ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ 'ಒಡೆಯ' ಸಿನಿಮಾ ಡಿಸಂಬರ್ 12 ರಂದು ರಿಲೀಸ್ ಆಗಲು ರೆಡಿಯಾಗಿದೆ. 

'ಒಡೆಯ' ನನ್ನು ಸ್ವಾಗತಿಸಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರಕ್ಕೆ ಇನ್ನಷ್ಟು ಹೈಪ್ ಕೊಡಲು ಚಿತ್ರತಂಡ ಪ್ರಮೋಶನ್‌ನಲ್ಲಿ ಬ್ಯುಸಿಯಾಗಿದೆ.  ಈಗಾಗಲೇ ಬೇರೆ ಬೇರೆ ರೀತಿಯ ಪ್ರಮೋಶನ್ ಗಿಮಿಕ್ ಮಾಡಿದೆ.   'ಒಡೆಯ' ಸಿನಿಮಾದ ಫೇವರೇಟ್ ಹಾಡನ್ನು ಮ್ಯೂಸಿಕ್ App ಲಿ ಕೇಳಿ ಅದರ ಸ್ಕ್ರೀನ್ ಶಾಟ್ ಹೊಡೆದು ಹ್ಯಾಶ್ ಟ್ಯಾಗ್ ಜೊತೆ ಫೇಸ್‌ಬುಕ್, ಟ್ವಿಟರ್‌ನಲ್ಲಿ ಶೇರ್ ಮಾಡಿಕೊಳ್ಳಬೇಕು. ಅತೀ ಹೆಚ್ಚು ಲೈಕ್ ಪಡೆದವರಿಗೆ ದಚ್ಚು ಸಹಿ ಮಾಡಿರುವ ಮಗ್‌ನ್ನು ಗಿಫ್ಟ್ ಆಗಿ ಸಿಗಲಿದೆ ಎಂದು ಹೇಳಿತ್ತು. 

ಸಪ್ತಪದಿ ತುಳಿದ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಮದುವೆ ಪೋಟೋಗಳಿವು!

ಈಗ ಇದೇ ರೀತಿ ಇನ್ನೊಂದು ಗಿಮಿಕ್‌ಗೆ ಮುಂದಾಗಿದೆ.  ಒಡೆಯ ಚಿತ್ರವನ್ನು ವೀಕ್ಷಿಸಿ ನೀವು ಪಡೆದ ಟಿಕೆಟನ್ನು ತುಂಬಿ ಥಿಯೇಟರ್‌ನಲ್ಲಿ ಇಟ್ಟಿರುವ ಲಕ್ಕಿ ಡಿಪ್ ಬಾಕ್ಸ್ ಒಳಗೆ ಹಾಕಬೇಕು. ಲಕ್ಕಿ ವಿಜೇತರು ಒಡೆಯ ಚಿತ್ರತಂಡದಿಂದ #BENLG ದ್ವಿಚಕ್ರ ವಾಹನವನ್ನು ಬಹುಮಾನವಾಗಿ ಗೆಲ್ಲಿ ಎಂದು ಹೇಳಿದೆ.