Darshan CDP: ಫ್ಯಾನ್ಸ್‌ಗೆ ದರ್ಶನ್ 'ಸಿಡಿಪಿ' ಕೊಟ್ಟ ವಿಜಯಲಕ್ಷ್ಮೀ, ಆದ್ರೆ ಧನ್ವೀರ್ ಗೌಡ ಮಾಡಿದ್ದೇ ಬೇರೆ..!
ದರ್ಶನ್ ಧರ್ಮಪತ್ನಿ ವಿಜಯಲಕ್ಷ್ಮೀ ತಮ್ಮ ಪತಿ ಹಾಗೂ ನಟ ದರ್ಶನ್ ಅವರ ಸಿಡಿಪಿ ಹಂಚಿಕೊಂಡಿದ್ದಾರೆ..(ಸ್ಟೋರಿ ಒಳಗೆ ನೋಡಿ..!) ದರ್ಶನ್ ಫ್ಯಾನ್ಸ್ ನಾಳೆ ತಮ್ಮ ಬಾಸ್ ಬರ್ತ್‌ಡೇ ದಿನ ಸಿಡಿಪಿ ಹಾಕಿಕೊಂಡು ಖುಷಿ ಹಂಚಿಕೊಳ್ಳಲು..ಇನ್ನು, ನಟ ಹಾಗೂ ದರ್ಶನ್ ಆಪದ್ಭಾಂಧವ ಧನ್ವೀರ್ ಗೌಡ ಅದೇನು ಮಾಡಿದ್ದಾರೆ ಅಂದ್ರೆ..

ನಾಳೆ, ಅಂದರೆ ಫೆಬ್ರವರಿ 16ಕ್ಕೆ (February 16) ಕನ್ನಡದ ಸ್ಟಾರ್ ನಟ, ಅಭಿಮಾನಿಗಳಿಂದ 'D BOSS' ನಟ ದರ್ಶನ್ (Darshan) ಅವರ ಹುಟ್ಟುಹಬ್ಬ. ಕಳೆದ ಒಂದು ವಾರದ ಹಿಂದೆಯೇ ನಟ ದರ್ಶನ್ ಅವರು ಸ್ವತಃ ಅನಾರೋಗ್ಯದ ಕಾರಣ ಹೇಳಿ, ಈ ಬಾರಿ ತಾವು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಹೀಗಾಗಿ ಈ ಬಾರಿ ನಟ ದರ್ಶನ್ ಅವರ ಮುನೆಯ ಮುಂದೆ ಅಥವಾ ಎಲ್ಲೋ ಒಂದು ಕಡೆ ದರ್ಶನ್ ಅಭಿಮಾನಿಗಳು ಸೇರಲಾಗದು.
ಆದರೆ, ದರ್ಶನ್ ಅವರ ಧರ್ಮಪತ್ನಿ ವಿಜಯಲಕ್ಷ್ಮೀ ಅವರು ಪತಿ ಹಾಗೂ ನಟ ದರ್ಶನ್ ಅವರ ಸಿಡಿಪಿ ಹಂಚಿಕೊಂಡಿದ್ದಾರೆ. ದರ್ಶನ್ ಅಭಿಮಾನಿಗಳು ನಾಳೆ, ತಮ್ಮ ಬಾಸ್ ಬರ್ತ್‌ಡೇ ಸವಿನೆನಪಿಗಾಗಿ ಸಿಡಿಪಿ ಹಾಕಿಕೊಂಡು ಖುಷಿ ಹಂಚಿಕೊಳ್ಳಲು ಹಾಗೂ ಈ ಮೂಲಕ ನಟ ದರ್ಶನ್‌ಗೆ ತಮ್ಮ ಅಭಿಮಾನವನ್ನು ಮೆರೆಯಲು ಸಜ್ಜಾಗಿದ್ದಾರೆ. ಇನ್ನು, ನಟ ಹಾಗೂ ದರ್ಶನ್ ಆಪದ್ಭಾಂಧವ ಧನ್ವೀರ್ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಕಟೌಟ್ ಸಿಡಿಪಿ ಹಂಚಿಕೊಂಡು ಡೆವಿಲ್ ಬಾಸ್‌ಗೆ 'ಉಘೇ ಉಘೇ' ಎಂದಿದ್ದಾರೆ.
ಫ್ಯಾನ್ಸ್‌ಗೆ ದರ್ಶನ್ 'ಸಿಡಿಪಿ' ಕೊಟ್ಟ ವಿಜಯಲಕ್ಷ್ಮೀ, ಆದ್ರೆ ಧನ್ವೀರ್ ಗೌಡ ಮಾಡಿದ್ದೇ ಬೇರೆ..!
ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದು, ಅನಾರೋಗ್ಯದ ಕಾರಣದಿಂದ ಜಾಮೀನು ಪಡೆದಿದ್ದು ಎಲ್ಲವೂ ಈಗ ಹಳೆಯ ಸುದ್ದಿ. ಈಗೇನಿದ್ದರೂ ನಾಳೆ ಆಚರಿಸಲಿರುವ ದರ್ಶನ್ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳ ಆತುರ ಹಾಗೂ ಕಾತರದ ಕಾಲದ ಕ್ಷಣಗಣನೆ ಅಷ್ಟೇ. ನಾಳೆ ತಮ್ಮ ಫ್ಯಾನ್ಸ್ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸದೇ ಇದ್ದರೂ ಅವರದೇ ರೀತಿಯಲ್ಲಿ ಆಪ್ತರು ಹಾಗೂ ಫ್ಯಾಮಿಲಿ ಜೊತೆ ಸೆಲೆಬ್ರೇಶನ್ ಮಾಡಬಹುದು. ಅದೇನು ಅಂತ ನಾಳೆಯೇ ರಿವೀಲ್ ಆಗಲಿದೆ.
ಒಟ್ಟಿನಲ್ಲಿ, ನಟ ದರ್ಶನ್ ಹುಟ್ಟಹಬ್ಬಕ್ಕೆ ಅಭಿಮಾನಿಗಳು ರೆಡಿಯಾಗಿ ನಿಂತಿದ್ದಾರೆ. ಆದರೆ, ಅವರ ನಟನೆಯ ಮುಂಬರುವ ಸಿನಿಮಾ ಡೆವಲ್ ಟೀಸರ್ ಬಿಡುಗಡೆ ಆಗಿದೆ. ಫ್ಯಾನ್ಸ್‌ಗಳಿಗೆ ದರ್ಶನ್ ಅವರ ಹುಟ್ಟುಹಬ್ಬದ ಗಿಫ್ಟ್ ಎಂಬಂತೆ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಈ ಮೊದಲಿನ ಟೈಟಲ್ ಚೇಂಜ್ ಆಗಿದೆ.
ಈ ಮೊದಲು ದರ್ಶನ್ ನಟನೆಯ ಈ ಸಿನಿಮಾ ಟೈಟಲ್ 'ಡೆವಿಲ್- ದಿ ಹೀರೋ' ಎಂದಿತ್ತು. ಆದರೆ ಈಗ ಅದು ಸ್ವಲ್ಪ ಬದಲಾವಣೆ ಆಗಿ 'ದಿ ಡೆವಿಲ್' (The Devil) ಎಂದಷ್ಟೇ ಆಗಿದೆ. ಅಂದರೆ, 'ಡೆವಿಲ್' ಇದ್ದಿದ್ದು 'ದಿ ಡೆವಿಲ್' ಆಗಿದೆ, 'ದಿ ಹೀರೋ' ಕಂಪ್ಲೀಟ್ ಡಿಲೀಟ್ ಆಗಿದೆ. ಅಲ್ಲಿಗೆ ಈ ಚಿತ್ರದಲ್ಲಿ 'ಹೀರೋ' ಮಾಯವಾಗಿದ್ದಾನೆ. ಯಾಕೆ ಹೀಗೆ? ಗೊತ್ತಿಲ್ಲ..
'ನನ್ನ ಪ್ರೀತಿಯ ರಾಮು' ಬೇರೆ ನಟರು ರಿಜೆಕ್ಟ್ ಮಾಡಿದ್ಯಾಕೆ? ದರ್ಶನ್ ಸೂಚಿಸಿದ್ದು ಪುನೀತ್ ಮ್ಯಾನೇಜರ್!
ದಿ ಡೆವಿಲ್ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದ ಪಾತ್ರವರ್ಗದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ. ಮತ್ತೆ ಶೂಟಿಂಗ್ ಮುಂದುವರೆದ ಮೇಲೆ ಉಳಿದ ಪಾತ್ರವರ್ಗಗಳ ಬಗ್ಗೆ ರಿವೀಲ್ ಆಗಬಹುದು. ಕಳೆದ ವರ್ಷ ಈ ಚಿತ್ರದ ಮಹೂರ್ತದ ಬಳಿಕ ತೆರೆಗೆ ಬಂದಿದ್ದ ದರ್ಶನ್ ನಟನೆಯ ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸದ್ಯ ಡೆವಿಲ್ ದರ್ಶನ್ ನಟಿಸುತ್ತಿರುವ ಚಿತ್ರವಾಗಿದೆ.
ಈ ಚಿತ್ರದಲ್ಲಿ ನಟ ದರ್ಶನ್ ಸ್ವಲ್ಪ ನೆಗೆಟಿವ್ ಪಾತ್ರದಲ್ಲಿ ನಟಿಸುತ್ತಾರೆ ಎನ್ನಿಸುತ್ತಿದೆ. ಕಾರಣ ಚಿತ್ದ ಟೈಟಲ್, ಡೆವಿಲ್. ಆದರೆ, ಸಿನಿಮಾದ ಕಥೆ ಗೊತ್ತಿಲ್ಲ, ಹೀಗಾಗಿ ಅದನ್ನು ನಿಖರವಾಗಿ ಹೇಳಲು ಅಸಾಧ್ಯ. ಅಂದಹಾಗೆ, ಸರೆಗಮ ಮ್ಯೂಸಿಕ್ ಸಂಸ್ಥಗೆ ಈ ಚಿತ್ರದ ಆಡಿಯೋ ರೈಟ್ಸ್ ಸೇಲ್ ಆಗಿದೆ. ಹೀಗಾಗಿ ಸಾರೆಗಮ ಯೂಟ್ಯೂಬ್ ಚಾನೆಲ್ ಈ ಟೀಸರ್ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಟೈಟಲ್ ಬದಲಾವಣೆ ಗಮನಿಸಲಾಗಿದೆ.
ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್

