ಜಾಕಿ ಹಾಗೂ ಹುಡುಗರು ಚಿತ್ರ 100 ದಿನ ಪೂರೈಸಿದ ಪ್ರಯುಕ್ತ ಡಾರ್ಲಿಂಗ್ ಕೃಷ್ಣ ಅವರಿಗೆ ಬೆಳ್ಳಿ ಲೋಟ ನೀಡಲಾಗಿದೆ.

ಕನ್ನಡ ಚಿತ್ರರಂಗಕ್ಕೆ ಅದ್ಭುತ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ ಡಾ.ಪಾರ್ವತಮ್ಮ ರಾಜ್‌ಕುಮಾರ್‌ ಅವರ ವಜ್ರೇಶ್ವರಿ ಕಂಬೈನ್ಸ್‌ನ ಅಡಿಯಲ್ಲಿ ಮೂಡಿ ಬಂದ ಸಿನಿಮಾ ಜಾಕಿ ಹಾಗೂ ಹುಡುಗರು 100 ದಿನಗಳಲ್ಲಿ ಪೂರೈಸಿದ ಪ್ರಯುಕ್ತ ಪ್ರತಿಯೊಬ್ಬ ಕಲಾವಿದನಿಗೂ ಬೆಳ್ಳಿ ಲೋಟ ನೀಡಲಾಗಿತ್ತು. ಫೋಟೋ ಶೇರ್ ಮಾಡುವ ಮೂಲಕ ಡಾರ್ಲಿಂಗ್ ಕೃಷ್ಣ ಹಳೆ ನೆನಪುಗಳನ್ನು ಮೆಲುಕು ಹಾಕಿದ್ದಾರೆ. 

Add Asianetnews Kannada as a Preferred SourcegooglePreferred

ದುಬಾರಿ ಹೋಟೆಲ್‌ನಲ್ಲಿ ಮಿಲನಾ-ಕೃಷ್ಣ ಬ್ಯಾಚ್ಯುಲರ್‌ ಪಾರ್ಟಿ; ಹೇಗಿತ್ತು ನೋಡಿ! 

ಕೃಷ್ಣ ಪೋಸ್ಟ್:

2010ರಲ್ಲಿ ಬಿಡುಗಡೆಯಾದ 'ಜಾಕಿ' ಚಿತ್ರಕ್ಕೆ ಅಸಿಸ್ಟೆಂಟ್‌ ಡೈರೆಕ್ಟರ್ ಆಗಿ ಕೆಲಸ ಮಾಡಿದ ಡಾರ್ಲಿಂಗ್ ಕೃಷ್ಣ ಸಿಐಡಿ ಆಫೀಸರ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆನಂತರ 2011ರಲ್ಲಿ 'ಹುಡುಗರು' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. 2013ರಲ್ಲಿ 'ಮದರಂಗಿ' ಚಿತ್ರದಲ್ಲಿ ಮೂಲಕ ಪ್ರಮುಖ ಪಾತ್ರಧಾರಿಯಾಗಿ ಚಿತ್ರರಂಗಕ್ಕೆ ಪರಿಚಯವಾದರು. ವಜ್ರೇಶ್ವರಿ ಕಂಬೈನ್ಸ್‌ ಸಿನಿಮಾ ಮೂಲಕ ಬಣ್ಣ ಹಚ್ಚಿದ ಕೃಷ್ಣ ಎರಡು ಸಿನಿಮಾಗಳಲ್ಲಿ ಅಭಿನಯಿಸಿದ ಕಾರಣ ಎರಡು ಬೆಳ್ಳಿ ಲೋಟ ಪಡೆದುಕೊಂಡಿದ್ದಾರೆ. 

'100 ದಿನಗಳ ಬೆಳ್ಳಿ ಲೋಟ. ವಜ್ರೇಶ್ವರಿ ಬ್ಯಾನರ್‌ನಲ್ಲಿ ಬಂದ ಜಾಕಿ ಹಾಗೂ ಹುಡುಗರು ಚಿತ್ರಕ್ಕೆ. ಸವಿ ನೆನಪುಗಳು' ಎಂದು ಕೃಷ್ಣ ಬರೆದುಕೊಂಡಿದ್ದಾರೆ. 

ಕಂಚೀಪುರಂನಲ್ಲಿ ಮದುವೆ ಶಾಪಿಂಗ್ ಶುರು ಮಾಡಿದ ಮಿಲನಾ-ಕೃಷ್ಣ; 'No makeup' ಲುಕ್?

ವಜ್ರೇಶ್ವರಿ ಕಂಬೈನ್ಸ್‌: 

ಹಲವಾರು ಲೇಖಕರಿಗೆ ಆಶ್ರಯವಾಗಿ, ಪ್ರತಿಭಾನ್ವಿತ ಕಲಾವಿದರಿಗೆ ಬೆನ್ನೆಲುಬಾಗಿ ನಿಂತ ಡಾ. ಪಾರ್ವತಮ್ಮ ರಾಜ್‌ಕುಮಾರ್ ಅವರ ವಜ್ರೇಶ್ವರಿ ಕಂಬೈನ್ಸ್‌ ಈಗಲೂ ಸಿನಿಮಾ ನಿರ್ಮಾಣ ಮಾಡುವ ಸಂಸ್ಥೆಗಳಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. 'ತ್ರಿಮೂರ್ತಿ','ಸನಾದಿ ಅಪ್ಪಣ್ಣ','ಶಂಕರ್ ಗುರು','ತಾಯಿಗೆ ತಕ್ಕ ಮಗ' ಸೇರಿದಂತೆ ಬ್ಯಾನರ್‌ನಲ್ಲಿ ಮೂಡಿ ಬಂದ ಎಲ್ಲಾ ಚಿತ್ರಗಳು ಸೂಪರ್ ಹಿಟ್. ವಜ್ರೇಶ್ವರಿ ಕಂಬೈನ್ಸ್‌ನನ್ನು ಈಗ ರಾಘವೇಂದ್ರ ರಾಜ್‌ಕುಮಾರ್‌ ನಡೆಸಿಕೊಂಡು ಬರುತ್ತಿದ್ದಾರೆ. ಈ ಬ್ಯಾನರ್‌ನ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬೇಕೆಂಬುದು ಪ್ರತಿಯೊಬ್ಬ ಕಲಾವಿದನ ಕನಸು.

View post on Instagram