ಫೆ.16ರಂದು  44ನೇ ವಸಂತಕ್ಕೆ ಕಾಲಿಡುತ್ತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಬರ್ತ್‌ಡೇ ಸೆಲೆಬ್ರೇಷನ್‌ಗೆ ನೋ ಎಂದು ಈ ಹಿಂದೆಯೇ ಲೈವ್‌ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಡಿ-ಬಾಸ್‌ ಕ್ರೇಜಿ ಫ್ಯಾನ್ಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರೇಟ್ ಮಾಡಬೇಕೆಂದು ನಿರ್ಧರಿಸಿದ್ದಾರೆ. ಇದರ ಸಲುವಾಗಿ ಕಾಮನ್ ಡಿಪಿ ಕ್ರಿಯೇಟ್ ಮಾಡಲಾಗಿದೆ.

ರಾಬರ್ಟ್ ತೆಲುಗು ಡಬ್ಬಿಂಗ್ ರೈಟ್ಸ್ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಗೊತ್ತಾ? 

'ಬಾಸ್ ಪವರ್' ಎಂಬ ಹೆಸರಿನಲ್ಲಿ ಡಿ-ಬಾಸ್ ಬರ್ತ್‌ಡೇ ಸಂಭ್ರಮಿಸಲಾಗುತ್ತಿದೆ. ಕ್ಯಾಮೆರಾ ಹಿಡಿದು ದರ್ಶನ್ ಕುಳಿತಿದ್ದರೆ ಸುತ್ತಲೂ ಸಿಂಹ, ಹುಲಿ, ಆನೆ, ಜಿರಾಫೆ ಹಾಗೂ ವಿಧವಾದ ಪಕ್ಷಗಳನ್ನು ನೋಡಬಹುದು. ತುಂಬಾನೇ ವಿಭಿನ್ನವಾಗಿರುವ ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾರ್ಚ್ 11 ಬಿಡುಗಡೆಯಾಗುತ್ತಿರುವ ರಾಬರ್ಟ್‌ ಚಿತ್ರದ ಟೀಸರ್‌ನ್ನು ದರ್ಶನ್‌ ಹುಟ್ಟುಹಬ್ಬದ ದಿನ  ಬಿಡುಗಡೆ ಮಾಡಲಾಗುತ್ತಿದೆ. ಇದರ ಜೊತೆಗೆ ತಮ್ಮ ಮುಂದಿನ ಸಿನಿಮಾ ಪ್ರಾಜೆಕ್ಟ್‌ಗಳ ಬಗ್ಗೆಯೂ ಘೋಷಣೆ ಮಾಡುವ ಸಾಧ್ಯತೆಗಳಿವೆ. ಕೊರೋನಾ ಕಾಟದಿಂದ ನೋ ಸೆಲೆಬ್ರೇಷನ್‌ ಎಂದು ಹೇಳಿರುವ ದರ್ಶನ್‌ ಎಲ್ಲಿರುತ್ತಾರೆ ಎಂದು ಅಭಿಮಾನಿಗಳು ಹುಡುಕುವ ಅಗತ್ಯವಿಲ್ಲ ಯಾಕೆಂದರೆ ಇದಕ್ಕೆ ಡಿ-ಬಾಸ್‌ ಒಂದು ಪ್ಲಾನ್ ಕೊಟ್ಟಿದ್ದಾರೆ. ಯಾರೆಲ್ಲಾ ಬಾಸ್ ಬರ್ತ್‌ಡೇ ಆಚರಿಸಬೇಕು ಎಂದು ನಿರ್ಧರಿಸಿದ್ದೀರಾ ನೀವೆಲ್ಲರೂ ನೀವಿರುವ ಸ್ಥಳದಿಂದ ಶುಭ ಹಾರೈಸಿ ಹಾಗೂ ಕೊರೋನಾದಿಂದ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರಿಗೆ ಸಹಾಯ ಮಾಡಿ ಎಂದು ಹೇಳಿದ್ದಾರೆ.