ಅಮೆರಿಕಾದಿಂದ ಬಂದು ಅಪ್ಪನ ​​ ತಲೆ ಸವರಿ ಅಂತಿಮ ದರ್ಶನ ಪಡೆದ ಪುತ್ರಿ ಧೃತಿ

* ಅಮೆರಿಕಾದಿಂದ ಬೆಂಗಳೂರಿಗೆ ಬಂದ ಪುನೀತ್ ಪುತ್ರಿ
 * ಅಪ್ಪನ ಅಂತಿಮ ದರ್ಶನ ಪಡೆದ ಧೃತಿ
* ನೀತ್​ ತಲೆ ಸವರಿ ಬಿಕ್ಕಿಬಿಕ್ಕಿ ಅತ್ತ ಮಗಳು ಧೃತಿ

daughter drithi Pays tribute her Father Puneeth rajkumar rbj

ಬೆಂಗಳೂರು, (ಅ.30): ಅಮೆರಿಕಾದಿಂದ ಆಗಮಿಸಿರುವ ಪುನೀತ್ ರಾಜ್‌ಕುಮಾರ್ (Puneeth rajkumar) ಹಿರಿಯ ಪುತ್ರಿ ಧೃತಿ ತಂದೆಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

"

ತಂದೆ ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರವನ್ನು ನೋಡಿ  ದುಃಖ ತಾಳಲಾರದೇ ತಾಯಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟರು.

ಈ ದೇಹದಿಂದ ದೂರವಾದೆ ಏಕೆ ಅಪ್ಪುವೇ?.. ವಿನೋದ್ ರಾಜ್..ಲೀಲಾವತಿ ಅಶ್ರುತರ್ಪಣ

ಅಮೆರಿಕಾದಿಂದ (America ) ಜರ್ಮನಿ(Germany), ಜರ್ಮನಿಯಿಂದ ನವದೆಹಲಿಗೆ (New Delhi) ಬಂದಿಳಿದ ಧೃತಿ ಏರ್ ಇಂಡಿಯಾ ವಿಮಾನದ ಮೂಲಕ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Bengaluru Airport) ಆಗಮಿಸಿದ್ದು, ಅಲ್ಲಿಂದ ನೇರವಾಗಿ ಸದಾಶಿವನಗರದ ಮನೆಗೆ ತೆರಳಿದ ಧೃತಿ ಬಳಿಕ ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದು, ತಂದೆಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ತಂದೆಯ ಪಾರ್ಥಿವ ಶರೀರದ ಎದುರು ಧೃತಿ ಬಿಕ್ಕಿಬಿಕ್ಕಿ ಅತ್ತಿದ್ದು, ತಂದೆಯ ತಲೆಯನ್ನು ಮುಟ್ಟಿ ಅಂತಿಮ ನಮನ ಸಲ್ಲಿಸಿದರು. ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ, ಮಕ್ಕಳಾದ ವಂದಿತಾ ಹಾಗೂ ಧೃತಿ ಇಬ್ಬರನ್ನು ತಬ್ಬಿಕೊಂಡು ಕಣ್ಣೀರಿಟ್ಟರು.

ಎರಡು ತಿಂಗಳ ಹಿಂದಷ್ಟೇ ಅವರು ಅಮೆರಿಕಕ್ಕೆ ತೆರಳಿದ್ದ ಧೃತಿ  ತಂದೆ ಮೃತಪಟ್ಟ ಸುದ್ದಿ ಕೇಳುತ್ತಲೇ ಅವರು ವಿಮಾನ ಏರಿ ಬೆಂಗಳೂರಿಗೆ ಬಂದಿದ್ದಾರೆ. 24 ಗಂಟೆಗೂ ಅಧಿಕ ಕಾಲ ಪ್ರಯಾಣ ಬೆಳೆಸಿ ಬೆಂಗಳೂರು ತಲುಪಿದ್ದಾರೆ. ವಿಮಾನ ನಿಲ್ದಾಣದಿಂದ ಅವರು ನೇರವಾಗಿ ಕಂಠೀರವ ಸ್ಟೇಡಿಯಂ ತಲುಪಿದರು. ಅಪ್ಪನ ತಲೆ ಸವರಿ ಕಣ್ಣೀರು ಹಾಕಿದ್ದಾರೆ. ಈ ವೇಳೆ ದೊಡ್ಡಪ್ಪ ಶಿವರಾಜ್​ಕುಮಾರ್​ ಅವರು ಧೃತಿಯನ್ನು ಸಂತೈಸುವ ಪ್ರಯತ್ನ ಮಾಡಿದರು.

ಧೃತಿ ಅವರು ಇಂದು (ಅ.​ 30) ಮಧ್ಯಾಹ್ನ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬಳಿಕ ದೆಹಲಿಯಿಂದ ಮಧ್ಯಾಹ್ನ 1.30ಕ್ಕೆ ಬೆಂಗಳೂರು ವಿಮಾನ ಏರಿದರು. ಸಂಜೆ 4 ಗಂಟೆ ಸುಮಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಧೃತಿ ಆಗಮಿಸಿದರು. ಏರ್‌ಪೋರ್ಟ್‌ನಿಂದ ಪೊಲೀಸ್ ರಕ್ಷಣೆಯಲ್ಲಿ ನೇರವಾಗಿ ಸದಾಶಿವ ನಗರದ ತಮ್ಮ ನಿವಾಸಕ್ಕೆ ತೆರಳಿದರು. ಬಳಿಕ ತಮ್ಮ ಅಣ್ಣ (ರಾಘವೇಂದ್ರ ರಾಜಕುಮಾರ್ ಪುತ್ರ)  ವಿನಯ್ ರಾಜ್ ಕುಮಾರ್ ಜೊತೆ ಕಂಠೀರವ ಸ್ಟೇಡಿಯಂಗೆ ಆಗಮಿಸಿದರು.

ಅಂತ್ಯಸಂಸ್ಕಾರ
ಕಂಠೀರವ ಸ್ಟುಡಿಯೋದಲ್ಲಿ ನಾಳೆ (ಭಾನುವಾರ)  ಪುನೀತ್ ಅಂತ್ಯಸಂಸ್ಕಾರ ನಡೆಯಲಿದ್ದು. ಅದಕ್ಕೆ ಈಗಾಗಲೇ ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಂದೆ ಡಾ. ರಾಜ್ ಕುಮಾರ್​ ಹಾಗೂ ತಾಯಿ ಪಾರ್ವತಮ್ಮ ಸಮಾಧಿಯಿಂದ ಪಕ್ಕದಲ್ಲಯೇ ಅಪ್ಪು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗುದೆ.
 

Latest Videos
Follow Us:
Download App:
  • android
  • ios