ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್
ವಿಷ್ಣುವರ್ಧನ್ ತಾಯಿಗೆ ಅಂಬರೀಷ್ ಅಂದ್ರೆ ಪಂಚಪ್ರಾಣ ಆಗಿತ್ತು. ವಿಷ್ಣು ತಾಯಿ ತೀರಿಕೊಂಡಾಗ ಅಂಬರೀಷ್ ಅವರು ತಮ್ಮ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಬಂದಿದ್ದರು. ಅವರಿಬ್ಬರೂ ಒಂದೇ ತಾಯಿಯ ಮಕ್ಕಳಂತೆ ಇದ್ದರು. ನಟ ವಿಷ್ಣುವರ್ಧನ್ ಅವರ ವೃತ್ತಿಜೀವನ ಹಾಗೂ ವೈಯಕ್ತಿಕ..

'ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆ ವ್ಯಕ್ತಿ ಮಾತ್ರ ಖಂಡಿತ ಬಂದೇ ಬರ್ತಾರೆ' ಅಂತ ನಟ ವಿಷ್ಣುವರ್ಧನ್ ಧೈರ್ಯವಾಗಿ ಹೇಳಿದ್ದರು. ಹಾಗೇ ಆಯ್ತು ಕೂಡ. ನಟ ವಿಷ್ಣುವರ್ಧನ್ (Vishnuvardhan) ಸತ್ತಾಗ ಅವರ ಅಂತಿಮ ಕಾರ್ಯಗಳನ್ನು, ಸ್ವಂತ ತಮ್ಮನಂತೆ ಮುಂದೆ ನಿಂತು ಮಾಡಿದ್ದು ಅದೇ ನಟ. ಅವರಿಬ್ಬರೂ ಬದುಕಿದ್ದಾಗ ಕೂಡ ತುಂಬಾ ಅನ್ಯೋನ್ಯವಾಗಿದ್ದರು. ಅವರನ್ನು ಚಿತ್ರರಂಗದ ಹೊರಗೂ ಒಳಗೂ 'ಕುಚಿಕೂ' ಅಂತಾನೇ ಕರೀತಾ ಇದ್ರು. ಬಹುಶಃ ಈಗ ಇದು ಯಾರ ಸ್ಟೋರಿ ಅಂತ ಯಾರಿಗೂ ಬಿಡಿಸಿ ಹೇಳಬೇಕಿಲ್ಲ!
ಹೌದು, ಅದು ಕನ್ನಡದ ರೆಬಲ್ ಸ್ಟಾರ್ ಖ್ಯಾತಿಯ ನಟ ಅಂಬರೀಷ್ (Ambareesh). ನಟ ವಿಷ್ಣುವರ್ಧನ್ ಅವರು ಕನ್ನಡದ ಇನ್ನೊಬ್ಬರು ಮೇರು ನಟರ ಅಭಿಮಾನಿಗಳಿಂದ ಸಾಕಷ್ಟು ಕಿರುಕುಳ ಅನುಭವಿಸಿದಾಗ, ಅವರಿಂದ ಹಲ್ಲೆಗೆ ಒಳಗಾದಾಗ, ಕೊಲೆ ಬೆದರಿಕೆಗಳನ್ನು ಎದುರಿಸಿದಾಗ ಸಹಾಯಕ್ಕೆ ನಿಂತಿದ್ದು ನಟ ಅಂಬರೀಷ್. ನಟ ವಿಷ್ಣುವರ್ಧನ್ ಅವರು ' ಆಪ್ತಮಿತ್ರ, ಆಪ್ತ ರಕ್ಷಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಸ್ವತಃ ನಟ ವಿಷ್ಣುವರ್ಧನ್ ಬಾಳಿನಲ್ಲಿ 'ಆಪ್ತಮಿತ್ರ ಹಾಗೂ ಆಪ್ತ ರಕ್ಷಕ ಆಗಿದ್ದವರು ನಟ ಅಂಬರೀಷ್ ಅನ್ನೋದು ಬಹುತೇಕ ಎಲ್ಲರಿಗೂ ಗೊತ್ತು.
ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್
ಹೌದು, ನಟ ವಿಷ್ಣು ಹಾಗೂ ಅಂಬಿ ಇಬ್ಬರದೂ ಜಾತಿ ಬೇರೆ, ನೀತಿ ಕೂಡ ಬೇರೆ. ನೀತಿ ಅಂದ್ರೆ ಬದುಕಿನ ರೀತಿನೀತಿ. ನಟ ವಿಷ್ಣುವರ್ಧನ್ ಅವರದು ಶಿಸ್ತಿನ ಸಿಪಾಯಿ ತರಹದ ಜೀವನ ಆಗಿತ್ತು. ಆದರೆ, ನಟ ಅಂಬರೀಷ್ ಅವರದು ಹಾಗಲ್ಲ, ತದ್ವಿರುದ್ಧ ಎನ್ನಬಹುದಾದ ಬಿಂದಾಸ್ ಜೀವನ. ಅವರು ಏಳುವುದು, ಮಲಗುವುದು, ತಿನ್ನೋದು ಕುಡಿಯೋದು ಯಾವುದರಲ್ಲೂ ಒಂದು ಶಿಸ್ತುಬದ್ಧ ಕ್ರಮ ಇರಲಿಲ್ಲ. ಆದರೆ, ಕಲಿಯುಗ ಕರ್ಣ ಎಂಬ ಹೆಸರು ಪಡೆದಿದ್ದ ಅಂಬರೀಷ್ ಅವರು ಸಹಾಯ ಮಾಡೋದ್ರಲ್ಲಿ ಯಾವಾಗ್ಲೂ ಮುಂದೆ ಇರ್ತಾ ಇದ್ರು.
ವಿಷ್ಣುವರ್ಧನ್ ತಾಯಿಗೆ ಅಂಬರೀಷ್ ಅಂದ್ರೆ ಪಂಚಪ್ರಾಣ ಆಗಿತ್ತು. ವಿಷ್ಣು ತಾಯಿ ತೀರಿಕೊಂಡಾಗ ಅಂಬರೀಷ್ ಅವರು ತಮ್ಮ ಶೂಟಿಂಗ್ ಕ್ಯಾನ್ಸಲ್ ಮಾಡಿಕೊಂಡು ಬಂದಿದ್ದರು. ಅವರಿಬ್ಬರೂ ಒಂದೇ ತಾಯಿಯ ಮಕ್ಕಳಂತೆ ಇದ್ದರು. ನಟ ವಿಷ್ಣುವರ್ಧನ್ ಅವರ ವೃತ್ತಿಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ನಟ ಅಂಬರೀಷ್ ಅವರ ಪಾತ್ರ ತುಂಬಾ ದೊಡ್ಡದು. ವಿಷ್ಣು ಖುಷಿಯಲ್ಲೇ ಇರಲಿ ಅಥವಾ ದುಃಖದಲ್ಲೇ ಇರಲಿ, ಅಂಬರೀಷ್ ಅವರು ಸದಾ ಜೊತೆಯಾಗಿ ಇರುತ್ತಿದ್ದರು. ಅವರಿಬ್ಬರೂ ಹೈಹಿಕವಾಗಿ ಎಲ್ಲಿಯೇ ಇರಲಿ, ಸದಾ ಪರಸ್ಪರ ಮಾತುಕತೆಯಲ್ಲಿ ಇರ್ತಾ ಇದ್ರು.
ವಿಷ್ಣು ಮಂಚು 'ಕಣ್ಣಪ್ಪ' ಹಾಡು ಬಿಡುಗಡೆ ಮಾಡಿ ಹರಸಿದ ಶ್ರೀ ಶ್ರೀ ರವಿಶಂಕರ್ ಗುರೂಜಿ
ಒಟ್ಟಿನಲ್ಲಿ ಹೇಳಬೇಕು ಅಂದ್ರೆ, ನಟ ವಿಷ್ಣುವರ್ಧನ್ ಅವರಿಗೆ ಕೊಲೆ ಬೆದರಿಕೆಗಳು ಬಂದಾಗ, ಕಲ್ಲು ತೂರಾಟ ನಡೆದಾಗ ಜೊತೆಯಲ್ಲಿ ಇದ್ದು ಸಹಾಯಹಸ್ತ ಚಾಚಿದ್ದು ಇದೇ ಅಂಬಿ. ಕೆಲವು ವೈಕ್ತಿಕ ದ್ವೇಷಕ್ಕೆ ಸಿಲುಕಿ ನಟ ವಿಷ್ಣುವರ್ಧನ್ ಜೀವಕ್ಕೆ ಅಪಾಯವಿದೆ ಎಂದಾಗಲೂ ಮುಂದೆ ನಿಂತು ಹೋರಾಡಿದ್ದು ಇದೇ ಅಂಬರೀಷ್. 'ಅಂಬಿ ಯಾವತ್ತೂ ರಿಯಲ್ ಹೀರೋ' ಅಂತಿದ್ದು ವಿಷ್ಣುವರ್ಧನ್. ಹಾಗೇ, 'ಅಂಬರೀಷ್ ಒಂದು ಆರ್ಗನೈಸ್ಡ್ ಜೀವನ ನಡೆಸಿದ್ರೆ ಇನ್ನೂ ತುಂಬಾ ಚೆನ್ನಾಗಿ ಇರ್ತಾರೆ' ಅಂದಿದ್ದರು ನಟ ವಿಷ್ಣುವರ್ಧನ್.

