ದರ್ಶನ್ ’ಕುರುಕ್ಷೇತ್ರ’ ರಿಲೀಸ್‌ಗೆ ಅಡ್ಡಿಯಾದ್ರಾ ನಿಖಿಲ್ ಕುಮಾರಸ್ವಾಮಿ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಚಿತ್ರ ಕುರುಕ್ಷೇತ್ರ | ಡಿ ಬಾಸ್ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ | ಇದೀಗ ಚಿತ್ರ ಬಿಡುಗಡೆಗೆ ನಿಖಿಲ್ ಕುಮಾರಸ್ವಾಮಿ ಅಡ್ಡಿಯಾಗುವ ಸಾಧ್ಯತೆ ಇದೆ.
ಬೆಂಗಳೂರು (ಮಾ. 04): ಚಾಲೆಂಜಿಂಗ್ ಸ್ಟಾರ್ ದರ್ಶನ್ 50 ನೇ ಚಿತ್ರ ಕುರುಕ್ಷೇತ್ರ ದರ್ಶನ್ ಕರಿಯರ್ ನಲ್ಲೇ ಮುಖ್ಯವಾದ ಚಿತ್ರ. ಈ ಚಿತ್ರ ಬಿಡುಗಡೆಗಾಗಿ ಅಭಿಮಾನಗಳು ಕಾತರದಿಂದ ಕಾಯುತ್ತಿದ್ದಾರೆ . ಆದರೆ ಆ ಸಮಯವೇಕೋ ಬರುತ್ತಿಲ್ಲ.
ಗೂಗ್ಲಿ-2 ಚಿತ್ರದಲ್ಲಿ ಯಶ್ ಇಲ್ಲ; ಕಾರಣವೇನು?
ಇಷ್ಟು ದಿನ ಗ್ರಾಫಿಕ್ಸ್ ಕೆಲಸದಿಂದ ಕುರುಕ್ಷೇತ್ರ ಬಿಡುಗಡೆ ವಿಳಂಬವಾಗುತ್ತಿದೆ ಎಂದು ನಿರ್ಮಾಪಕರು ಹೇಳುತ್ತಿದ್ದರು. ಇದೀಗ ಇನ್ನೊಂದು ಸಮಸ್ಯೆ ಎದುರಾಗಿದೆ. ನಿಖಿಲ್ ಕುಮಾರಸ್ವಾಮಿ ಅಡ್ಡಿಯಾಗುವ ಸಾಧ್ಯತೆ ಹೆಚ್ಚಾಗಿದೆ.
ದರ್ಶನ್- ಸುದೀಪ್ ಮುಖಾಮುಖಿಗೆ ಸಿದ್ಧವಾಗಿದೆ ವೇದಿಕೆ!
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತ ಎನ್ನಲಾಗುತ್ತಿದೆ. ಒಂದು ವೇಳೆ ನಿಖಿಲ್ ಸ್ಪರ್ಧಿಸಿದ್ರೆ ಕುರುಕ್ಷೇತ್ರ ಬಿಡುಗಡೆ ಗೆ ಸಮಸ್ಯೆಯಾಗೋದು ಗ್ಯಾರಂಟಿ. ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ನೀತಿ ಸಂಹಿತೆ ಜಾರಿಯಾಗುತ್ತೆ. ಚುನಾವಣಾ ನೀತಿ ಸಂಹಿತೆ ಮುಗಿಯುವವರೆಗೂ ಸಿನಿಮಾ ರಿಲೀಸ್ ಮಾಡುವಂತಿಲ್ಲ.
ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.