ನಟ ದರ್ಶನ್ ಈ ಹಿಂದೆ ನಿರ್ದೇಶಕ ಪ್ರೇಮ್ ಅವರನ್ನು 'ಪುಡಾಂಗ್' ಎಂದು ಕರೆದಿದ್ದರು. ಈಗ ನಟ ಸುದೀಪ್ ಕೂಡ ಸಿಸಿಎಲ್ ಪಂದ್ಯದ ವೈರಲ್ ವಿಡಿಯೋಗೆ ಪ್ರೇಮ್ ಅವರೇ ಗುರು ಎಂದು ತಮಾಷೆ ಮಾಡಿದ್ದಾರೆ.  

ನಟ ದರ್ಶನ್​​​ ಜೈಲಲ್ಲಿದ್ರು ಮತ್ತೆ ಮತ್ತೆ ನೆನಪಾಗ್ತಾನೆ ಇದ್ದಾರೆ. ಅದಕ್ಕೆ ಕಾರಣ ದಾಸನ ಆ ಮಾತು. ನಡವಳಿಕೆಗಳು. ಲೈಫ್​​ ಕೊಟ್ಟ ಡೈರೆಕ್ಟರ್​​ ಅನ್ನೇ ಪುಡಾಂಗ್ ಅಂದಿದ್ದ ದರ್ಶನ್​​ ಅಂದು ಭಾರಿ ಚರ್ಚೆ ಹುಟ್ಟುಹಾಕಿದ್ರು. ಆ ಮಾತುಗಳು ಈಗ ಮತ್ತೆ ನೆನಪಾಗ್ತಿವೆ. ಆದ್ರೆ ಈ ಭಾರಿ ಅದಕ್ಕೆ ಕಾರಣ ಆಗಿದ್ದು ಬಾದ್ ಷಾ ಕಿಚ್ಚ ಸುದೀಪ್. ಹಾಗಾದ್ರೆ ಏನಿದು ಪ್ರೇಮ್​ ದರ್ಶನ್​-ಸುದೀಪ್​ ಮಧ್ಯೆ ನಡೆಯೋ ಮಾತಿನ ಕತೆ. ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಕಹಾನಿ.

ಪ್ರೇಮ್​ ವ್ಯಕ್ತಿತ್ವಕ್ಕೆ ಕಂಟಕವಾದ್ರಾ ಇಬ್ಬರು ಸ್ಟಾಸ್ಟ್?

ನಟ ದರ್ಶನ್ ಜೈಲು ಸೇರಿದ್ದಾಗಿದೆ. ಕೊಲೆ ಕೇಸಿನಿಂದ ತಪ್ಪಿಸಿಕೊಂಡು ಹೊರ ಬಂದ್ರೆ ಸಾಕಾಗಿದೆ. ಇಂತಹ ದರ್ಶನ್ ಹೇಳಿದ್ದ ಅದೊಂದು ಮಾತು ಮತ್ತೆ ಮತ್ತೆ ನೆನಪಾಗ್ತಿದೆ. ಅದೇ ಪ್ರೇಮ್​ ಏನು ದೊಡ್ಡ ಪುಡಾಂಗ ಅನ್ನೋ ಕೋಪದ ಮಾತು. ಯೆಸ್, 2021ರಲ್ಲಿ 25 ಕೋಟಿ ರೂಪಾಯಿ ಫೇಕ್ ಲೋನ್ ಪ್ರಕರಣದಿಂದ ಶುರುವಾದ ದರ್ಶನ್ ವಿವಾದ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್‌ಗೆ ಹೊಡೆದ ಆರೋಪದವರೆಗೂ ಬಂತು ನಿಂತಿತ್ತು. ಈ ಬಗ್ಗೆ ತಮ್ಮ ಫಾರ್ಮ್ ಹೌಸ್‌ನಲ್ಲಿ ಪ್ರತಿಕ್ರಿಯೆ ಕೊಡುವಾಗ ನಿರ್ದೇಶಕ 'ಜೋಗಿ' ಪ್ರೇಮ್ ಬಗ್ಗೆ ದರ್ಶನ್ ಲಗುವಾಗಿ ಮಾತನಾಡಿದ್ರು. ಪ್ರೇಮ್ ಏನು ದೊಡ್ಡ ಪುಡಾಂಗಾ? ಎರಡು ಕೊಂಬ್​ ಐತಾ ಅಂತೆಲ್ಲಾ ಹೇಳಿದ್ರು.

ದರ್ಶನ್​ ಬಳಿಕ ಪ್ರೇಮ್‌ಗೆ ಕಿಚಾಯಿಸಿದ ಕಿಚ್ಚ!

ನಟ ಕಿಚ್ಚ ಸುದೀಪ್ ಹಾಗು ಜೋಗಿ ಪ್ರೇಮ್​ ಆತ್ಮೀಯ ಸ್ನೇಹಿತರು. ಆದ್ರೆ ಅದಕ್ಕೂ ಮೊದಲು ಕಿಚ್ಚ ಸುದೀಪ್‌​​ಗೆ ಪ್ರೇಮ್ ಗುರುವಾಗಿದ್ದಾರೆ. ಅದು ಹೇಗೆ ಅಂದ್ರೆ, ಸಿಸಿಎಲ್ ಪಂದ್ಯ ಆಡೋವಾಗ ಕಿಚ್ಚ ಬೌಲರ್‌ಗೆ ಕೆಟ್ಟ ಭಾಷೆಯಲ್ಲಿ ಬೈದು ಬುದ್ದಿ ಹೇಳಿದ್ರು. ಸುದೀಪ್ ಬೈದಿದ್ದ ಆ ವಿಡಿಯೋ ಸಖತ್ ವೈರಲ್ ಆಗಿತ್ತು. ಆದ್ರೆ ಆ ಬೈಗುಳ ಕಿಚ್ಚನ ಬಾಯಲ್ಲಿ ಬರೋದಕ್ಕೆ ಗುರು ಪ್ರೇಮ್​​ ಅಂತ ಸುದೀಪ್​​ ಅವರೇ ಓಪನ್ ಸ್ಟೇಟ್​ಮೆಂಟ್ ಕೊಟ್ಟಿದ್ದಾರೆ.

ಅಷ್ಟಕ್ಕೂ ಪ್ರೇಮ್‌ರನ್ನು ಕಿಚ್ಚ ಎಲ್ಲರೆದುರು ಕಾಲ್ ಎಳೆಯೋಕೆ ಕಾರಣನೇ ಪ್ರೇಮ್. ಕಿಚ್ಚ ಕ್ರಿಕೆಟ್ ಗ್ರೌಂಡ್​ನಲ್ಲಿ ಆಡಿದ್ದ ಮಾತನ್ನ ಕಾರ್ಯಕ್ರಮದಲ್ಲಿ ಪ್ರೇಮ್​​ ಹೇಳಿದ್ರು. ಸುದೀಪ್​​ ನಮ್ಮ ಟ್ರ್ಯಾಕ್​​ಗೆ ಬಂದಿದ್ದಾರೆ ಅಂದಿದ್ರು. ಇದಕ್ಕೆ ಕಿಚ್ಚ ಪ್ರೇಮ್‌ಗೆ ಅಲ್ಲೇ ಕೌಂಟರ್​ ಕೊಟ್ಟಿದ್ದು..

ಜೋಗಿ ಪ್ರೇಮ್​​​​ ನಟ ದರ್ಶನ್​ ಹಾಗು ಕಿಚ್ಚ ಸುದೀಪ್‌ಗೆ ಅತ್ಯಾತ್ಮೀಯ. ಈ ಇಬ್ಬರು ಜೋಡೆತ್ತುಗಳು ಪ್ರೇಮ್​ ಬಗ್ಗೆ ಏನೇ ಮಾತಾಡಿದ್ರು. ಗಟ್ಟಿ ಮನಸ್ಸು ಮಾಡಿ ತಡೆದುಕೊಂಡು ಆಗಿದ್ದಾಯ್ತು ಅಂತ ಮುಂದೆ ಹೋಗ್ತಾರೆ ಪ್ರೇಮ್​. ಹೀಗಾಗೆ ದರ್ಶನ್​​​​​ ಪ್ರೇಮ್‌ಗೆ ಏನ್ ದೊಡ್ಡ ಪುಡಾಂಗ ಅಂತ ಹೇಳಿದ್ಮೇಲೂ ಸಿನಿಮಾ ಮಾಡೋದಕ್ಕೆ ಕಥೆ ರೆಡಿ ಮಾಡಿದ್ರು ಪ್ರೇಮ್​..

2024ರ ಅಗಸ್ಟ್‌ನಲ್ಲಿ ಸೆಟ್ಟೇರಬೇಕಿತ್ತು ಪ್ರೇಮ್-ದರ್ಶನ್​ ಚಿತ್ರ!

ದರ್ಶನ್​​ ಪ್ರೇಮ್‌ಗೆ ಪುಡಾಂಗ್ ಅಂದಿದ್ದು 2021ರಲ್ಲಿ. ಅಂದು ಭಾರಿ ನೊಂದುಕೊಂಡಿದ್ದ ಪ್ರೇಮ್​ ಕಾಲೆಳೆಯುವುದು, ಕಿಂಡಲ್ ಮಾಡುವ ಅವಶ್ಯಕತೆ ಇಲ್ಲ ಅಂತ ದರ್ಶನ್‌ಗೆ ನೇರವಾಗೇ ಹೇಳಿದ್ರು. ಕೊನೆಗೆ ದಚ್ಚು ಸ್ನೇಹಿತೆ, ಪ್ರೇಮ್ ಪತ್ನಿ ರಕ್ಷಿತಾ ಇಬ್ಬರ ಮಧ್ಯೆ ಬಂದು ಸಂದಾನ ಮಾಡಿದ್ರು. ಆಗ ಪ್ರೇಮ್​ ಮತ್ತೆ ದರ್ಶನ್​​ ಜೊತೆ ಸೇರಿ ಸಿನಿಮಾ ಮಾಡೋದಕ್ಕೆ ತಯಾರಿ ಮಾಡಿದ್ರು. 2024ರ ಅಗಸ್ಟ್​ನಲ್ಲಿ ಆ ಚಿತ್ರ ಸೆಟ್ಟೇರಬೇಕಿತ್ತು. ಅಷ್ಟರಲ್ಲೇ ದರ್ಶನ್ ಕೊಲೆ ಕೇಸ್​ನಲ್ಲಿ ಅಂದರ್ ಆದ್ರು..

ಸುದೀಪ್​​ ಗು ಆ್ಯಕ್ಷನ್ ಕಟ್ ಹೇಳುತ್ತಾರೆ ಪ್ರೇಮ್..!

ಈಗ ಸುದೀಪ್​ ಕೂಡ ಪ್ರೇಮ್‌ಗೆ ಕಿಚಾಯಿಸಿದ್ದಾರೆ. ಸಿಸಿಎಲ್​ ಆಡುವಾಗ ಕ್ರಿಕೆಟ್ ಗ್ರೌಂಡ್​ನಲ್ಲಿ ಹೇಳಿದ್ದ ಆ ಒಂದು ಮಾತು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದಕ್ಕೆ ನನ್ನ ಗುರು ಪ್ರೇಮ್ ಅಂತ ಕಿಚ್ಚ ಎಲ್ಲರೆದುರು ಹೇಳಿ ತನ್ನ ವೈರಲ್ ವಿಡಿಯೋ ಹಿಂದಿನ ಸೂತ್ರಧಾರಿ ಪ್ರೇಮ್ ಎಂದುಬಿಟ್ಟಿದ್ದಾರೆ. ಹೀಗಾಗೆ ಪ್ರೇಮ್ ದರ್ಶನ್​​ ಹಾಗು ಕಿಚ್ಚನ ಕುಚಿಕು ಅನ್ನೋದ್ರಲ್ಲಿ ನೋ ಡೌಟ್.