ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ 44ನೇ ಹುಟ್ಟುಹಬ್ಬದ ಪ್ರಯುಕ್ತ ರಾಬರ್ಟ್ ಟೀಸರ್ ಬಿಡುಗಡೆ ಮಾಡಲಾಗಿದೆ.  ಆನಂದ್ ಆಡಿಯೋ ಯುಟ್ಯೂಬ್‌ ಚಾನೆಲ್‌ನಲ್ಲಿ ನೀವು ನೋಡಿದ್ದಾರಾ?

ರಾಜ್ಯದ ಕೃಷಿ ಇಲಾಖೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ರಾಯಭಾರಿ 

ವಿಲನ್ ಬಾಯಾರೆ ಮಾಸ್‌ ಡೈಲಾಗ್‌ ಹೇಳಿಸುವ ಮೂಲಕ ದರ್ಶನ್‌ ಎಂಟ್ರಿ ಕಾಣಬಹುದು. 'ಮನುಷ್ಯನಿಗೆ ಎರಡು ಸತಿ ಮೈ ನಡುಗುತ್ತೆ ಒಂದು ತುಂಬಾ ಚಳಿ ಆದಾಗ ಇನ್ನೊಂದು ತುಂಬಾ ಭಯ ಆದಾಗ' ಎಂಬ ಪಂಚ್ ಡೈಲಾಗ್‌ ಹೇಳುವ ಮೂಲಕ ಬಹುಭಾಷಾ ನಟ ಜಗಪತಿ ಬಾಬು ಪಾತ್ರ ಪರಿಚಯವಾಗುತ್ತದೆ. ಚಿತ್ರದಲ್ಲಿ ರವಿಶಂಕರ್, ದೇವರಾಜ್‌, ಅವಿನಾಶ್‌ ಕೂಡ ಅಭಿನಯಿಸಿದ್ದಾರೆ. ನಟಿ ಆಶಾ ಭಟ್‌ ಬಬ್ಲಿ ಲುಕ್‌ ಕೂಡ ರಿವೀಲ್ ಆಗಿದೆ. 

ಟ್ರೈಲರ್‌ ಮೂಲಕ ಚಿತ್ರಕತೆ ಬಗ್ಗೆ ಕುತೂಹಲ ಹೆಚ್ಚಿಸಿರುವ ತರುಣ್ ಸುಧೀರ್ ಪ್ರೇಕ್ಷಕರ ಅಭಿಪ್ರಾಯ ತಿಳಿದುಕೊಳ್ಳಲು ಕಾತುರರಾಗಿದ್ದಾರೆ. ಟ್ರೈಲರ್‌ನಲ್ಲಿ ದರ್ಶನ್‌ಗೆ ಪಾತ್ರದಲ್ಲಿ ಮಾತ್ರವಲ್ಲ ಖಳನಾಯಕನ ಪಾತ್ರಕ್ಕೂ ಅಷ್ಟೇ ಕ್ಲಾಸಿ ಆಂಡ್ ಮಾಸಿ ಡೈಲಾಗ್‌ ನೀಡಲಾಗಿದೆ. ನೀರೋಳಗೆ ರಕ್ತದ ಮುಖ ಹದ್ದಿ ಕಣ್ಣಬಿಡುವ ದರ್ಶನ್‌ ಮೂಲಕ ಟ್ರೈಲರ್ ಅಂತ್ಯವಾಗುತ್ತದೆ. 

ದರ್ಶನ್ ಹುಟ್ಟುಹಬ್ಬಕ್ಕೂ ಮುನ್ನವೇ ವೈರಲ್ ಆಯ್ತು ಕಾಮನ್ ಡಿಪಿ! 

ಚಿತ್ರದ ಬಗ್ಗೆ ಇಡೀ ತಂಡ ಮಾತ್ರವಲ್ಲ ದರ್ಶನ್ ಅಭಿಮಾನಿಗಳು ಸಾಕಷ್ಟು ಬರವಸೆ ಹೊಂದಿದ್ದಾರೆ. ಈಗಾಗಲೆ ಚಿತ್ರಮಂದಿರಗಳು ಶೇ.100 ಅನುಮತಿ ಪಡೆದರೂ ವೀಕ್ಷಕರ ಕಡಿಮೆ. ರಾಬರ್ಟ್‌ ರಿಲೀಸ್‌ ಮೂಲಕ ಹೌಸ್‌ಫುಲ್‌ ಪ್ರದರ್ಶನದ ಬೋರ್ಡ್‌ ನೋಡಬಹುದು ಎಂಬುವುದು ನಮ್ಮೆಲ್ಲರ ನಂಬಿಕೆ.