ಡೇರ್‌ಡೆವಿಲ್ ಮುಸ್ತಾಫ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು ಡಾ ಬ್ರೋ ಸಾಥ್ ನೀಡಿದ್ದಾರೆ.
'ಡೇರ್ ಡೆವಿಲ್ ಮುಸ್ತಾಫ', ಸ್ಯಾಂಡಲ್ ವುಡ್‌ನಲ್ಲಿ ರಿಲೀಸ್‌ಗೆ ರೆಡಿಯಾಗಿರುವ ಹೊಸಬರ ಸಿನಿಮಾ. ಸದ್ಯ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಡೇರ್ ಡೆವಿಲ್ ಮುಸ್ತಾಫ ಕನ್ನಡ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಡೇರ್ ಡೆವಿಲ್ ಮುಸ್ತಾಫ ಎಂದಾಕ್ಷಣ ಕೆ ಪಿ ಪೂರ್ಣಚಂದ್ರ ತೇಜಸ್ವಿ ನೆನಪಾಗುತ್ತಾರೆ. ಹೌದು ಈ ಸಿನಿಮಾ ಕೆ ಪಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆ ಆಧರಿತ ‘ಡೇರ್ ಡೆವಿಲ್ ಮುಸ್ತಾಫಾ’ ಆಧಾರಿತ ಸಿನಿಮಾ ಇದಾಗಿದೆ. ಹೊಸಬರೇ ಸೇರಿಕೊಂಡು ಮಾಡಿರುವ ಈ ಸಿನಿಮಾಗೆ ಖ್ಯಾತ ಯೂಟ್ಯೂಬರ್ ಡಾ ಬ್ರೋ ಸಾಥ್ ನೀಡಿದ್ದಾರೆ. ವಿನೂತನ ರೀತಿಯಲ್ಲಿ ಈ ಸಿನಿಮಾ ಪ್ರಚಾರಕ್ಕೆ ಇಳಿದಿದೆ. ಸದ್ಯ ರಿಲೀಸ್ ಆಗಿರುವ ಈ ಟ್ರೈಲರ್‌ಗೆ ಡಾ. ಬ್ರೋ ಧ್ವನಿ ನೀಡಿದ್ದಾರೆ. ಇದು ಕನ್ನಡ ಅಭಿಮಾನಿಗಳಿಗೆ ಮತ್ತಷ್ಟು ವಿಶೇಷವಾಗಿದ್ದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಮೊದಲ ಬಾರಿಗೆ ಡಾ ಬ್ರೋ ಖ್ಯಾತಿಯ ವ್ಲಾಗರ್ ಗಗನ್ ಶ್ರೀನಿವಾಸ್ ಸಿನಿಮಾಗೆ ಧ್ವನಿ ನೀಡುವ ಮೂಲಕ ಚಿತ್ರಕ್ಕೆ ಸಾಥ್ ನೀಡಿದ್ದಾರೆ. ಪಿಆರ್‌ಕೆ ಆಡಿಯೋ ಯೂಟ್ಯೂಬ್‌ನಲ್ಲಿ ಈ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್ನಲ್ಲಿ ಪಾತ್ರಗಳ ಪರಿಚಯ, ಸ್ಥಳದ ಪರಿಚಯ ಹಾಗೂ ಕತೆ ಪರಿಚಯ ಮಾಡುವ ಧ್ವನಿ ಡಾ ಬ್ರೋ ಅವರದ್ದೇ ಆಗಿದೆ. ತಮ್ಮ ಯೂಟ್ಯೂಬ್ ವಿಡಿಯೋ ಮಾದರಿಯಲ್ಲಿಯೇ ಟ್ರೈಲರ್ನಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ಡಾ ಬ್ರೋ.
Dr Broಗೆ ಗೋಲ್ಡನ್ ಪ್ಲೇ ಬಟನ್; ಚಿನ್ನನೇ ಅಲ್ಲ ಗುರು ಎಂದು ಅಸಲಿ ಸತ್ಯ ಬಿಚ್ಚಿಟ್ಟ ಗಗನ್
ಡೇರ್‌ಡೆವಿಲ್ ಮುಸ್ತಾಫ ರೆಟ್ರೋ ಶೈಲಿಯಲ್ಲೇ ಮೂಡಿ ಬಂದಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಪ್ರೇಕ್ಷಕರ ಹೃದಯ ಗೆದ್ದಿದ್ದು, ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಗೆ ಶಶಾಂಕ್ ಸೋಗಲ್ ಅಕ್ಷನ್ ಕಟ್ ಹೇಳಿದ್ದಾರೆ. ಇನ್ನು ವಿಶೇಷ ಎಂದರೆ ತೇಜಸ್ವಿ ಅಭಿಮಾನಿಗಳೇ ಸೇರಿ ನಿರ್ಮಿಸಿದ್ದಾರೆ. ಈ ಹೊಸ ತಂಡಕ್ಕೆ ಡಾಲಿ ಧನಂಜಯ್ ಬೆಂಬಲವೂ ಸಿಕ್ಕಿದೆ. ಡೇರ್ ಡೆವಿಲ್ ಮುಸ್ತಾಫಾ ಸಿನಿಮಾವನ್ನು ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡುತ್ತಿದ್ದಾರೆ. ಸಿನಿಮಾದ ವಿತರಣೆ ಸಹ ಅವರದ್ದೇ ಆಗಿದೆ. ಈ ಬಹುನಿರೀಕ್ಷೆಯ ಸಿನಿಮಾ ಮೇ 19ಕ್ಕೆ ಬಿಡುಗಡೆ ಆಗಲಿದೆ.

ಇಂಡೋನೇಷ್ಯಾದ ನರಭಕ್ಷಕರ ಜೊತೆ Dr Bro! ಹುಷಾರು ದೇವ್ರು ಅಂತಿದ್ದಾರೆ ಫ್ಯಾನ್ಸ್
ಈ ಸಿನಿಮಾದಲ್ಲಿ ಆದಿತ್ಯ ಆಶ್ರೀ, ಅಭಯ್, ಸುಪ್ರೀತ್ ಭಾರದ್ವಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂಎಸ್ ಉಮೇಶ್, ಮಂಡ್ಯ ರಮೇಶ್, ಮೈಸೂರು ಆನಂದ್, ಸುಂದರ್ ವೀಣಾ, ಹರಿಣಿ, ನಾಗಭೂಷಣ, ಪೂರ್ಣಚಂದ್ರ ಮೈಸೂರು, ವಿಜಯ್ ಶೋಭರಾಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. ತೇಜಸ್ವಿ ಅವರ 65 ಅಭಿಮಾನಿಗಳು ಸೇರಿಕೊಂಡು ಈ ಸಿನಿಮಾ ನಿರ್ಮಾಣ ಮಾಡುತ್ತಿರುವುದು ವಿಶೇಷ. ಸದ್ಯ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ ಡೇರ್‌ಡೆವಿಲ್ ಮುಸ್ತಾಫ ಸಿನಿಮಾ ಹೇಗೆ ಮೂಡಿಬಂದಿದೆ ಎಂದು ನೋಡಲು ಅಭಿಮಾನಿಗಳು ಕಾತರರಾಗಿದ್ದು ಮೇ 19ಕ್ಕೆ ಕುತೂಹಲಕ್ಕೆ ತೆರೆಬೀಳಲಿದೆ.
