ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್‌ ಟೀಸರ್‌ ದರ್ಶನ್‌ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್‌ ಆಗಿದೆ. 

'ತಾಳ್ಮೆಯಲ್ಲಿ ಶ್ರೀರಾಮ, ಮಾತು ಕೊಟ್ರೆ ದಶರಥರಾಮ, ಪ್ರೀತಿಯಿಂದ ಬಂದ್ರೆ ಜಾನಕಿ ರಾಮ, ತಿರುಗಿ ಬಿದ್ರೆ ರಾವಣ' ಡೈಲಾಗ್‌ನಿಂದ ಶುರುವಾಗುವ ಟೀಸರ್‌ ಡಿ-ಬಾಸ್‌ ಮೂರು ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಂಜಯ್, ಅಕ್ಬರ್‌ ಹಾಗೂ ರಾಬರ್ಟ್‌ ಪಾತ್ರಗಳ ಹೆಸರು ಎನ್ನಲಾಗಿದೆ. 

"

ನೀವು ದರ್ಶನ್‌ ಫ್ಯಾನಾಗಿದ್ರೆ ಈ ಫಿಲ್ಮ್‌ ಮಿಸ್‌ ಮಾಡ್ದೇ ನೋಡ್ಬೇಕು!

ಇನ್ನು ಚಿತ್ರದಲ್ಲಿ ನಾಯಕಿಯಾಗಿ ಆಶಾ ಭಟ್‌ , ವಿಲನ್‌ ಆಗಿ ಜಗಪತಿ ಬಾಬು ಕಾಣಿಸಿಕೊಂಡಿದ್ದಾರೆ. ಉಮಾಪತಿ ನಿರ್ಮಾಣಕ್ಕೆ ತರುಣ ಸುಧೀರ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಅರ್ಜುನ್‌ ಜನ್ಯ ಅವರ ಹಿನ್ನಲೆ ಸಂಗೀತ ಚಿತ್ರದ ಮತ್ತೊಂದು ಹೈಲೈಟ್‌ ಆಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೋಡಿಯಾದ ಈ ನಟಿಯರೆಲ್ಲಿದ್ದಾರೀಗ?

43 ಸಂಭ್ರಮದಲ್ಲಿರುವ ದರ್ಶನ್‌ ರಾತ್ರಿ 12 ಗಂಟೆಯಿಂದ ಅಭಿಮಾನಿಗಳ ಜೊತೆ ಕೇಕ್‌ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.