Asianet Suvarna News Asianet Suvarna News

ಪೈಲ್ವಾನರ ಸ್ವರ್ಗ ತಿಗಳರ ಪೇಟೆ ಅದ್ದೂರಿ ಕತೆ ಕೈವ: ಧನ್ವೀರ್ ಸಿನಿಮಾ ಟ್ರೈಲರ್‌ನದ್ದೇ ಟಾಕ್!

ಬಜಾರ್ ಹುಡುಗ ಧನ್ವೀರ್ ಗೌಡ- ಜೊತೆಜೊತೆಯಲಿ ಮೇಘಾ ಶೆಟ್ಟಿ, ಪುಮುಖ ಪಾತ್ರದಲ್ಲಿ ನಟಿಸಿರುವ ಬೆಲ್ ಬಾಟಂ ನಿರ್ದೇಶಕ ಜಯತೀರ್ಥ ನಿರ್ದೇಶನದ ಕೈವ ಸಿನಿಮಾದ ಟ್ರೈಲರ್ ಲಾಂಚ್ ಅದ್ದೂರಿಯಾಗಿ ನಡೆದಿದ್ದು ಟ್ರೈಲರ್ ಗಾಂಧಿನಗರದಲ್ಲಿ ಹೊಸ ಹವಾ ಎಬ್ಬಿಸಿದೆ.
 

Dhanveerrah Megha Shetty Starrer Kaiva Movie Trailer Launch gvd
Author
First Published Nov 29, 2023, 10:56 AM IST

ಬಜಾರ್ ಹುಡುಗ ಧನ್ವೀರ್ ಗೌಡ- ಜೊತೆಜೊತೆಯಲಿ ಮೇಘಾ ಶೆಟ್ಟಿ, ಪುಮುಖ ಪಾತ್ರದಲ್ಲಿ ನಟಿಸಿರುವ ಬೆಲ್ ಬಾಟಂ ನಿರ್ದೇಶಕ ಜಯತೀರ್ಥ ನಿರ್ದೇಶನದ ಕೈವ ಸಿನಿಮಾದ ಟ್ರೈಲರ್ ಲಾಂಚ್ ಅದ್ದೂರಿಯಾಗಿ ನಡೆದಿದ್ದು ಟ್ರೈಲರ್ ಗಾಂಧಿನಗರದಲ್ಲಿ ಹೊಸ ಹವಾ ಎಬ್ಬಿಸಿದೆ. ರೆಟ್ರೋ ಸ್ಟೈಲಲ್ಲಿ  ಸಖತ್ ರಾ ರೀತಿಯೇ ಮಾಡಿದ್ದಾರೆ. ಕೈವ ಸಿನಿಮಾದಲ್ಲಿ ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿಯ ನಡುವಿನ ಪ್ರೇಮಕತೆಯಿದೆ. ಜೊತೆಗೆ ಭರಪೂರ ಆಕ್ಷನ್ ದೃಶ್ಯಗಳಿವೆ. ಈ ಸಿನಿಮಾದ ಟೀಸರ್, ಹಾಡು ಈಗಾಗಲೇ ವೀಕ್ಷಕರ ಮನಗೆದ್ದಿದೆ. ಈಗ ಟ್ರೈಲರ್.. ಅದೂ ಪಕ್ಕಾ ರೆಟ್ರೋ ಸ್ಟೈಲಲ್ಲಿ. ಒಂದೊಂದು ಡೈಲಾಗ್ ಬುಲೆಟ್ನಂತೆ ಕಿವಿಗಪ್ಪಳಿಸುತ್ತೆ. ಆ ಕಾಲದ ರೌಡಿಸಂ ನ್ನು ಅದ್ರಲ್ಲೂ  ರೌಡಿಸಂ  ಸ್ವರ್ಗ ತಿಗಳರ ಪೇಟೆ ಅದ್ದೂರಿ ಕತೆಯನ್ನು ಅಷ್ಟೆ ಸಖತ್ತಾಗಿ ತೋರಿಸಿದಂತಿದೆ.

ಕೈವ ಚಿತ್ರದಲ್ಲಿ ಟ್ರೈಲರ್ ನೋಡಿದ್ರೆ ಮತ್ತೆ ಮತ್ತೆ ನೋಡುವಂತಿದೆ. ಕೈವ ಟೀಸರ್ ಸಖತ್ ಸೌಂಡ್ ಮಾಡಿತ್ತು ಈಗ ಟ್ರೈಲರ್ ಕೂಡ ಅಷ್ಟೆ ಸಖತ್ತಾಗಿದೆ. "ಕೈವ" ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳಪೇಟೆಯಲ್ಲಿ ನಡೆದ ನೈಜಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು., ಸಿನಿಮಾದ ಟ್ರೈಲರ್ ಲಾಂಚ್ ಮಾಡಿದ್ದಾರೆ ದರ್ಶನ್ ಮತ್ತು ಅಭಿಷೆಕ್ ಅಂಬರೀಷ್.  ಗಂಗಾರಾಮ್ ಕಟ್ಡಡದ ದುರಂತಕ್ಕು ಹಾಗೂ ಈ ಚಿತ್ರದ ಕಥೆಗೂ ಸಂಬಂಧವಿದೆ. ಅಣ್ಣಾವ್ರ ಭಕ್ತ ಪ್ರಹ್ಲಾದ ಸಿನಿಮಾಗೂ ಸಿನಿಮಾ ಕತೆಗೂ ಬಹಳ ಹತ್ತಿರದ ನಂಟಿದೆ ಅನ್ನೋದನ್ನು ಟ್ರೈಲರ್ನಲ್ಲಿ ಮತ್ತೆ ಕುತೂಹಲ ಮೂಡಿಸುವಂತೆ ತೋರಿಸಿದ್ದಾರೆ. 

 ಕೈವ ಸಿನಿಮಾ ಡಿಸೆಂಬರ್ 8 ರಂದು ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ಕೆಎಲ್ ಇ ಮೈದಾನದಲ್ಲಿ ಅದ್ಧೂರಿಯಾಗಿ ಟ್ರೈಲರ್ ಲಾಂಚ್ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಧನ್ವೀರ್ ನಟನೆಯ ನಾಲ್ಕನೆಯ ಸಿನಿಮಾ ಕೈವಾ ಆಗಿದೆ. ಮೇಘಾಶೆಟ್ಟಿ  ಧ್ನವೀರ್ ಜೋಡಿಯಾಗಿದ್ದಾರೆ. ರವೀಂದ್ರ ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಜಯರಾಮ್ ಕಾರ್ತಿಕ್, ದಿನಕರ್ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಶ್ವೇತಪ್ರಿಯ ಛಾಯಾಗ್ರಹಣ ಮಾಡಿದ್ದಾರೆ.  ಒಟ್ಟಿನಲ್ಲಿ ಸ್ಯಾಂಡಲ್ವುಡ್ನಲ್ಲಿ ಒಳ್ಳೆ ಕಂಟೆಂಟ್ ಸಿನಿಮಾಗಳು ಬರುತ್ತಿವೆ ಅನ್ನೋದು ಖುಷಿಯ ವಿಚಾರ.

Follow Us:
Download App:
  • android
  • ios