ಪಶ್ಚಾತ್ತಾಪದ ಬಳಿಕವೂ ಬದಲಾಗಿಲ್ಲ ದರ್ಶನ್: ಶಾಕಿಂಗ್ ಸತ್ಯ ಘಟನೆ ಬಿಚ್ಚಿಟ್ಟ ಜೈಲಾಧಿಕಾರಿ ಸತೀಶ್!

ನಟ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪರ ಅಗ್ರಹಾರ ಜೈಲು ಸೇರಿದ್ದಾರೆ. 13 ವರ್ಷದ ಹಿಂದೆಯೂ ಅವರು ಅದೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. 

Darshan Thoogudeepa Has No Repentance Said Ex Jail Officer Satish gvd

ಅವತ್ತು ಹೋಗ್ ಬರ್ತೀನಿ ಅಂದಿದ್ದ ದರ್ಶನ್! ಮತ್ತೆ ಜೈಲಿಗೆ  ಬಂದ್ರು! ನಟ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪರಪ್ಪರ ಅಗ್ರಹಾರ ಜೈಲು ಸೇರಿದ್ದಾರೆ. 13 ವರ್ಷದ ಹಿಂದೆಯೂ ಅವರು ಅದೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ನಟಿ ನಿಖಿತ ಜೊತೆಗಿನ ಅನೈತಿಕ ಸಂಬಂಧ ಕಾರಣ ಪತ್ನಿ ವಿಜಯಲಕ್ಷ್ಮೀ ದರ್ಶನ್ ಅವರನ್ನು ಮಾರಣಾಂತಿಕವಾಗಿ ಹೊಡೆದು ಆಗಲೂ 28 ದಿನಗಳ ಕಾಲ ಜೈಲು ವಾಸ ಅನುಭವಿಸಿ ಬಂದಿದ್ದರು. ಆಗ ಜೈಲಧಿಕಾರಿಯಾಗಿದ್ದ ಸತೀಶ್, ದರ್ಶನ್ ಬಗ್ಗೆ ಮಾತನಾಡಿದ್ದು, ಆತನ ವ್ಯಕ್ತಿತ್ವದಲ್ಲಿ ಬದಲಾವಣೆ ಆಗಿಲ್ಲ. ಆತನಿಗೆ ಪಶ್ಚಾತ್ತಾಪ ಎಂಬುದು ಇಲ್ಲ ಎಂದಿದ್ದಾರೆ. 

ಅಷ್ಟೆ ಅಲ್ಲದೆ ದರ್ಶನ್ ಆಗ ಮಾತನಾಡಿದ್ದಂತೆ ಆಗಿದೆ.. ಎಂದಿದ್ದಾರೆ. ಸತೀಷ್ ಅವರ ವೀಡಿಯೋ ಈಗ ವೈರಲ್ ಆಗುತ್ತಿದೆ. ದರ್ಶನ್ ಬದಲಾಗಲಿಲ್ಲ ಹಳೆಯ ಚಾಳಿ ಮತ್ತೆ ಮುಂದುವರೆಸಿದ್ದಾರೆ  ಎನ್ನುತ್ತಿದ್ದಾರೆ ನಿವೃತ್ತ ಜೈಲಆಧಿಕಾರಿ ಸತೀಶ್ ಅವರು. 2011 ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ  ದರ್ಶನ್ ಜೈಲು ಸೇರಿದ್ದರು. ಆಗ ಸುಮಾರು ಒಂದು ತಿಂಗಳ ಕಾಲ ದರ್ಶನ್ ಜೈಲಿನಲ್ಲಿದ್ದರು. ಆಗ ಜೈಲಧಿಕಾರಿ ಆಗಿದ್ದ ಸತೀಶ್ ಅವರ ಬಳಿ ಮಾತನಾಡಿದ್ದ ದರ್ಶನ್, ‘ಆಗ ಹೆಂಡತಿ ಬಳಿ ಕ್ಷಮೆ ಕೇಳ್ತೀನಿ, ಮತ್ತೆಂದೂ ಹೀಗೆ ಮಾಡುವುದಿಲ್ಲಇನ್ಮುಂದೆ ಇಂತಹ ತಪ್ಪು ಮಾಡಲ್ಲ’ ಎಂದಿದ್ದರಂತೆ. 

ಆದರೆ ದರ್ಶನ್ ವರ್ತನೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂದು ಗುರುತಿಸಿದ್ದಾರೆ ನಿವೃತ್ತ ಜೈಲಧಿಕಾರಿ ಸತೀಶ್. ಮ್ತತದೇ ಹಳೇ  ದರ್ಶನ್ ವ್ಯಕ್ತಿತ್ವ ನೋಡುತ್ತಿದ್ದೇವೆ ಎಂದಿದ್ದಾರೆ. ಇನ್ನು ಸಾಮಾನ್ಯ ಜೈಲಿಗೆ ಬರೋ ಖೈದಿಗಳು ಶಿಕ್ಷೆ ಮುಕ್ತಾಯವಾಗಿ ಬಿಡುಗಡೆಯಾಗಿ ಹೋಗುವಾಗ ಹೋಗ್ತೀನಿ ಅಂತಾರೆ ಆದ್ರೆ ದರ್ಶನ್ ಈ ಹಿಂದೆ ಜೈಲಿಗೆ ಹೋದಾಗ ಹೋಗ್ ಬರ್ತೀನಿ ಅಂದಿದ್ರಂತೆ. ಅದರಂತೆ ಈಗ ಮತ್ತೆ ಹೋಗಿ ಬಂದಿದ್ದಾರೆ. ಇದು ವಿಧಿಬರಹವೋ ಕಾಕತಾಳಿವೋ ಅಎನ್ನುತ್ತಾರೆ ನಿವೃತ್ತ ಅಧಿಕಾರ ಸತೀಶ್. ಇನ್ನು ದರ್ಶನ್ ಮನೆ ಊಟ ಬೇಕೆಂದು ಬೇಡಿಕೆ ಇಟ್ಟಿರುವ ಬಗ್ಗೆ ಮಾತನಾಡಿರುವ ನಿವೃತ್ತ ಅಧಿಕಾರಿ ಸತೀಶ್, ‘ಆ ಸೌಲಭ್ಯವನ್ನು ಕೊಡದೇ ಇರುವುದು ಒಳಿತು, ಆ ಸೌಲಭ್ಯ ಸಿಗುವುದಿಲ್ಲ ಎಂದೇ ನಾನು ಭಾವಿಸಿದ್ದೇನೆ. 

ಅತಂತ್ರ ಸ್ಥಿತಿಯಲ್ಲಿ ದರ್ಶನ್ ನಂಬಿದ ನಿರ್ಮಾಪಕರು: ಕೋಟಿ ಕೋಟಿ ಹಾಕಿ ಹಣ ಕೈ ಸುಟ್ಟುಕೊಂಡ್ರಾ?

ಒಂದೊಮ್ಮೆ ದರ್ಶನ್ಗೆ ಆಹಾರ ಕೊಟ್ಟರೆ ಜೈಲಿನಲ್ಲಿರುವ ಎಲ್ಲರೂ ಮನೆ ಊಟವನ್ನೇ ಕೇಳುತ್ತಾರೆ’ ಎಂದಿದ್ದಾರೆ ಅವರು. ಜೈಲಿನಲ್ಲಿ ದರ್ಶನ್ಗೆ ವಿಐಪಿ ಸೌಲಭ್ಯಗಳನ್ನು ನೀಡಲಾಗುತ್ತಿದೆಯೇ? ಎಂಬ ಪ್ರಶ್ನೆಗೆ ‘ಜೈಲಿನಲ್ಲಿ ಯಾವುದೇ ರೀತಿಯ ವಿಐಪಿ ಟ್ರೀಟ್ಮೆಂಟ್ ಯಾರಿಗೂ ಸಿಗುವುದಿಲ್ಲ. ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಬೇಕು, ಎಂದಿದ್ದಾರೆ. ಅದರಂತೆ ದರ್ಶನ್ ಪರಿಸ್ಥಿತಿಯೂ ಸೇಮ್ ಟು ಸೇಮ್ ಸತೀಶ್ ಅವರು ಹೇಳಿದಂತೆಯೇ ಆಗಿದೆ. ಒಟ್ಟಿನಲ್ಲಿ ದರ್ಶನ್ ಗೆ ಮತ್ತೆ ನಿರಾಸೆ, ಆತಂಕ ದುಃಖ ಮುಂದುವರೆದಿದೆ. ಚಾರ್ಜ್ ಶೀಟ್ ಸಲ್ಲಿಸೋವರೆಗೆ ಈ ನರಕಯಾತನೆ ಹೀಗೆ ಮುಂದುವರೆಯಲಿದ್ದು, ಮುಂದೆಯೂ ಕೇಸ್ ಎಂಥಾ ಸಮಸ್ಯೆಯನ್ನು ತಂದೊಡ್ಡುತ್ತದೆಯೋ ಕಾದು ನೋಡಬೇಕು.

Latest Videos
Follow Us:
Download App:
  • android
  • ios