Asianet Suvarna News Asianet Suvarna News

300 ಚಿತ್ರಮಂದಿರಗಳಲ್ಲಿ ಕಾಟೇರ ಬಿಡುಗಡೆ: ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ನಲ್ಲಿ 1 ಕೋಟಿ ಬಾಚಿದ ದರ್ಶನ್ ಸಿನಿಮಾ!

ನಟ ದರ್ಶನ್ ಅಭಿಮಾನಿಗಳು 'ಕಾಟೇರ' ಸಿನಿಮಾದ ಜಪ ಮಾಡುತ್ತಿದ್ದಾರೆ. ಇದೇ ಶುಕ್ರವಾರ ಕಾಟೇರ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕಾಟೇರ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. 

Darshan Starrer Kaatera advance ticket booking starts gvd
Author
First Published Dec 27, 2023, 8:15 PM IST

ನಟ ದರ್ಶನ್ ಅಭಿಮಾನಿಗಳು 'ಕಾಟೇರ' ಸಿನಿಮಾದ ಜಪ ಮಾಡುತ್ತಿದ್ದಾರೆ. ಇದೇ ಶುಕ್ರವಾರ ಕಾಟೇರ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕಾಟೇರ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೂಡ ಶುರುವಾಗಿದೆ. ಕಾಟೇರ ಸಿನಿಮಾ ರಾಜ್ಯಾದ್ಯಂತ 300ಕ್ಕು ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಈ ವರ್ಷದ ಕೊನೆಯಲ್ಲಿ ಬರೋ ಕನ್ನಡದ ಕೊನೇ ಸಿನಿಮಾ ಕಾಟೇರ.. ಹೀಗಾಗಿ ಈಯರ್ ಎಂಡ್ ಅನ್ನ ಕಾಟೇರ ಸಿನಿಮಾ ನೋಡ್ತಾ ಎಂಜಾಯ್ ಮಾಡೋಕೆ ಸಿನಿ ಪ್ರೇಕ್ಷಕ ಪ್ಲ್ಯಾನ್ ಮಾಡಿಕೊಂಡಿದ್ದಾರೆ. 

ಹೀಗಾಗಿ ಕಾಟೇರ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಕೌಂಟರ್ ಓಪನ್ ಆಗ್ತಿದ್ದಂತೆ ಟಿಕೆಟ್ಗಳು ಸೋಲ್ಡ್ ಔಟ್ ಆಗೋಕು ಶುರುವಾಗಿದೆ. ತರುಣ್ ಸುಧೀರ್ ನಿರ್ದೇಶನದ ಕಾಟೇರ ಮಾಸ್ ಎಂಟರ್ಟೈನರ್ ಸಿನಿಮಾ. ಕನಸಿನ ರಾಣಿ ಮಾಲಾಶ್ರೀ ಮಗಳು ಆರಾಧನಾ ನಾಯಕಿಯಾಗಿ ಡೆಬ್ಯೂ ಆಗ್ತಿರೋ ಮೂವಿ. ಈ ಸಿನಿಮಾದಲ್ಲಿರೋ ದೊಡ್ಡ ಸ್ಟಾರ್ ಕಾಸ್ಟ್ ಕಾಟೇರ ಸಿನಿಮಾ ಮೇಲಿನ ಎಕ್ಸ್ಪಟೇಷನ್ಸ್ಅನ್ನ ಹೆಚ್ಚಿಸಿದೆ. ಕುಮಾರ್ ಗೋವಿಂದ್, ಶ್ರುತಿ, ಜಗಪತಿ ಬಾಬು, ಅಚ್ಯುತ್ ಕುಮಾರ್, ವಿನೋದ್ ಆಳ್ವ, ಅವಿನಾಶ್, ಬಿರಾದಾರ್ ನಟಿಸಿದ್ದು, ಕಾಟೇರ ಸಿನಿಮಾ ನೋಡೋಕೆ ಪ್ರೇಕ್ಷಕ ಮುಗಿ ಬೀಳುತ್ತಿದ್ದು ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ನಲ್ಲಿ ಕಾಟೇರ 1 ಕೋಟಿ ಗಳಿಸಿದೆ. 

ಈ ಶುಕ್ರವಾರ ತೆರೆಗೆ ಬರೋ ಕಾಟೇರ ಸಿನಿಮಾ ಶೋ ಆರಂಭ ಆಗೋದು ಮಧ್ಯರಾತ್ರಿಯಿಂದಲೇ. ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಆ ದಿನ ಮಧ್ಯರಾತ್ರಿಯಿಂದಲೇ ಕಾಟೇರ ಪ್ಯಾನ್ಸ್ ಶೋ ಶುರುವಾಗುತ್ತೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬೆಳಗಿನ ಜಾವ 5 ಗಂಟೆಗೆ ಪ್ರದರ್ಶನ ಇದೆ. ಈ ಸಿನಿಮಾಗೆ ಬೇಡಿಕೆ ಬರುತ್ತಿರೋದ್ರಿಂದ ಕೆಲವು ಕಡೆ ಫ್ಯಾನ್ಸ್ ಶೋ ಟಿಕೆಟ್ ಧರ ಒಂದು ಸಾವಿರಿ ರೂಪಾಯಿಗೆ ಹೆಚ್ಚಿದೆ. 

Kaatera: ನಾನು ಕೂಡ ದರ್ಶನ್ ದೊಡ್ಡ ಫ್ಯಾನ್: ಸುಮಲತಾ ಅಂಬರೀಶ್

ರಾಕ್ಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಸಿನಿಮಾ ಅದ್ಧೂರಿ ಸ್ವಾಗತಕ್ಕೆ ಕೌಟ್ ಡೌನ್ ಸ್ಟಾರ್ಟ್ ಆಗಿದೆ. ಬೆಂಗಳೂರಿನ ಹಲವು ಚಿತ್ರಮಂದಿರಗಳ ಎದುರು ಕಾಟೇರನ ಕಟೌನ್ ನಿಂತಿದ್ದು, ಆಲ್ ಶೋಸ್ ಬುಕ್ ಆಗಿ ಗ್ರ್ಯಾಂಡ್ ಓಪನಿಂಗ್ ಆಗ್ತಿದೆ. ವಿಶೇಷ ಅಂದ್ರೆ ಇದೇ ಫಸ್ಟ್ ಟೈಂ ಬುಕ್ಮೈ ಶೋನಲ್ಲಿ 50 ಸಾವಿರ ಟಿಕೆಟ್ಗಳು ಒಂದೇ ದಿನದಲ್ಲಿ ಬುಕ್ ಆಗಿವೆ. ಹೀಗಾಗಿ ಕಾಟೇರ ಸಿನಿಮಾ ಫಸ್ಟ್ ಗ್ರ್ಯಾಂಡ್ ಆಗಿ ಬಿಗ್ ಸ್ಕ್ರೀನ್ ಮೇಲೆ ಬರಲಿದೆ. ಆ ಬಳಿಕ ಸಿನಿಮಾವನ್ನ ಗೆಲ್ಲಿಸಿ ನಿಲ್ಲಿಸೋ ಕೆಲಸ ಪ್ರೇಕ್ಷಕನಿಗೆ ಬಿಟ್ಟಿದ್ದು.

Follow Us:
Download App:
  • android
  • ios