ಮಳೆಯೊಳಗೇ ನಡೆಯುವ ಕತೆಯ ಶೀರ್ಷಿಕೆ, ಟೀಸರ್‌ ಲಾಂಚ್‌. ಧನಂಜಯ್, ರಚ್ಚು ಕಾಂಬಿನೇಷನ್‌ಗೆ ಫಿದಾ ಆದ ನೆಟ್ಟಿಗರು. 

‘ಮಾನ್ಸೂನ್‌ ರಾಗ’- ಇದು ಧನಂಜಯ್‌ ಹಾಗೂ ರಚಿತಾ ರಾಮ್‌ ನಟನೆಯ ಚಿತ್ರದ ಹೆಸರು. ವಿಖ್ಯಾತ್‌ ಸ್ಟುಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೀರ್ಷಿಕೆ ಹಾಗೂ ಟೀಸರ್‌ ಬಿಡುಗಡೆಯಾಗಿದೆ. ಎಸ್‌. ರವೀಂದ್ರನಾಥ್‌ ನಿರ್ದೇಶನದ ಈ ಚಿತ್ರವನ್ನು ವಿಖ್ಯಾತ್‌ ಎಆರ್‌ ನಿರ್ಮಿಸಿದ್ದಾರೆ. ಇಡೀ ಕಥೆ ಮುಂಗಾರು ಮಳೆಯೊಳಗೇ ನಡೆಯುತ್ತದೆ. ಟೀಸರ್‌ನಲ್ಲಿ ಮಳೆಯ ಜೊತೆಗೆ ನೆರಳು ಬೆಳಕಿನ ಹಿನ್ನೆಲೆಯ ಚಿತ್ರೀಕರಣವೂ ಸೊಗಸಾಗಿದ್ದು, ಚಿತ್ರದ ಬಗ್ಗೆ ನಿರೀಕ್ಷೆ ಮೂಡಿಸುತ್ತದೆ. ಎಸ್‌.ಕೆ. ರಾವ್‌ ಅವರ ಸಿನಿಮಾಟೋಗ್ರಫಿ, ಅನೂಪ್‌ ಸೀಳಿನ್‌ ಸಂಗೀತ ಚಿತ್ರಕ್ಕಿದೆ.

'ಹೆಡ್‌ ಬುಷ್‌' ಚಿತ್ರಕ್ಕೆ ಡಾಲಿ ಧನಂಜಯ್‌ ನಿರ್ಮಾಪಕ!

‘ಅಂಡರ್‌ವಲ್ಡ್‌ರ್‍ನ ವ್ಯಕ್ತಿಯೊಬ್ಬ ವೇಶ್ಯೆಯೊಬ್ಬಳನ್ನ ಪ್ರೀತಿಸುವ ಕಥೆ ಇದು. 60- 70ರ ದಶಕದಲ್ಲಿ ನಡೆಯುವ ಪೀರಿಯಾಡಿಕಲ್‌ ಡ್ರಾಮಾ. ಮ್ಯೂಸಿಕಲ್‌ ಲವ್‌ ಸ್ಟೋರಿ. ಇದರಲ್ಲಿ ಪ್ರೀತಿ, ನೋವಿನ ಜೊತೆಗೆ ಅಂಡರ್‌ವಲ್ಡ್‌ರ್‍ನ ಶೇಡ್‌ ಬರುತ್ತದೆ. ಮಳೆಯ ನಾದದ ಜೊತೆಗೆ ಪ್ರೇಮದ ರಾಗವೂ ಸೇರಿ ಮನಸ್ಸನ್ನು ಮುದಗೊಳಿಸುವಂಥಾ ಸಿನಿಮಾ’ ಎನ್ನುತ್ತಾರೆ ಸಿನಿಮಾದ ನಿರ್ಮಾಪಕ ವಿಖ್ಯಾತ್‌.

YouTube video player