸೂರಜ್‌ ಗೌಡ, ಆ್ಯಕ್ಷನ್‌ ಹೀರೋ ಆಗುವ ಸೂಚನೆಗಳನ್ನೂ ಕೊಟ್ಟಿದ್ದಾರೆ.

"