ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ನಿರೀಕ್ಷೆ ಮೂಡಿಸಿ ಗಮನ ಸೆಳೆಯುವುದು ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಸಿನಿಮಾಗಳು. ಅದರಲ್ಲೂ ದಿನೇ ದಿನೇ ವಿಶೇಷ ವಿಚಾರಗಳ ಮೂಲಕ ಸುದ್ದಿಯಾಗುತ್ತಿರುವುದು 'ರಾಬರ್ಟ್‌' .

ತರುಣ್‌ ಸುಧೀರ್ ನಿರ್ದೇಶನದ, ಉಮಾಪತಿ ನಿರ್ಮಾಣದ 'ರಾಬರ್ಟ್‌' ಚಿತ್ರದಲ್ಲಿ ಬಾಕ್ಸ್‌ ಆಫೀಸ್‌ ಸುಲ್ತಾನ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವುದು ಆಶಾ ಭಟ್.  ಡಿಸೆಂಬರ್‌ 25 ರಂದು ರಿವೀಲ್‌ ಆದ ಫಸ್ಟ್ ಲುಕ್‌ ಪೋಸ್ಟರ್‌ನಲ್ಲಿ ಡಿ-ಬಾಸ್‌ ಕೈಯಲ್ಲಿ ಗನ್‌ ಹಿಡಿದು ನಿಂತಿದ್ದಾರೆ. ವೈರಲ್‌ ಪೋಸ್ಟರ್‌ನಲ್ಲಿ ಒಂದು ರಹಸ್ಯ ಅಡಗಿದೆ.

 

ಇದರ ಬಗ್ಗೆ ಶ್ಯಾಮ್‌ ಪ್ರಸಾದ್‌ ಎಂಬ ವ್ಯಕ್ತಿಯೊಬ್ಬ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಪೋಸ್ಟರ್‌ನಲ್ಲಿ ಸಣ್ಣದಾಗಿ ಇಂಗ್ಲಿಷ್‌ ಸಾಲುಗಳನ್ನು ಹೊಂದಿದೆ. ಆ ಸಾಲುಗಳನ್ನು ಚಾರ್ಲ್ಸ್‌ ಎ ಜಾನ್ಸನ್‌ (Charles A johnson) ಬರೆದಿರುವುದು ಎನ್ನಲಾಗಿದೆ.  

ಈಗಾಗಲೇ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದ್ದು ಯೂಟ್ಯೂಬ್‌ನಲ್ಲಿ ಟ್ರೆಂಡ್‌ ಆಗುತ್ತಿದೆ. ಚಿತ್ರ ಏಪ್ರಿಲ್‌ 9 ರಂದು ತೆರೆ ಕಾಣಲು ಸಜ್ಜಾಗುತ್ತಿದೆ.