ಕೂಗಿದ್ರೂ ಪಕ್ಕದಲ್ಲಿ ಹೆಂಡತಿಯೂ ಇಲ್ಲ, ಸ್ನೇಹಿತೆಯೂ ಇಲ್ಲ: ಭಾರೀ ಬೆನ್ನು ನೋವು, ಅಯ್ಯೋ ದರ್ಶನ್!
ನಟ ದರ್ಶನ್ ಜಿಮ್ ಜೀವನದ ಬಗ್ಗೆ ಈಗ ಹೇಳೋಕೆ ಕಾರಣ ಏನ್ ಗೊತ್ತಾ.? ವೇಟ್ ಲಿಫ್ಟಿಂಗ್ನಲ್ಲಿ 100, 120, ಕೆಜಿ ತೂಕ ಎತ್ತುತ್ತಿದ್ದ ನಟ ದರ್ಶನ್‌ಗೆ ಈಗ ಜಸ್ಟ್ ಐದು ಕೆಜಿ ಭಾರ ಎತ್ತಲಾಗುತ್ತಿಲ್ಲವಂತೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ 150 ದಿನ..
ಆರಡಿ ಮೀರಿದ ಹೈಟು, ಫಿಟ್ನೆಸ್ನಲ್ಲಿ ಪಕ್ಕಾ ಪರ್ಫೆಕ್ಟು. ದಿನಕ್ಕೆ ಎರಡು ಗಂಟೆ ಜಿಮ್ನಲ್ಲಿ ವರ್ಕೌಟು.. ಇದು ದರ್ಶನ್ (Darshan) ದೇಹ ನೋಡಿದ್ರೆ ಯಾರ್ ಬೇಕಾದ್ರು ಹೇಳ್ತಾರೆ. ಯಾಕಂದ್ರೆ ದೈತ್ಯ ದರ್ಶನ್ ಅಷ್ಟು ಕಟ್ಟು ಮಸ್ತಾಗಿ ಕಾಣೋಕೆ ಕಾರಣ ಜಿಮ್ನಲ್ಲಿ ಹಾಕೋ ಶ್ರಮ..ಸುಮ್ಮನೇ ಬರುತ್ತಾ ಹೀರೋ ಪಟ್ಟ, ಭಾರೀ ಸ್ಟಾರ್ ಡಮ್ಮು?
ನಟ ದರ್ಶನ್ ಜಿಮ್ ಇಲ್ಲದೇ ಮನೆಯಿಂದ ಆಚೆ ಬರುತ್ತಿರಲಿಲ್ಲ. ಸತತ 30 ವರ್ಷದಿಂದ ಜಿಮ್ನಲ್ಲಿ ಬೆವರು ಹರಿಸುತ್ತಿರೋ ದರ್ಶನ್, ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗುವಾಗ್ಲು ಜಿಮ್ನಿಂದಲೇ ಹೊರ ಬಂದಿದ್ರು. ಅದರಲ್ಲೂ ದರ್ಶನ್‌ಗೆ ವೇಟ್ ಲಿಫ್ಟಿಂಗ್ ನಲ್ಲಿ ಟಾಪರ್ ರೀತಿ ಕಾಣುತ್ತಿದ್ರು. ದರ್ಶನ್ ಜಿಮ್ ವರ್ಕೌಟ್ನ ಹತ್ತಾರು ವೀಡಿಯೋಗಳು ಈಗ್ಲು ಸಾಕ್ಷಿಯಾಗಿ ಸಿಗುತ್ತವೆ.
ಯೆಸ್, ನಟ ದರ್ಶನ್ ಜಿಮ್ ಜೀವನದ ಬಗ್ಗೆ ಈಗ ಹೇಳೋಕೆ ಕಾರಣ ಏನ್ ಗೊತ್ತಾ.? ವೇಟ್ ಲಿಫ್ಟಿಂಗ್ನಲ್ಲಿ 100, 120, ಕೆಜಿ ತೂಕ ಎತ್ತುತ್ತಿದ್ದ ನಟ ದರ್ಶನ್‌ಗೆ ಈಗ ಜಸ್ಟ್ ಐದು ಕೆಜಿ ಭಾರ ಎತ್ತಲಾಗುತ್ತಿಲ್ಲವಂತೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿ 150 ದಿನ ಪೂರೈಸೋ ಸನಿಹದಲ್ಲಿರೋ ದರ್ಶನ್‌ಗೆ ವಿಪರೀತ ಬೆನ್ನುನೋವು. ಹೀಗಾದಿ ದರ್ಶನ್ ಐದು ಕೆಜಿ ತೂಕವನ್ನೂ ಕೈಲಿ ಹಿಡಿದು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ.
ಬೆಂಕಿ-ಬಿರುಗಾಳಿಯಲ್ಲಿ ಕೆಲಸ ಮಾಡಿದ್ದೀನಾ; ಅವರೆಲ್ಲರ ಮುಂದೆ ನಾನೇನು ಮಹಾ?
ಬೆನ್ನು ನೋವಿಯಿಂದಾಗಿ ಸಾಕು ಸಾಕಾಗಿ ಹೋಗಿರೋ ದರ್ಶನ್ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಬಳ್ಳಾರಿ ವಿಮ್ಸ್‌ನಲ್ಲಿ ದರ್ಶನ್‌ಗೆ MRI ಸ್ಕ್ಯಾನಿಂಗ್ ಆಗಿದೆ. ಸ್ಕ್ಯಾನಿಂಗ್ ವೇಳೆ ಶಾಕಿಂಗ್ ವಿಷಯವೊಂದು ಗೊತ್ತಾಗಿದೆ. ದರ್ಶನ್‌ಗೆ L1 ಹಾಗೂ L5 ಭಾಗದಲ್ಲಿ ಲಂಬರ್ ಸ್ಪೈನ್ ಸಮಸ್ಯೆ ಇರೋದು ಪತ್ತೆಯಾಗಿದೆ. ಜಿಮ್ನಲ್ಲಿ 100 ಕೆಜಿ ಎತ್ತುತ್ತಿದ್ದ ದರ್ಶನ್ ಇನ್ನು ಮುಂದೆ ಜಸ್ಟ್ ಐದು ಕೆಜಿ ಭಾರವನ್ನೂ ಎತ್ತೋ ಹಾಗಿಲ್ಲ ಅಂತ ವೈದ್ಯರು ಹೇಳಿದ್ದಾರಂತೆ.
ದರ್ಶನ್ ಜೈಲಿಗೆ ಹೋದಾಗ ಅವರ ದರ್ಶನ್ ಫಿಟ್ನೆಸ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗಿತ್ತು. ಜೈಲಿನಲ್ಲಿ ಫಿಟ್ನೆಸ್ಗೆ ತೊಂದರೆ ಆಗಲ್ವಾ.? ಅದನ್ನ ದರ್ಶನ್ ಹೇಗೆ ಮ್ಯಾನೇಜ್ ಮಾಡುತ್ತಾರೆ..? ವರ್ಕ್ ಔಟ್ ಇಲ್ಲದ ದರ್ಶನ್ ಜಿಮ್ ಬಾಡಿ ಏನಾಗಿರುತ್ತೆ..? ಅಂತೆಲ್ಲಾ ಡಿಬೆಟ್ ಆಗಿತ್ತು. ಈಗ ದರ್ಶನ್‌ಗೆ ಐದು ಕೆಜಿ ಭಾರವನ್ನೂ ಎತ್ತಂಗಿಲ್ಲ ಅಂದ್ರೆ, ಜೈಲಲ್ಲಿ ದಾಸನ ಸ್ಥಿತಿ ಹೇಗಾಗಿರಬೇಕು ಹೇಳಿ. ಹೀಗಾಗಿ ದರ್ಶನ್ ಸರ್ಜರಿಗಾಗಿ ಬೆಂಗಳೂರಿಗೆ ಶಿಫ್ಟ್ ಆಗೋ ಸಾಧ್ಯತೆ ಇದೆ ಅಂತ ಹೇಳಲಾಗ್ತಿದೆ.
ಹೀರೋ ಮಕ್ಕಳ ವಿರುದ್ಧ ವಿಲನ್ ಮಕ್ಕಳು ತೊಡೆ ತಟ್ಟಿದ್ರಾ? ದರ್ಶನ್ 'ನವಗ್ರಹ' ಬಂದಿದ್ದು ಹೀಗಾ?!
ಒಟ್ಟಿನಲ್ಲಿ, ನಟ ದರ್ಶನ್ ಲೈಫಲ್ಲಿ ಅದೇನು ಆಗ್ತಾ ಇದೆಯೋ ದೇವರೇ ಬಲ್ಲ! ಹೇಗಿದ್ದವರು ಹೇಗಾದ್ರು ನೋಡಿ! ಪವತ್ರಾ ಗೌಡ ಸಹವಾಸ ಮಾಡಿ ಕೆಟ್ರೋ, ಅಥವಾ ಕೆಟ್ಟ ಮೇಲೆಯೇ ಅವರ ಸಹವಾಸ ಮಾಡಿದ್ರೋ!? ಈಗ ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನಿಂದ ನರಳುತ್ತಿರುವ ನಟ ದರ್ಶನ್ ಅವರಿಗೆ ಕರೆಯೋಣ ಎಂದರೆ ಪಕ್ಕದಲ್ಲಿ ಹೆಂಡತಿಯೂ ಇಲ್ಲ, ಸ್ನೇಹಿತೆಯೂ ಇಲ್ಲ.