ದರ್ಶನ್ ಜೈಲು ಸೇರಿದರೂ ಬದಲಾಗಿಲ್ವಾ..? ಮತ್ತದೇ ದೌಲತ್ತು, ದುರಂಹಕಾರದಿಂದ ಜೈಲಿನಲ್ಲೂ ಮೆರೀತಾ ಇದ್ದಾರಾ.?. ಸಹಕೈದಿಗಳಿಗೆ ದಾಸನಿಂದ ಕಿರುಕುಳ ಆಗ್ತಾ ಇದೆಯಾ..? ಖುದ್ದು ಡಿ ಗ್ಯಾಂಗ್ ಸದಸ್ಯರು ದಾಸನ ದಾದಾಗಿರಿಗೆ ತತ್ತರಿಸಿ ಹೋಗಿದ್ದಾರಂತೆ.
ದರ್ಶನ್ ಜೈಲು ಸೇರಿದರೂ ಬದಲಾಗಿಲ್ವಾ..? ಮತ್ತದೇ ದೌಲತ್ತು, ದುರಂಹಕಾರದಿಂದ ಜೈಲಿನಲ್ಲೂ ಮೆರೀತಾ ಇದ್ದಾರಾ.?. ಸಹಕೈದಿಗಳಿಗೆ ದಾಸನಿಂದ ಕಿರುಕುಳ ಆಗ್ತಾ ಇದೆಯಾ..? ಖುದ್ದು ಡಿ ಗ್ಯಾಂಗ್ ಸದಸ್ಯರು ದಾಸನ ದಾದಾಗಿರಿಗೆ ತತ್ತರಿಸಿ ಹೋಗಿದ್ದಾರಂತೆ. ನಮ್ಮನ್ನ ಬೇರೆ ಜೈಲ್ಗೆ ಶಿಫ್ಟ್ ಮಾಡಿ, ಇಲ್ಲದೇ ಹೋದ್ರೆ ದರ್ಶನ್ ಕೊಂದೇ ಬಿಡ್ತಾನೆ ಅಂತ ಬೇಡಿಕೊಳ್ತಾ ಇದ್ದಾರೆ. ಪರಪ್ಪನ ಅಗ್ರಹಾರದಿಂದ ಬಂದಿರೋ ದಾಸನ ಶಾಕಿಂಗ್ ಸ್ಟೋರಿ ಇಲ್ಲಿದೆ ನೋಡಿ. ದರ್ಶನ್ ಜೈಲ್ ಸೇರಿದ್ರೂ ಬದಲಾಗಿಲ್ಲ. ಮತ್ತದೇ ದರ್ಪ, ದೌಲತ್ತು, ಎಡವಟ್ಟು ಜೈಲಿನಲ್ಲೂ ಮುಂದುವರೆದಿದೆ. ಇದೀಗ ದರ್ಶನ್ ಌಂಡ್ ಗ್ಯಾಂಗ್ ಇರೋ ಪರಪ್ಪನ ಅಗ್ರಹಾರದಿಂದ ಒಂದು ಬಿಸಿ ಬಿಸಿ ಸುದ್ದಿ ಬಂದಿದೆ. ಕಾಟೇರ ತನ್ನೊಡನೆ ಬ್ಯಾರಕ್ನಲ್ಲಿರೋರಿಗೆ ಇನ್ನಿಲ್ಲದ ಕಾಟ ಕೊಡ್ತಾ ಇದ್ದಾನಂತೆ. ದರ್ಶನ್ ಸಹಕೈದಿಗಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡ್ತಾ ಇದ್ದಾನೆ ಅಂತ ಜೈಲಾಧಿಕಾರಿಗಳಿಗೆ ದೂರು ಬಂದಿದೆ.
ಹಾಗೆ ದೂರು ಕೊಟ್ಟವರು ಬೇರ್ಯಾರು ಅದೇ ದಾಸನ ಜೊತೆ ಸೇರಿ ಕೊಲೆ ಆರೋಪ ಹೊತ್ತ ನತದೃಷ್ಟರು. ಅದೇ ಡಿ ಗ್ಯಾಂಗ್ನ ಸದಸ್ಯರು. ದರ್ಶನ್ ಜೊತೆಗೆ ಇದೇ ಕೇಸಿನ ಇತರ 5 ಆರೋಪಿಗಳು ಇದ್ದಾರೆ. ಅನುಕುಮಾರ್, ಜಗ್ಗ ಅಲಿಯಾಸ್ ಜಗದೀಶ್, ನಾಗರಾಜ್, ಪ್ರದೋಶ್ ಮತ್ತು ಲಕ್ಷ್ಮಣ ದಾಸನ ಜೊತೆಗೆ ಕಂಬಿ ಎಣಿಸ್ತಾ ಇದ್ದಾರೆ. ಇವರ ಪೈಕಿ ತನ್ನ ಮ್ಯಾನೇಜರ್ ನಾಗರಾಜ್ರನ್ನ ಬಿಟ್ಟು ಉಳಿದವರಿಗೆಲ್ಲಾ ದಾಸ ಚಿತ್ರಹಿಂಸೆ ಕೊಡ್ತಾ ಇದ್ದಾನಂತೆ. ಇವರ ಪೈಕಿ ಇಬ್ಬರು ದಾಸನ ಕಾಟಕ್ಕೆ ಬೇಸತ್ತು, ತಮ್ಮ ಬೇರೆ ಜೈಲಿಗೆ ಶಿಫ್ಟ್ ಮಾಡಿ ಅಂತ ಜೈಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರಂತೆ. ಹೌದು ಅನುಕುಮಾರ್ ಮತ್ತು ಜಗ್ಗ ಅಲಿಯಾಸ್ ಜಗದೀಶ್, ನಮ್ಮನ್ನ ಚಿತ್ರದುರ್ಗದ ಜೈಲಿಗೆ ಶಿಫ್ಟ್ ಮಾಡಿ. ಇಲ್ಲೇ ಇದ್ದರೇ ದಾಸ ಕೊಡುವ ಹಿಂಸೆ ತಾಳಲಾರದೇ ನಾವು ಸತ್ತೇ ಹೋಗ್ತಿವಿ ಅಂತ ಜೈಲು ಅಧಿಕಾರಿಗಳ ಬಳಿ ಕೇಳಿಕೊಂಡಿದ್ದಾರಂತೆ.
ಸೇಮ್ ಸಿನಿಮಾಗಳಲ್ಲಿ ತನ್ನ ಸಹಚರರನ್ನ ಪೀಡಿಸಿ ಗೋಳು ಹೋಯ್ದುಕೊಳ್ಳೋ ತರಹ ಕಾಟೇರ ಇವರಿಗೆ ಕಾಟ ಕೊಡ್ತಾ ಇದ್ದಾನಂತೆ. ದರ್ಶನ್ ಜೊತೆ ಸೇರಿ ಮೈಮೇಲೆ ಕೊಲೆ ಕೇಸ್ ಹಾಕಿಸಿಕೊಂಡಿರೋ ಇವರಿಗೆ, ಈಗ ಅದೇ ದರ್ಶನ್ ಜೈಲಿನಲ್ಲೂ ಡೆವಿಲ್ ರೀತಿ ಕಾಡ್ತಾ ಇದ್ದಾನಂತೆ. ಹೌದು ಈ ಸಾರಿ ಜೈಲಿನಲ್ಲಿ ದರ್ಶನ್ ಮೇಲೆ ಕಠಿಣ ನಿಯಮಗಳನ್ನ ಹೇರಲಾಗಿದೆ. ಕಳೆದ ಸಾರಿ ಜೈಲಿನಲ್ಲಿ ಧಂ ಹೊಡೆದು ಅದು ಸುಪ್ರೀಂ ಕೋರ್ಟ್ವರೆಗೂ ಹೋಗಿ ಜೈಲರ್ಸ್ ಬುಡಕ್ಕೆ ಬಂದಿತ್ತು. ಸೋ ಈ ಸಾರಿ ದಾಸನ ನಟ್ಟು ಬೋಲ್ಟು ಟೈಟ್ ಮಾಡಿದ್ದಾರೆ ಜೈಲ್ ಅಧಿಕಾರಿಗಳು. ಇದಕ್ಕೆ ಪ್ರತಿಯಾಗಿ ದರ್ಶನ್ ಪದೇ ಪದೇ ಕೋರ್ಟ್ನಲ್ಲಿ ತನಗೆ ಸೂಕ್ತ ಸೌಲತ್ತು ಕೊಟ್ಟಿಲ್ಲ ಅಂತ ಆರೋಪ ಮಾಡ್ತಾನೇ ಬಂದಿದ್ದಾನೆ. ಸೋ ಜೈಲು ಅಧಿಕಾರಿಗಳು ಮತ್ತು ದರ್ಶನ್ ನಡುವೆ ಗುದ್ದಾಟ ನಡೀತಾನೆ ಬಂದಿದೆ. ಇತ್ತೀಚಿಗೆ ಪರಪ್ಪನ ಅಗ್ರಹಾರ ಜೈಲಿನ ಫೋಟೊ, ವಿಡಿಯೋಗಳು ವೈರಲ್ ಆದಮೇಲೆ ಜೈಲು ನಿಯಮಾವಳಿ ಮತ್ತಷ್ಟು ಕಠಿಣಗೊಂಡಿವೆ.
ಐಪಿಎಸ್ ಅಧಿಕಾರಿ ಅಂಶು ಕುಮಾರ್ ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡಿದ್ದು, ಅವರು ಬರ್ತಿದ್ದಂತೆ ಜೈಲಿನಲ್ಲಿ ಅತಿ ಕಠಿಣ ರೂಲ್ಸ್ ಜಾರಿ ಮಾಡಲಾಗಿದೆ. ಸೋ ಜೈಲಿನಲ್ಲಿ ಯಾವ ಸೌಲತ್ತು ಸಿಗದೇ ದರ್ಶನ್ ಸ್ಥಿಮಿತ ಕಳೆದುಕೊಂಡಿದ್ದು, ಜೈಲರ್ಸ್ ಮೇಲಿನ ಸಿಟ್ಟಿಗೆ ಸಹಚರರಿಗೆ ಪೆಟ್ಟು ಕೊಟ್ಟಿದ್ದಾರಂತೆ. ಹೌದು ಎರಡು ದಿನಗಳ ಹಿಂದೆ ದರ್ಶನ್ ಸೆಲ್ನಲ್ಲಿದೊಡ್ಡ ಮಾರಾಮಾರಿ ನಡೆದಿದೆಯಂತೆ. ಜಗ್ಗ ಮತ್ತು ದರ್ಶನ್ ನಡುವೆ ದೊಡ್ಡ ಜಗಳ ಆಗಿದೆಯಂತೆ. ಇಬ್ಬರ ಕೂಗಾಟ, ಅರಚಾಟ ಜೋರಾಗ್ತಿದ್ದಂತೆ ಜೈಲಧಿಕಾರಿಗಳು ಬಂದು ಜಗಳ ಬಿಡಿಸಿದ್ದಾರಂತೆ. ಜೈಲಿನಲ್ಲಿ ಕೋಪದಿಂದ ಕಿಡಿಕಿಡಿಯಾಗಿದ್ದ ದರ್ಶನ್ ಮಲಗಿದ್ದವರನ್ನ ಕಾಲಿನಲ್ಲಿ ಒದ್ದು ಎಬ್ಬಿಸಿದ್ದಾನಂತೆ. ಏಳ್ರೋ ಬೇಗ ಡ್ಯಾಶ್ ಗಳಾ ಅಂತ ಅಂತ ಅವಾಚ್ಯವಾಗಿ ಬೈದಿದ್ದಾನಂತೆ. ಅಸಲಿಗೆ ಈ ಕೇಸ್ ವಿಚಾರದಲ್ಲಿ ದರ್ಶನ್ ಕಾರಣಕ್ಕೆ ನಾವು ಅನ್ಯಾಯವಾಗಿ ಸಿಕ್ಕಿ ಹಾಕಿಕೊಂಡಿದ್ದೇವೆ ಅನ್ನೋ ಅಸಮಾಧಾನ ಇತರ ಆರೋಪಿಗಳಿಗೆ ಇದೆ. ತಾನು ಬಚಾವ್ ಆಗೋದಕ್ಕೆ ಪ್ರಯತ್ನ ಮಾಡ್ತಿರೋ ದರ್ಶನ್, ತಮ್ಮನ್ನ ಉಳಿಸೋಕೆ ಏನೂ ಮಾಡ್ತಿಲ್ಲ ಅನ್ನೋ ಅನುಮಾನ ಇವರಿಗೆಲ್ಲಾ ಇದೆ.
ಚಿತ್ರಹಿಂಸೆ ತಡೆಯಲಾಗ್ತಿಲ್ಲ
ವಕೀಲರ ನೇಮಕ ವಿಚಾರವಾಗಿಯೂ ಈ ಎಲ್ಲರ ನಡುವೆ ಗಲಾಟೆ ಶುರುವಾಗಿದೆ ಎನ್ನಲಾಗ್ತಾ ಇದೆ. ಹೌದು ದರ್ಶನ್ ಕೊಡ್ತಿರೋ ಮಾನಸಿಕ ಮತ್ತು ದೈಹಿಕ ಹಿಂಸೆಯಿಂದ ಕಂಗಾಲಾಗಿರೋ ಅನುಕುಮಾರ್ ತಾನು ಇಲ್ಲೇ ಇದ್ರೆ ಸತ್ತು ಹೋಗ್ತಿನಿ ಅಂತ ಅಲವತ್ತು ಕೊಂಡಿದ್ದಾನಂತೆ. ಬೇಲ್ ಸಿಗ್ತಿಲ್ಲ ಅನ್ನೋದರ ಜೊತೆ ದರ್ಶನ್ ಕೊಡುವ ಚಿತ್ರಹಿಂಸೆ ತಡೆಯಲಾಗ್ತಿಲ್ಲ .. ನಾನು ಏನಾದ್ರೂ ಮಾಡಿಕೊಂಡು ಸಾಯ್ತಿನಿ ಅಂತ ಕಣ್ಣೀರು ಹಾಕಿದ್ದಾನಂತೆ. ಈ ಹಿನ್ನಲೆ ಎಚ್ಚರಿಕೆ ವಹಿಸಿರೋ ಜೈಲು ಅಧಿಕಾರಿಗಳು, ದರ್ಶನ್ ಸೆಲ್ ಬಳಿ ಸಿಸಿಟಿವಿ ಅಳವಡಿಸಿ ತೀವ್ರ ನಿಗಾ ಇಟ್ಟಿದ್ದಾರಂತೆ. ಮೊನ್ನೆ ತಾನೇ ದರ್ಶನ್ ತನಗೆ ಟಿವಿ ಕೊಡಿ ಅಂತ ಮನವಿ ಮಾಡಿದ್ರು. ಆದ್ರೆ ಈಗ ಟಿವಿ ಬದಲು ಸಿಸಿಟಿವಿ ಬಂದಿದೆ. ದಾಸನ ದಾದಾಗಿರಿ ಮೇಲೆ ನಿಗಾ ಇಡೋದಕ್ಕೆ ಜೈಲು ಅಧಿಕಾರಿಗಳು ಸಿಸಿ ಕ್ಯಾಮೆರಾ ಇಟ್ಟು ರೆಕಾರ್ಡ್ ಮಾಡ್ತಾ ಇದ್ದಾರೆ. ದಾಸ ಮತ್ತದೇನು ಎಡವಟ್ಟು ಮಾಡ್ತಾನೋ ಅಂತ ಕೈದಿಗಳಷ್ಟೇ ಅಲ್ಲ ಜೈಲರ್ಸ್ ಕೂಡ ಕಂಗಾಲಾಗಿದ್ದಾರಂತೆ..!


