- Home
- Entertainment
- Sandalwood
- Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್; ಕಿಚ್ಚ ಸುದೀಪ್ ಏನಂದ್ರು?
Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್; ಕಿಚ್ಚ ಸುದೀಪ್ ಏನಂದ್ರು?
Kiccha Sudeep Mark Movie: ನಟ ಕಿಚ್ಚ ಸುದೀಪ್ ಅವರು ನಟಿಸಿರುವ ಮಾರ್ಕ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ವೇಳೆ ಸಿನಿಮಾ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಯ್ತು. ಆಗ ಸಿನಿಮಾ ತಂಡವು ಏನು ಹೇಳಿದೆ?

ನಟ ಕಿಚ್ಚ ಸುದೀಪ್ ಏನಂದ್ರು?
ನಟ ಕಿಚ್ಚ ಸುದೀಪ್ ಮಾತನಾಡಿ, ವಿಜಯ್ ಹಾಗೂ ಚಂದ್ರು ಮಾತ್ರ ನಿದ್ದೆ ಮಾಡದೆ ಈ ಸಿನಿಮಾಕ್ಕೋಸ್ಕರ ಕೆಲಸ ಮಾಡಿದ್ದಾರೆ. ನನ್ನ ಇಡೀ ತಂಡವು ನನ್ನ ಮಾತಿಗೆ ಧೃಡವಾಗಿ ನಿಂತಿತ್ತು. ದೀಪಾವಳಿ ಬಂದರೆ ಕರ್ನಾಟಕದಲ್ಲಿ ಎಲ್ಲರ ಮನೆಯಲ್ಲಿಯೂ ಹಬ್ಬ. ಎಂದಿಗೂ ತರಕಾರಿ, ಅಡುಗೆ ಕಮ್ಮಿಯಾಗಿಲ್ಲ. ಹಾಗೆಯೇ ಹಾಲಿಡೇ ಕೂಡ ಜಾಸ್ತಿ ಇರೋದರಿಂದ ನಾವು ಈಗ ಬರುತ್ತಿದ್ದೇವೆ. ಹೀಗಾಗಿ ಥಿಯೇಟರ್‌ನಲ್ಲಿ ಸೀಟ್‌ಗಳು ಹೇಗೆ ಕಡಿಮೆಯಾಗುತ್ತವೆ. ಜನ ಬರದೇ ಇರ್ತಾರಾ? ನಾಲ್ಕು ತಿಂಗಳು ಐದು ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. 80 ಲೋಕೇಷನ್, 15-20 ಸೆಟ್ ಹಾಕಿದ್ದೇವೆ” ಎಂದರು.
ರಾಕ್ ಲೈನ್ ವೆಂಕಟೇಶ್ ಏನಂದ್ರು?
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮಾತನಾಡಿ, ಇಡೀ ಚಿತ್ರರಂಗ ಇಂದು ಇಲ್ಲಿದೆ. ತಿಂಗಳಲ್ಲಿ ಮೂರ್ನಾಲ್ಕು ಈ ರೀತಿ ಕಾರ್ಯಕ್ರಮ ನಡೆಯುತ್ತಿವೆ. ಮಾರ್ಕ್ ಟ್ರೇಲರ್, ಹಾಡು ನೋಡಿದಮೇಲೆ ಎದುಸಿರು ತೆಗೆದುಕೊಂಡೆ. ಸುದೀಪ್ ಅವರು ಸೆಟ್‌ನಲ್ಲಿ ಎಲ್ಲರ ಗಮನಸೆಳೆದು, ಖುಷಿಯಾಗಿ ಇಡುತ್ತಾರೆ. ನಿರ್ದೇಶಕರದ್ದು ಎರಡನೇ ಸಿನಿಮಾವಾಗಿದ್ದು, ಚೆನ್ನಾಗಿ ಮಾಡಿದ್ದಾರೆ. ಸತ್ಯ ಜ್ಯೋತಿ ತಮಿಳುನಾಡಿನಲ್ಲಿ ದೊಡ್ಡ ಬ್ಯಾನರ್. ಅವರು ಸುದೀಪ್ ಅವರ ಜೊತೆ ಸಿನಿಮಾ ಮಾಡಿರುವುದು ಖುಷಿ. ಸಿನಿಮಾದಲ್ಲಿ ಮಾಡಿದ ಎಲ್ಲ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ ಎಂದರು.
ವಿಜಯ್ ಕಾರ್ತಿಕೇಯನ್ ಏನಂದ್ರು?
ವಿಜಯ್ ಕಾರ್ತಿಕೇಯನ್ ಅವರು ಈ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಮಾನವ ಕಳ್ಳ ಸಾಗಾಣಿಕೆ ಕಥೆಯಿದೆ ಎಂದು ಟ್ರೈಲರ್ ನೋಡಿದರೆ ಗೊತ್ತಾಗುವುದು. ಇದರ ಜೊತೆಗೆ ಪೊಲಿಟಿಕಲ್ ಅಂಶಗಳನ್ನು ಸೇರಿಸಿ ಟ್ರೇಲರ್ ಕಟ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಅಜಯ್ ಮಾರ್ಕಂಡೇಯ
ಪೊಲೀಸ್ ಅಜಯ್ ಮಾರ್ಕಂಡೇಯ ಅಲಿಯಾಸ್ 'ಮಾರ್ಕ್' ಆಗಿ ಕಿಚ್ಚ ಸುದೀಪ್ ಅವರು ಅಬ್ಬರಿಸಿದ್ದಾರೆ. ಯೋಗಿಬಾಬು, ನವೀನ್ ಚಂದ್ರ, ಗುರು ಸೋಮಸುಂದರಂ ಮತ್ತು ರೋಶಿನಿ ಪ್ರಕಾಶ್ ಮುಂತಾದವರು ತಾರಾಗಣದಲ್ಲಿದ್ದಾರೆ.
ಸಿನಿಮಾ ರಿಲೀಸ್ ಯಾವಾಗ?
ಅಜನೀಶ್ ಲೋಕನಾಥ್ ಸಂಗೀತ ಈ ಸಿನಿಮಾಕ್ಕಿದೆ. ಸತ್ಯಜ್ಯೋತಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ನಿರ್ಮಾಣದಲ್ಲಿ ಸುದೀಪ್ ಕೂಡ ಕೈ ಜೋಡಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಿಯಾ ಸುದೀಪ್ ಅವರು ಕೆಆರ್ ಜಿ ಜೊತೆಗೂಡಿ ಮಾರ್ಕ್ ವಿತರಣೆ ಮಾಡಲಿದ್ದಾರೆ
ಡಿಸೆಂಬರ್ 25 ಕ್ಕೆ ಮಾರ್ಕ್ ಸಿನಿಮಾ ರಿಲೀಸ್ ಆಗಲಿದೆ. ಮಾರ್ಕ್ ಸಿನಿಮಾವನ್ನು ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ವಿತರಣೆ ಮಾಡಲಿದ್ದಾರೆ. ಈ ಮೂಲಕ ನಿರ್ಮಾಣದ ಜೊತೆ ವಿತರಣೆಗೂ ಪ್ರಿಯಾ ಕಾಲಿಟ್ಟದ್ದಾರೆ. ಕೆಆರ್ ಜೆ ಜೊತೆಗೂಡಿ ಪ್ರಿಯಾ ಸುದೀಪ್ ಅವರು, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಮಾರ್ಕ್ ವಿತರಣೆ ಮಾಡಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

