ದೀಪಾವಳಿ ಹಬ್ಬಕ್ಕೆ ಜ್ಯೂ.ರೆಬೆಲ್ ಧಮಾಕ: 'ಬ್ಯಾಡ್ ಮ್ಯಾನರ್ಸ್' ಟ್ರೇಲರ್ ಬಿಡುಗಡೆ ಮಾಡಲಿದ್ದಾರೆ ದರ್ಶನ್!
ಹಬ್ಬ ಹಬ್ಬ.. ಸ್ಯಾಂಡಲ್ವುಡ್ ಮಂದಿಗಂತು ಈ ದೀಪಾವಳಿ ಹಬ್ಬ ಭರ್ಜರಿ. ದೀಪಗಳ ಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಊದುತ್ತವೆ ತುತ್ತೂರಿ. ಇದರ ಜೊತೆಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಕೂಡ ಭರ್ಜರಿ ಧಮಾಕವೊಂದನ್ನ ಹೊತ್ತು ತರುತ್ತಿದ್ದಾರೆ.

ಹಬ್ಬ ಹಬ್ಬ.. ಸ್ಯಾಂಡಲ್ವುಡ್ ಮಂದಿಗಂತು ಈ ದೀಪಾವಳಿ ಹಬ್ಬ ಭರ್ಜರಿ. ದೀಪಗಳ ಹಬ್ಬಕ್ಕೆ ಸಾಲು ಸಾಲು ಸಿನಿಮಾಗಳು ಚಿತ್ರಮಂದಿರದಲ್ಲಿ ಊದುತ್ತವೆ ತುತ್ತೂರಿ. ಇದರ ಜೊತೆಗೆ ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಶೇಕ್ ಅಂಬರೀಶ್ ಕೂಡ ಭರ್ಜರಿ ಧಮಾಕವೊಂದನ್ನ ಹೊತ್ತು ತರುತ್ತಿದ್ದಾರೆ. ಅದೇ ಹಬ್ಬದ ದಿನವೇ ಸಿಡಿಯುತ್ತಿರೋ ಬ್ಯಾಡ್ ಮ್ಯಾನರ್ಸ್ ಪಟಾಕಿ. ಅಂಬಿ ಪುತ್ರ ಅಭಿಷೇಕ್ ನಟಿಸಿರೋ ಬ್ಯಾಡ್ ಮ್ಯಾನರ್ಸ್ ಮೇಲೆ ಭಾರಿ ನಿರೀಕ್ಷೆ ಇದೆ. ಯಾಕಂದ್ರೆ ಇದು ಮಾಸ್ ಡೈರೆಕ್ಟರ್ ಸಕ್ಸಲ್ ಫುಲ್ ಸಿನಿಮಾಗಳನ್ನ ಕೊಟ್ಟಿರೋ ಸೂರಿ ನಿರ್ದೇಶನದಲ್ಲಿ ಸಿದ್ಧವಾಗಿರೋ ಸಿನಿಮಾ.
ಸೂರಿ ಅಭಿ ಸೇರಿ ಮ್ಯಾಜಿಕ್ ಮಾಡೋದು ಪಕ್ಕಾ ಅಂದಿವೆ ಬ್ಯಾಡ್ ಮ್ಯಾನರ್ಸ್ನ ಹಾಡು ಟೀಸರ್ ಇತ್ಯಾದಿ ಇತ್ಯಾದಿ. ಇದೀಗ ಬ್ಯಾಡ್ ಮ್ಯಾನರ್ಸ್ ಟ್ರೈಲರ್ ನೋಡೋಗೆ ಟೈಮ್ ಸೆಟ್ ಆಗಿದೆ. ದೀಪಾವಳಿ ಹಬ್ಬದ ನರಕ ಚತುರ್ತಿ ದಿನ ನವೆಂಬರ್ 12 ರಂದು ಬ್ಯಾಡ್ ಮ್ಯಾನರ್ಸ್ ಟ್ರೈಲರ್ ರಿಲೀಸ್ ಆಗುತ್ತೆ. ಅಭಿಷೇಕ್ ಅಂಬರೀಸ್ ಸುಮಲತಾ ಅಂದ್ರೆ ನಟ ದರ್ಶನ್ಗೆ ಸ್ಪೆಷಲ್ ಫೀಲಿಂಗ್. ಅಭಿ ನಟ ದರ್ಶನ್ರದ್ದು ಅಣ್ತಮ್ಮಂದಿರ ಸಂಬಂಧ. ಹೀಗಾಗೆ ಬ್ಯಾಡ್ ಮ್ಯಾನರ್ಸ್ ಟ್ರೈಲರ್ ಅನ್ನ ನಟ ದರ್ಶನ್ ಬಿಡುಗಡೆ ಮಾಡುತ್ತಿದ್ದಾರೆ. ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟಿ ರಚಿತಾ ರಾಮ್ ಸುಮಲತಾ, ನಿರ್ದೇಶಕ ಸೂರಿ ಸುಮಲತಾ ಕುಟುಂಬದ ಆಪ್ತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸ್ಪೆಷಲ್ ಗೆಸ್ಟ್ ಆಗಿರ್ತಾರಂತೆ.
ದೊಡ್ಡ ಸ್ಕೇಲ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಬ್ಯಾಡ್ ಮ್ಯಾನರ್ಸ್. ಪಕ್ಕಾ ಕಮರ್ಷಿಯಲ್ ಎಲೆಮಿಂಟ್ಸ್ಗಳು ಈ ಸಿನಿಮಾದಲ್ಲಿದೆ ಅಂತ ಮೇಕಿಂಗ್ ನೋಡಿದ್ರೆ ಗೊತ್ತಾಗುತ್ತೆ. ಕಲ್ಲು ಕೋರೆಗಳ ಮಧ್ಯೆ, ಬಡಿದಾಟ, ವಾಮಾಚಾರದ ಲಿಂಗ್ ಇದೆ. ರವಿವರ್ಮಾ ಸಾಹಸ ಬ್ಯಾಡ್ ಮ್ಯಾನರ್ಸ್ನ ಹೈಲೆಟ್ಗಳಲ್ಲೊಂದು. ಅಭಿ ಇಲ್ಲಿ ಪೊಲೀಸ್ ಕಾಪ್.. ಪ್ರಿಯಾಂಕಾ ಕುಮಾರ್ ಮತ್ತು ರಚಿತಾ ರಾಮ್ ಹೀರೋಯಿನ್ ಆಗಿದ್ದಾರೆ. ಚಿತ್ರಕ್ಕೆ ಕೆ.ಎಂ.ಸುಧೀರ್ ಬಂಡವಾಳ ಹೂಡಿದ್ದಾರೆ. ಶೇಖರ್ ಎಸ್ ಕ್ಯಾಮೆರಾ ಕುಸುರಿ ಚರಣ್ ರಾಜ್ ಸಂಗೀತ ಬ್ಯಾಡ್ ಮಾನ್ಯರ್ಸ್ಗೆ ಪವರ್ ಕೊಟ್ಟಿದೆ.
ಬ್ಯಾಡ್ ಮ್ಯಾನರ್ಸ್‌ನಲ್ಲಿ ಕಾಣ್ತಿದೆ ಸುಕ್ಕ ಸೂರಿ ಕಿಕ್: ಅಭಿಷೇಕ್ ಚಿತ್ರಕ್ಕೆ ಮಾಸ್ ಹಾಡು ಬರೆದ ಜಯಂತ್ ಕಾಯ್ಕಿಣಿ
ಈ ಸಿನಿಮಾದ ಫಸ್ಟ್ ಲುಕ್, ಟೀಸರ್ಗೆ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಈ ಸಿನಿಮಾಗೆ ಸುಮಾರು ನೂರಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ. ಇನ್ನು ನಟ ಅಭಿಷೇಕ್ ಅಂಬರೀಷ್ ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಚಿತ್ರಕ್ಕೆ ನಾಗಶೇಖರ್ ನಿರ್ದೇಶನ ಮಾಡಿದ್ದರು. ಆ ಚಿತ್ರದ ಹಾಡುಗಳು ಸೂಪರ್ ಹಿಟ್ ಆದವು. ಈಗ ಬ್ಯಾಡ್ ಮ್ಯಾನರ್ಸ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಸಿನಿಮಾ ಜೊತೆಗೆ ಅಯೋಗ್ಯ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಹೊಸ ಚಿತ್ರವನ್ನು ಕೂಡ ಅಭಿಷೇಕ್ ಒಪ್ಪಿಕೊಂಡಿದ್ದಾರೆ. ಇನ್ನು ಕೃಷ್ಣ ನಿರ್ದೇಶನದ ಕಾಳಿ ಚಿತ್ರಕ್ಕೂ ಅಭಿಷೇಕ್ ಹೀರೋ ಆಗಿದ್ದಾರೆ.