Asianet Suvarna News Asianet Suvarna News

ಅವನು ನಮ್ಮ ಕೈಗೆ ಸಿಕ್ತಿಲ್ಲ, ಸ್ವಲ್ಪ ಬಿಟ್ಕೊಡಿ; ಧನಂಜಯ್ ಮಾತಿಗೆ ಹರಿಪ್ರಿಯಾ ರಿಯಾಕ್ಷನ್ ವೈರಲ್

ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಪೋಸ್ಟ್‌ಗೆ ಧನಂಜಯ್ ಮಾಡಿರುವ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Dhananjaya reacts to Vasishta and Haripriya engagement sgk
Author
First Published Dec 11, 2022, 10:04 AM IST

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ನಟಿ ವಸಿಷ್ಠ ಸಿಂಹ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಬಗ್ಗೆ ಬಹಿರಂಗ ಪಡಿಸಿದರು. ಇಬ್ಬರ ಪ್ರೀತಿ ವಿಚಾರ ಬಹಿರಂಗ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿತ್ತು. ಅಂದಹಾಗೆ ಇಬ್ಬರೂ ಎಲ್ಲಿಯೂ ಪ್ರೀತಿ ಬಗ್ಗೆ ಸುಳಿವು ನೀಡಿರದ ಹರಿಪ್ರಿಯಾ - ವಸಿಷ್ಠ ಜೋಡಿ ದಿಢೀರ್ ಎಂಗೇಜ್ ಆಗುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದರು. ಅಂದಹಾಗೆ ಇಬ್ಬರ ನಡುವೆ ಪ್ರೀತಿ ಪ್ರಾಂಭವಾಗಿ ಒಂದು ವರ್ಷವಾಗಿದೆ. ವರ್ಷದಿಂದ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದಾರೆ. ಈ ಬಗ್ಗೆ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 

ಅಂದಹಾಗೆ ಹರಿಪ್ರಿಯಾ ಮತ್ತು ವಸಿಷ್ಠ ಜೋಡಿಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಶುಭಾಶಯ ತಿಳಿಸುತ್ತಿದ್ದಾರೆ. ವಸಿಷ್ಠ ಸಿಂಹ ಗೆಳೆಯ, ಸ್ಯಾಂಡಲ್ ವುಡ್  ಸ್ಟಾರ್ ಧನಂಜಯ್ ಪ್ರತಿಕ್ರಿಯೆ ವೈರಲ್ ಆಗಿದೆ. ವಸಿಷ್ಠ ಶೇರ್ ಮಾಡಿದ್ದ ಪೋಸ್ಟ್ ಗೆ ರಿಯಾಕ್ಟ್ ಮಾಡಿದ ಧನಂಜಯ್,  ಅಭಿನಂದನೆಗಳು ದೋಸ್ತಾ,  , ನೂರು ಕಾಲ ಚೆನ್ನಾಗಿ ಬಾಳಿ ಎಂದು ಹೇಳಿದ್ದಾರೆ. ಬಳಿಕ ಹರಿಪ್ರಿಯಾ ಅವರಿಗೆ  'ಅವನು ನಮ್ಮ ಕೈಗೆ ಸಿಕ್ತಾ ಇಲ್ಲ, ಅವಾಗವಾಗ ನಮಗು ಸ್ವಲ್ಪ ಬಿಟ್ಟು ಕೊಡಿ' ಎಂದು ಕೇಳಿದ್ದಾರೆ. 

ನಿಶ್ಚಿತಾರ್ಥದ ಸುಂದರ ಫೋಟೋ ಶೇರ್ ಮಾಡಿ ಹರಿಪ್ರಿಯಾ ಹೇಳಿದ್ದೇನು?

ಧನಂಜಯ್ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಹರಿಪ್ರಿಯಾ 'ಬಿಡ್ಕೊಡಲ್ಲ ಏನ್ ಇವಾಗ' ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಧನಂಜಯ್, 'ಪರ್ವಾಗಿಲ್ಲ, ನಿಮಗೋಸ್ಕರ ತ್ಯಾಗ ಮಾಡ್ತೀನಿ ಅವನನ್ನ, ಚೆನ್ನಾಗಿ ನೋಡ್ಕಳಿ ಅಷ್ಟೆ' ಎಂದು ಹೇಳಿದ್ದಾರೆ. ಧನಂಜಯ್‌ಗೆ ಹರಿಪ್ರಿಯಾ, ನೋಡ್ಕೊಳಲ್ಲಾ, ಪಾಪಾಡ್ಕೊತಿನಿ, ಗೀಟ್ ಎಳೆದು ಆಯ್ತು, ವೃತ್ತ ಬರೆದು ಆಯ್ತು, ಅದರಲ್ಲಿರೋ ಸಿಂಹ ನಂದೆ, ನಂದು ಮಾತ್ರನೇ' ಎಂದು ಹೇಳಿದ್ದಾರೆ. ಧನಂಜಯ್ ನಗುವ ಇಮೋಜಿ ಹಾಕಿದ್ದಾರೆ.  ಇವರ ಮಾತುಕತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಬ್ಬರ ಮಾತುಗಳಿಗೆ ಅಭಿಮಾನಿಗಳು ಕೂಡ ಪ್ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.

ಸಿಂಹ ನಾನು 6 ವರ್ಷಗಳಿಂದ ಸ್ನೇಹಿತರು: ಲವ್‌ಸ್ಟೋರಿ ರಿವೀಲ್ ಮಾಡಿದ ಹರಿಪ್ರಿಯಾ

ಇತ್ತೀಚಿಗಷ್ಟೆ ಹರಿಪ್ರಿಯಾ ನಿಶ್ಚಿತಾರ್ಥದ ಫೋಟೋ ಶೇರ್ ಮಾಡಿ ದೀರ್ಘವಾದ ಪೋಸ್ ಹಾಕಿದ್ದರು. 'ಆದ್ರೂ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ವೈಯಕ್ತಿಕವಾಗಿ ನಾವೇ ಇದನ್ನು ಅಧಿಕೃತಗೊಳಿಸಲು ಬಯಸುತ್ತೇವೆ. ಹೌದು ನಾವು ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ.  ನಿಮ್ಮ ಪ್ರೀತಿಯ ಶುಭಾಶಯಗಳಿಗೆ ನಮ್ಮ ಹೃದಯದ ನಿಮಗೆ ಧನ್ಯವಾದಗಳು. ನಾವು ನಮ್ಮ ನಿಶ್ಚಿತಾರ್ಥವನ್ನು ತೀರ ಖಾಸಗಿಯಾಗಿ ಇಡಬೇಕೆಂದು ಬಯಸಿದ್ದೇವೆ. ಹಾಗಾಗಿ ನಾನು ಖಾಸಗಿಯಾಗಿ ನಿಶ್ಚಿತಾರ್ಥ ಮಾಡಿಕೊಂಡೆವು' ಎಂದು ಹೇಳಿದ್ದರು. 'ನಮ್ಮ ಕುಟುಂಬದವರು ಖಾಸಗಿಯಾಗಿ ಮಾಡಿದರು ಹಾಗಾಗಿ ನಿಮಗೆ ಆಹ್ವಾನಿಸಲು ಸಾಧ್ಯವಾಗಲಿಲ್ಲ. ದಯವಿಟ್ಟು ಕ್ಷಮಿಸಿ. ನಾವು ಶೀಘ್ರದಲ್ಲೇ ನಿಮ್ಮನ್ನು ಭೇಟಿಯಾಗುತ್ತೇವೆ. ನಮ್ಮ ಪ್ರೀತಿ ವಿಚಾರವನ್ನು ನಿಮ್ಮೊಂದಿಗೆ ಹೇಳಿಕೊಳ್ಳಲು ಕಾಯುತ್ತಿದ್ದೀವಿ. ನೀವು ನಮಗೆ ಸಮಯ ನೀಡುತ್ತೀರಿ ಎಂದ ಭಾವಿಸಿದ್ದೀವಿ' ಎಂದು ಬರೆದುಕೊಂಡಿದ್ದಾರೆ.  ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಈ ಜೋಡಿ ಜನವರಿ ಅಥವಾ ಫೆಬ್ರವರಿಯಲ್ಲಿ ಹಸೆಮಣೆ ಏರುವ ಸಾಧ್ಯತೆ ಇದೆ. 

Follow Us:
Download App:
  • android
  • ios