ಹೀರೋ ಮಕ್ಕಳ ವಿರುದ್ಧ ವಿಲನ್ ಮಕ್ಕಳು ತೊಡೆ ತಟ್ಟಿದ್ರಾ? ದರ್ಶನ್ 'ನವಗ್ರಹ' ಬಂದಿದ್ದು ಹೀಗಾ?!
'ನವಗ್ರಹ' ಅಂದಕೂಡ್ಲೆ ಇಡೀ ಕನ್ನಡ ಸಿನಿಜಗತ್ತಿನ ಕಣ್ಣು-ಕಿವಿ ಅರಳಿ ಬಿಡುತ್ತೆ! ಯಾಕಂದ್ರೆ, ಈ ಸಿನಿಮಾ ದರ್ಶನ್ರನ್ನ ಚಿತ್ರರಂಗದ ವಿರುದ್ಧ ಸಿಟ್ಟಿಗೇಳಿಸಿದ್ದ ಚಿತ್ರ. ಅಂದು ತನ್ನ ಚಿತ್ರರಂಗದ ವಿರುದ್ಧ ತಾನೇ ಸಮರ ಸಾರಿದ್ದರು ನಟ ದರ್ಶನ್!
ನಟ ದರ್ಶನ್ (Darshan) ಬಗ್ಗೆ ಮತ್ತೊಂದು ಎಕ್ಸ್ಕ್ಲ್ಯೂಸೀವ್ ವಿಷಯ ಸಿಕ್ಕಿದೆ. ಇದನ್ನ ಕೇಳಿದ್ರೆ ದರ್ಶನ್ ಫ್ಯಾನ್ಸ್ ಗೆ ಖುಷಿ ಆಗಬಹುದು. ಆಶ್ಚರ್ಯನೂ ಪಡಬಹುದು. ನಮ್ ಬಾಸ್ ಹೀಗೆ ಮಾಡಬಾರದಿತ್ತು ಅಂತಾನೂ ಅನ್ನಿಸಬಹುದು. ಹಾಗಾದ್ರೆ ಏನದು ದರ್ಶನ್ರ ಆ ಕಹಾನಿ ಅಂತೀರಾ..? ಈ ಎಕ್ಸ್ಕ್ಲ್ಯೂಸೀವ್ ಡೀಟೇಲ್ಸ್ ಈ ಇಲ್ಲಿದೆ ನೋಡಿ..
ನಟ ದರ್ಶನ್ ಚಿತ್ರರಂಗಕ್ಕೆ ಬಂದು ಭರ್ತಿ 25 ವರ್ಷ ತುಂಬಿದೆ. ಈ 25 ವರ್ಷದಲ್ಲಿ ದರ್ಶನ್ ಸಾಧನೆ ದೊಡ್ಡದ್ದೇ ಇದೆ. ಕಾಂಟ್ರವರ್ಸಿಯಲ್ಲೂ ದರ್ಶನ್ ಕಿಂಗ್ ಅನ್ನೋದು ಗೊತ್ತಿರೋ ಕಥೆಯೇ.. ಒಂದ್ ಕಡೆ ಕೊಲೆ ಆರೋಪದಲ್ಲಿ ಜೈಲು ವಾಸದಲ್ಲಿರೋ ದರ್ಶನ್, ಮತ್ತೊಂದ್ ಕಡೆ ದರ್ಶನ್ ಜೈಲಿಂದ ಹೊರ ಬರಲಿ ಅಂತ ಕನವರಿಸುತ್ತಿರೋ ಫ್ಯಾನ್ಸ್.. ಈ ನೋವಿನ ಮಧ್ಯೆ ನಲಿವಿನ ವಿಚಾರ ಅಂದ್ರೆ ದರ್ಶನ್ ಡ್ರೀಮ್ ಪ್ರಾಜೆಕ್ಟ್ ಒಂದು ಮತ್ತೆ ತೆರೆ ಮೇಲೆ ರೀ ರಿಲೀಸ್ ಆಗುತ್ತಿದೆ. ಅದೇ ನವಗ್ರಹ ಸಿನಿಮಾ..
ಬರಲಿದೆ ಮತ್ತೊಂದು ಮಹಾ ಪ್ಯಾನ್ ಇಂಡಿಯಾ ಸಿನಿಮಾ ಅಮೀರ್-ಸೂರ್ಯ ಜೋಡಿಯ 'ಘಜನಿ-2'!
ವಿಪರೀತ ಬೆನ್ನು ನೋವು ನಟ ದರ್ಶನ್ರನ್ನ ಆಸ್ಪತ್ರೆಗೆ ತಂದಿದೆ. ಬಳ್ಳಾರಿ ಜೈಲು ವಾಸದಲ್ಲಿರೋ ದಾಸ, ಅಲ್ಲೇ ಕೂತುಕೊಂಡು ಫ್ಯಾನ್ಸ್ಗಾಗಿ ತನ್ನ ಕನಸಿನ ಸಿನಿಮಾ ನವಗ್ರಹವನ್ನ ಇದೇ ನವೆಂಬರ್ 8ನೇ ತಾರೀಖು ಮರು ಬಿಡುಗಡೆ ಮಾಡುತ್ತಿದ್ದಾರೆ. ಈ ವಿಷಯವನ್ನ ದರ್ಶನ್ ತಮ್ಮ ದಿನಕರ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.
ನವಗ್ರಹ ಅಂದ ಕೂಡ್ಲೆ ಇಡೀ ಕನ್ನಡ ಸಿನಿ ಜಗತ್ತಿನ ಕಣ್ಣು ಕಿವಿ ಅರಳಿ ಬಿಡುತ್ತೆ. ಯಾಕಂದ್ರೆ ಈ ಸಿನಿಮಾ ದರ್ಶನ್ರನ್ನ ಚಿತ್ರರಂಗದ ವಿರುದ್ಧ ಸಿಟ್ಟಿಗೇಳಿಸಿದ್ದ ಚಿತ್ರ. ತನ್ನ ಚಿತ್ರರಂಗದ ವಿರುದ್ಧ ತಾನೇ ಸಮರ ಸಾರುವಂತೆ ಮಾಡಿದ್ದ ಸಿನಿಮಾ..
2008ರಲ್ಲಿ ನವಗ್ರಹ (Navagraha) ಸಿನಿಮಾ ಬಂದಿತ್ತು. ಆ ಟೈಂನಲ್ಲಿ ಸ್ಯಾಂಡಲ್ವುಡ್ ತುಂಬಾ ನೆಪೊಟಿಸಂ ಬೆಂಕಿ ಹೊತ್ತಿತ್ತು. ಕನ್ನಡದಲ್ಲಿ ಹೀರೋಗಳು ಮಕ್ಕಳೇ ಹೀರೋಗಳಾಗುತ್ತಾ ಹೊಸ ಸಾಮ್ರಾಜ್ಯ ಕಟ್ಟುತ್ತಿದ್ದಾರೆ ಅಂತ ದೊಡ್ಡ ಟಾಕ್ ಆಗುತ್ತಿತ್ತು. ಕನ್ನಡದಲ್ಲಿ ದೊಡ್ಡ ದೊಡ್ಡ ವಿಲನ್ಗಳಿದ್ರೂ ಅವರ ಮಕ್ಕಳಿಗೆ ಹೀರೋ ಪಟ್ಟ ಕಟ್ಟೋಕೆ ಯಾವ ನಿರ್ದೇಶಕನೂ ಮನಸ್ಸು ಮಾಡುತ್ತಿಲ್ಲ ಅಂತ ಗಾಂಧಿನಗರ ಪಡಸಾಲೆಯಲ್ಲಿ ಭಾರಿ ಚರ್ಚೆ ಆಗುತ್ತಿತ್ತು. ಆಗ ಆ ಹೀರೋಗಳ ಮಕ್ಕಳ ವಿರುದ್ಧ ವಿಲನ್ಸ್ ಮಕ್ಕಳನ್ನ ಹೀರೋಗಳಾಗಿ ನಿಲ್ಲಿಸಿದ್ದೇ ನಟ ದರ್ಶನ್.
ಆ್ಯಕ್ಷನ್ ಜೊತೆ ಲವ್ನಲ್ಲೂ ಬಘೀರ ಹವಾ; ಮೋಡಿ ಮಾಡುತ್ತಾ ರುಕ್ಮಿಣಿ-ಶ್ರೀಮುರಳಿ ಜೋಡಿ?
ಹೀಗಾಗೆ ನವಗ್ರಹದಲ್ಲಿ ಕನ್ನಡದ ಟಾಪ್ ಮೋಸ್ಟ್ ವಿಲನ್ಸ್ ಮಕ್ಕಳು ಹೀರೋಗಳಾಗಿ ಬಂದಿದ್ರು..ಯೆಸ್, ಕನ್ನಡದ ಟಾಪ್ ಮೋಸ್ಟ್ ವಿಲನ್ಗಳಾದ ಸುಧೀರ್ ಮಗ ತರುಣ್ ಸುಧೀರ್, ಕೀರ್ತಿರಾಜ್ ಮಗ ಧರ್ಮಕೀರ್ತಿ ರಾಜ್, ಪ್ರಭಾಕರ್ ಮಗ ವಿನೋದ್ ಪ್ರಭಾಕರ್, ಲೋಕೇಶ್ ಮಗ ಸೃಜನ್ ಲೋಕೇಶ್, ತೂಗುದೀಪ್ ಶ್ರೀನಿವಾಸ್ ಮಗ ದರ್ಶನ್, ದಿನೇಶ್ ಮಗ ಗಿರಿ ದಿನೇಶ್, ಸುಂದರ್ ಕೃಷ್ಣ ಅರಸ್ ಮಗ ನಾಗೇಂದ್ರ ಅರಸ್ ನವಗ್ರಹದಲ್ಲಿ ಹೀರೋಗಳಾಗಿ ಮಿಂಚಿದ್ರು..
ಚಿತ್ರರಂಗದಲ್ಲಿ ಹೀರೋಗಳ ಮಕ್ಕಳೇ ಬೆಳಿತಾರೆ ಅಂತ ಸಿಡಿದೆದ್ದಿದ್ದ ದರ್ಶನ್ ತನ್ನ ತಮ್ಮ ದಿನಕರ್ರಿಂದಲೇ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿಸಿದ್ರು. ಈ ಸಿನಿಮಾ ಬಂದ ಮೇಲೆ ನಟ ದರ್ಶನ್ ಚಿತ್ರರಂಗದ ಬೇರೆ ಹೀರೋಗಳ ಜೊತೆ ಅಷ್ಟಾಗಿ ಬೆರೆಯದೇ ತನ್ನ ಸುತ್ತ ಹೊಸ ಗ್ಯಾಂಗ್ ಕಟ್ಟಿಕೊಂಡಿದ್ರು. ಸಪರೇಟ್ ಆಗಿ ಒಬ್ಬೊಂಟಿಯಾಗಿ ಇರೋ ಪ್ರಯತ್ನ ಮಾಡುತ್ತಿದ್ರು. ಅಷ್ಟರಲ್ಲೇ ದರ್ಶನ್ಗೆ ನಟ ಸುದೀಪ್ ಜೊತೆ ಸ್ನೇಹ ಬೆಳೆದಿತ್ತು.
ಕೆಜಿಎಫ್ ಹೆಸರು ಹೇಳಿ ಪ್ರಚಾರ ಮಾಡ್ತಿದ್ಯಾ ಪುಷ್ಪ-2 ತಂಡ: ಯಶ್ ಮೇಲೆ ಹೊಟ್ಟೆ ಉರಿನಾ?
ನವಗ್ರಹ ಸಿನಿಮಾ ನಟ ದರ್ಶನ್ರ ಮತ್ತೊಂದು ಮುಖವನ್ನ ಚಿತ್ರರಂಗಕ್ಕೆ ಇಂಟ್ರಡ್ಯೂಸ್ ಮಾಡಿತ್ತು. ತನ್ನ ಸುತ್ತಲು ಹೊಸ ಹುಡುಗರ ಗ್ಯಾಂಗ್ ಕಟ್ಟಿದ್ದ ದರ್ಶನ್ ಸುದೀಪ್ ಜೊತೆಗಿನ ಸ್ನೇಹ ಗಟ್ಟಿ ಮಾಡಿಕೊಂಡಿದ್ರು. ಇದರ ಜೊತೆ ವಿಲನ್ಗಳ ಮಕ್ಕಳು ಫ್ರೆಂಡ್ಸ್ ಅಂತ ಸುದೀರ್ ಮಕ್ಕಳಾದ ತರುಣ್ ಲೋಕೇಶ್ ಪುತ್ರ ಸೃಜನ್ ಲೋಕೇಶ್ ಜೊತೆ ಫ್ರೆಂಡ್ಶಿಪ್ ಸ್ಟ್ರಾಂಗ್ ಆಗಿತ್ತು.
ಆದ್ರೆ ದರ್ಶನ್ ನಡವಳಿಕೆ ಸುದೀಪ್ ಜೊತೆಗಿನ ಸ್ನೇಹ ಮಾತ್ರವಲ್ಲ, ಗಜ ಸೃಜ ಅಂತ ಫೇಮಸ್ ಆಗಿದ್ದ ಜೋಡಿ ಸೃಜನ್ ಹಾಗು ದರ್ಶನ್ ಮಧ್ಯೆಯೂ ಬಿರುಕು ತಂದಿತ್ತು.. ನಟ ದರ್ಶನ್ರ ಮುಂಗೋಪ ಇಂದು ಜೈಲು ವಾಸಕ್ಕೆ ತಂದು ನಿಲ್ಲಿಸಿದೆ. ಇದೇ ಮುಂಗೋಪ ಸ್ವಂತ ತಮ್ಮ ದಿನಕರ್ ಜೊತೆಗೂ ಕಿತ್ತಾಡಿಕೊಂಡು ಅಣ್ತಮ್ಮಂದಿರು ದೂರ ಆಗೋ ಹಾಗೆ ಮಾಡಿತ್ತು.
'ಕಲಾಸಿಪಾಳ್ಯ' ಡೈರೆಕ್ಟರ್ ಹೀಗಂದ್ರು: ಎಲ್ಲರ ಮನೆ ದೋಸೆನೂ ತೂತೇರಿ, ಯಾಕೆ ಇದೆಲ್ಲಾ ಬೇಕು?
ಇದು ನವಗ್ರಹ2 ಸಿನಿಮಾ ಮಾಡೋ ಪ್ಲ್ಯಾನ್ ನಲ್ಲಿದ್ದ ದಿನಕರ್ ಕನಸಿಗೆ ಬ್ರೇಕ್ ಹಾಕಿತ್ತು. ಈಗ ಅಣ್ಣ ದರ್ಶನ್ ನ ಜೈಲಿನಿಂದ ಬಿಡಿಸಲು ದಿನಕರ್ ಮತ್ತೆ ಬಂದಿದ್ದಾರೆ. ಇದೇ ಟೈಮ್ನಲ್ಲಿ ಈ ಅಣ್ತಮ್ಮಂದಿರ ನವಗ್ರಹ ಸಿನಿಮಾವನ್ನ ರೀ ರಿಲೀಸ್ ಮಾಡೋಕೆ ಜೈಲಿನಲ್ಲೇ ಕೂತು ದರ್ಶನ್ ಸ್ಕೆಚ್ ಹಾಕಿದ್ದಾರೆ. ಇದು ನವಗ್ರಹ2 ಸಿನಿಮಾಗೆ ನಾಂದಿ ಹಾಡುತ್ತಾ ಅಂತ ಕಾದು ನೋಡ್ಬೇಕಿದೆ.