ನಿರ್ಮಾಣದಿಂದ ಹಿಂದೆ ಸರಿದ ಅಶುಬೆದ್ರ. ಅಗ್ನಿ ಶ್ರೀಧರ್ ಕಥೆಗೆ ಡಾಲಿನೇ ನಿರ್ಮಾಪಕ. 

ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ತೆಲಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್ ಇದೇ ಮೊದಲ ಬಾರಿ ನಿರ್ಮಾಪಕನಾಗುತ್ತಿದ್ದಾರೆ. ಅದು ದೊಡ್ಡ ಬಂಡವಾಳದ ಚಿತ್ರ ಮಾಡಲು ಮುಂದಾಗಿದ್ದಾರೆ. 'ಹೀರೋ ಆಗೇ ಆಗ್ತೀನಿ' ಎಂದು ಜಯನಗರ 4th ಬ್ಲಾಕ್ ವಿಡಿಯೋದಲ್ಲಿ ಹೇಳುತ್ತಿದ್ದ ಡಾಲಿ, ಇದೀಗ ನಿರ್ಮಾಪಕರೂ ಆಗುತ್ತಿದ್ದಾರೆ. 

ಶಿವರಾಜ್‌ಕುಮಾರ್ ಸಿನಿಮಾದಿಂದ ನಟ ಡಾಲಿ ಧನಂಜಯ್‌ಗೆ ಸಿಕ್ತು ಬಿಗ್ ಆಫರ್!

ಅಶುಬೆದ್ರ ನಿರ್ಮಾಣದಲ್ಲಿ ಸೆಟ್ಟೇರಿದ್ದ ‘ಹೆಡ್‌ ಬುಷ್‌’ ಚಿತ್ರಕ್ಕೂ ಡಾಲಿ ಧನಂಜಯ್‌ ಅವರೇ ನಿರ್ಮಾಪಕರಾಗುತ್ತಿದ್ದಾರೆ. ಇವರ ಜತೆಗೆ ‘ತ್ರಿವಿಕ್ರಮ’ ಚಿತ್ರವನ್ನು ನಿರ್ಮಿಸಿದ್ದ ಸೋಮಣ್ಣ ಟಾಕೀಸ್‌ ಕೈ ಜೋಡಿಸುತ್ತಿದ್ದಾರೆ. ಅಗ್ನಿ ಶ್ರೀಧರ್‌ ಕತೆ, ಚಿತ್ರಕಥೆ ಬರೆದಿರುವ ಈ ಚಿತ್ರವನ್ನು ಶೂನ್ಯ ನಿರ್ದೇಶನ ಮಾಡುತ್ತಿದ್ದಾರೆ. ಅಶುಬೆದ್ರ ನಿರ್ಮಾಣ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ.

ಈ ಚಿತ್ರದಿಂದ ಅಶುಬೆದ್ರ ಅವರು ಯಾಕೆ ಹಿಂದಕ್ಕೆ ಹೋದರು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ನಿರ್ಮಾಪಕರು ಬದಲಾಗುತ್ತಿರುವಂತೆಯೇ ಚಿತ್ರೀಕರಣಕ್ಕೆ ಚಾಲನೆ ಕೊಡಲಾಗಿದೆ. ಆಗಸ್ಟ್‌ 9ರಿಂದ ಶೂಟಿಂಗ್‌ ಆರಂಭಿಸಲಾಗುತ್ತದೆ. ಧನಂಜಯ್‌ ಹುಟ್ಟುಹಬ್ಬದ ಪ್ರಯುಕ್ತ ಆಗಸ್ಟ್‌ 23ಕ್ಕೆ ಹೆಡ್‌ ಬುಷ್‌ ಚಿತ್ರದ ಟೀಸರ್‌ ಬಿಡುಗಡೆ ಆಗುವ ಸಾಧ್ಯತೆ ಇದೆ. ಇದು ಬೆಂಗಳೂರಿನ ಭೂಗತ ಲೋಕದ ಕಥೆಯಾಗಿದ್ದು, ಇಲ್ಲಿ ಧನಂಜಯ್‌ ಅವರು ಜಯರಾಜ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮಿಳು ಹಾಗೂ ತೆಲುಗಿನ ಕಲಾವಿದರು ಕೂಡ ಚಿತ್ರಕ್ಕೆ ಜತೆಯಾಗಿದ್ದು, ಇದನ್ನು ಪ್ಯಾನ್‌ ಇಂಡಿಯಾ ಚಿತ್ರವಾಗಿಸುವ ನಿಟ್ಟಿನಲ್ಲಿ ‘ಹೆಡ್‌ ಬುಷ್‌’ ಚಿತ್ರಕ್ಕೆ ಚಾಲನೆ ನೀಡಲಾಗಿದೆ.