Asianet Suvarna News Asianet Suvarna News

Kaatera: ನಾನು ಕೂಡ ದರ್ಶನ್ ದೊಡ್ಡ ಫ್ಯಾನ್: ಸುಮಲತಾ ಅಂಬರೀಶ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಪ್ರೀ ರಿಲೀಸ್ ಮಂಡ್ಯದಲ್ಲಿ ಅಪಾರ ಜನಸಾಗರದ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು. 
 

I am also a big fan of Darshan Says Sumalatha Ambareesh At Mandya gvd
Author
First Published Dec 24, 2023, 1:27 PM IST

ಮಂಡ್ಯ (ಡಿ.24): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಪ್ರೀ ರಿಲೀಸ್ ಮಂಡ್ಯದಲ್ಲಿ ಅಪಾರ ಜನಸಾಗರದ ಸಮ್ಮುಖದಲ್ಲಿ ಶನಿವಾರ ಅದ್ದೂರಿಯಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಮಂಡ್ಯ ಸಂಸದೆ, ನಟಿ ಸುಮಲತಾ ಅಂಬರೀಶ್ ‘ಕಾಟೇರ’ ಚಿತ್ರದ ‘ನನ್ನ ಮಣ್ಣು ನನ್ನ ಹಕ್ಕು’ ಎಂಬ ರೈತಗೀತೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸುಮಲತಾ, ‘ಮಂಡ್ಯದಲ್ಲಿ ಏನೇ ಮಾಡಿದರು ಅದೊಂದು ಇತಿಹಾಸ. ಕಾಟೇರ ಚಿತ್ರ ಬಿಡುಗಡೆಯಾದ ನಂತರ ಅದು ಕೂಡ ಯಶಸ್ಸಿನಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. 

ನಾನು ಕೂಡ ದರ್ಶನ್ ಅವರ ದೊಡ್ಡ ಫ್ಯಾನ್. ಅವರ ನಟನೆ, ಆ್ಯಕ್ಷನ್, ಡಾನ್ಸ್ ಎಲ್ಲವೂ ನನಗೆ ಇಷ್ಟ’ ಎಂದು ಹೇಳಿದರು. ಖ್ಯಾತ ಗಾಯಕಿ ಮಂಗ್ಲಿ ‘ಪಸಂದಾಗವ್ನೆ’ ಹಾಡಿನ ಸಾಲುಗಳನ್ನು ಹಾಡಿ ರಂಜಿಸಿದರು. ಚಿತ್ರದ ನಾಯಕ ದರ್ಶನ್, ನಾಯಕಿ ಆರಾಧನಾ ರಾಮ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ಅಭಿಷೇಕ್ ಅಂಬರೀಶ್, ಶಾಸಕ ಪಿ.ರವಿಕುಮಾರ್, ಕೆ ಎಮ್ ಉದಯ್, ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಇದ್ದರು.

ಸ್ಟಾರ್ ಆಗಲಿ, ಸ್ಟಾರ್ ಇಲ್ಲದೇ ಇರಲಿ‌ ಸಿನಿಮಾ‌ ದೊಡ್ಡದು: 'ಕಾಟೇರ' ಚಿತ್ರದ ಬಗ್ಗೆ ದರ್ಶನ್ ಹೀಗೆ ಹೇಳಿದ್ಯಾಕೆ?

ನನ್ನ ಮಣ್ಣು ನನ್ನ ಹಕ್ಕು ಹಾಡು ಬಿಡುಗಡೆ: ರೈತ ದಿನಾಚರಣೆಯಂದೇ ರೈತರಿಗೆ ಸಂಬಂಧಿಸಿದ ಹಾಡು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಹಾಡು ಬಿಡುಗಡೆ ವೇಳೆ ಮೊಬೈಲ್ ಚಾರ್ಜ್ ಆನ್ ಮಾಡಿ ಅಭಿಮಾನಿಗಳು ಸಂಭ್ರಮಿಸಿದರು. ಶಿಳ್ಳೆ, ಚಪ್ಪಾಳೆ, ಕೂಗುತ್ತಾ ದರ್ಶನ್ ಅಭಿಮಾನಿಗಳು ಹರ್ಷೋದ್ಗಾರ ಮೊಳಗಿಸಿದರು.
 


ಕಾಟೇರ ವಿತರಣೆ ಹಕ್ಕು ಪಡೆದ ನಿರ್ದೇಶಕ ಗುರು ದೇಶಪಾಂಡೆ: ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಮತ್ತೆ ಸಿನಿಮಾ ವಿತರಣೆ ಇಳಿದಿದ್ದಾರೆ. ದರ್ಶನ್‌ ಅಭಿನಯದ ‘ಕಾಟೇರ’ ಸಿನಿಮಾದ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿನ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ ಮತ್ತೆ ಸಿನಿಮಾ ವಿತರಣೆಗೆ ಮುಂದಾಗಿದ್ದಾರೆ. ತರುಣ್‌ ಸುಧೀರ್ ನಿರ್ದೇಶಿಸಿ, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿರುವ, ಆರಾಧನಾ ನಾಯಕಿಯಾಗಿ ನಟಿಸಿರುವ ಸಿನಿಮಾ ಡಿ.29ಕ್ಕೆ ತೆರೆಗೆ ಬರುತ್ತಿದೆ. ಗುರು ದೇಶಪಾಂಡೆ ಈ ಹಿಂದೆ ಕನ್ನಡ, ಪರಭಾಷೆ ಸಿನಿಮಾಗಳನ್ನು ಸೇರಿ ಅನೇಕ ಸಿನಿಮಾಗಳ ವಿತರಣೆ ಮಾಡಿದ್ದಾರೆ.

ಅಡ್ವಾನ್ಸ್‌ ಬುಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ: ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾಗೆ ಅಡ್ವಾನ್ಸ್‌ ಬುಕಿಂಗ್ ತೆರೆದ ಮೊದಲ ದಿನವೇ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಕೆಲವು ಥಿಯೇಟರ್‌ಗಳಲ್ಲಿ ಟಿಕೆಟ್‌ ಸೋಲ್ಡ್‌ಔಟ್‌ ಆಗಿವೆ.

ರೆಡ್ ಡ್ರೆಸ್​ನಲ್ಲಿ ಕಾಟೇರ ಕ್ವೀನ್: ಆರಾಧನಾ ಬೋಲ್ಡ್ ಅವತಾರಕ್ಕೆ ಅರ್ಧಂಬರ್ಧ ಬಟ್ಟೆಗಳನ್ನು ಹಾಕಬೇಡಿ ಎಂದ ಫ್ಯಾನ್ಸ್‌!

ಪಸಂದಾಗವ್ನೆ ಹಾಡಿಗೆ ಭಾರಿ ಮೆಚ್ಚುಗೆ: ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಸಿನಿಮಾದ ‘ಪಸಂದಾಗವ್ನೆ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯೂಟ್ಯೂಬ್‌ನಲ್ಲಿ ನಂ.1 ಟ್ರೆಡಿಂಗ್‌ನಲ್ಲಿದ್ದು, ಕೇವಲ 24 ಗಂಟೆಗಳಲ್ಲಿ 9 ಮಿಲಿಯನ್‌ಗೂ ಅಧಿಕ ವೀಕ್ಷಣೆ ದಾಖಲಿಸಿದೆ. ವಿ ಹರಿಕೃಷ್ಣ ಸಂಗೀತ ನಿರ್ದೇಶನದ ಈ ಹಾಡಿಗೆ ಚೇತನ್‌ ಕುಮಾರ್ ಸಾಹಿತ್ಯವಿದೆ. ದಕ್ಷಿಣ ಭಾರತೀಯ ಸಿನಿಮಾಗಳ ಜನಪ್ರಿಯ ಗಾಯಕಿ ಮಂಗ್ಲಿ ದನಿಯಾಗಿದ್ದಾರೆ. ಮಾಲಾಶ್ರೀ ಮಗಳು ಆರಾಧನಾ ಹೆಜ್ಜೆ ಹಾಕಿದ್ದಾರೆ. ರಗಡ್‌ ಲುಕ್‌ನಲ್ಲಿ ದರ್ಶನ್‌ ಕಾಣಿಸಿಕೊಂಡಿದ್ದಾರೆ. 70ರ ದಶಕದ ಉಡುಗೆ, ಆ ಕಾಲಘಟ್ಟದ ಶೈಲಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಕಾಟೇರ ಡಿ.29ರಂದು ಬಿಡುಗಡೆಯಾಗಲಿದ್ದು, ರಾಕ್‌ಲೈನ್ ವೆಂಕಟೇಶ್‌ ನಿರ್ಮಿಸಿದ್ದಾರೆ.

Follow Us:
Download App:
  • android
  • ios