ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ  ರಾಬರ್ಟ್‌ ಸಿನಿಮಾ ರಿಲೀಸ್‌ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಕೊರೋನಾ ಬ್ಯಾಡ್‌ ನ್ಯೂಸ್‌ ನೀಡಿದೆ. ಕೊರೋನಾ ವೈರಸ್‌ನಿಂದ ಇಡೀ  ದೇಶವೇ ಲಾಕ್‌ಡೌನ್‌ ಆಗಿದೆ. ಸಾರ್ವಜನಿಕರು ಹಾಗೂ ಸಿನಿ ತಾರೆಯರು ಮನೆಯಲ್ಲಿಯೇ ಲಾಕ್‌ ಆಗಿದ್ದಾರೆ.

ಕಷ್ಟದ ಹಾದಿಯನ್ನು ತುಳಿದು ಬಂದ ಚಾಲೆಂಜಿಂಗ್ ಸ್ಟಾರ್; ಇದು ದರ್ಶನ್ ಡೈರಿ!

ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಅಭಿನಯದ ರಾಬರ್ಟ್‌ ಸಿನಿಮಾ ಏಪ್ರಿಲ್‌ 9ರಂದು ರಿಲೀಸ್‌ ಆಗಬೇಕಿತ್ತು ಆದರೆ ಕೊರೋನಾ ವೈರಸ್‌ನಿಂದ ಚಿತ್ರಮಂದಿರಗಳು ಕ್ಲೋಸ್  ಆಗಿರುವ ಹಿನ್ನೆಲೆಯಲ್ಲಿ ಚಿತ್ರವನ್ನು ನಿರ್ದೇಶಕರು ಮೇ 1ರಂದು ತೆರೆ ತರುವುದಾಗಿ ಹೇಳಿದರು. ಕೊರೋನಾ ಅಟ್ಟಹಾಸ ಕಡಿಮೆ ಆಗದ ಕಾರಣ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್‌ನನ್ನು ಮೇ 3ರವರೆಗೆ ಮುಂದೂಡಿದ್ದಾರೆ. ಈ ಹಿನ್ನೆಯಲ್ಲಿ ಮೇ 1ರಂದು ರಾಬರ್ಟ್‌ ರಿಲೀಸ್ ಆಗುವುದಿಲ್ಲ. 

ದರ್ಶನ್ ಬಗ್ಗೆ ಆ ನಟಿ ಹಾಗೆ ಹೇಳಿದ್ಯಾಕೆ? ಏನಿದು ಮ್ಯಾಟ್ರು?

'ಮೇ 1 ರಂದು ಸಿನಿಮಾ ರಿಲೀಸ್ ಮಾಡುವ ತಯಾರಿಯಲ್ಲಿದ್ದೆವು. ಆದ್ರೆ ಲಾಕ್ ಡೌನ್ ವಿಸ್ತರಣೆ ಆಗಿರೋದ್ರಿಂದ ರಿಲೀಸ್ ದಿನಾಂಕ ಮತ್ತೆ ಮುಂದೆ ಹೋಗಿದೆ. ರಿಲೀಸ್ ದಿನಾಂಕವನ್ನು ಫಿಕ್ಸ್ ಮಾಡಿಕೊಂಡಿಲ್ಲ. ಕೊರೊನಾ ಎಫೆಕ್ಟ್ ನೋಡಿಕೊಂಡು ಡೇಟ್ ಫಿಕ್ಸ್ ಮಾಡಲಾಗುತ್ತದೆ. ಕೊರೊನಾ ಭೀತಿ ಕಡಿಮೆ ಆದಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ' ಎಂದು ತಿಳಿಸಿದ್ದಾರೆ.