ಧನಂಜಯ ಹೇಳಲಾಗದ ಮಾತೊಂದನ್ನು ಹೇಳಿದ್ದಾರೆ. ಗುಟ್ಟಾಗಿ ಆಡಿದ್ದ ಮಾತೀಗ ಪಬ್ಲಿಕ್ ಆಗಿದೆ. ನಂಗೆ ಐದು ಗಂಟೆಗೂ ಒಮ್ಮೊಮ್ಮೆ ಅನ್ಸುತ್ತೆ ಅಂದಿದ್ದಾರೆ. ಅವರಿಗೆ ಏನನ್ಸುತ್ತೆ?
ಡಾಲಿ ಧನಂಜಯ ಮೊನ್ನೆ ಹೊಯ್ಸಳನಾಗಿ ಅಬ್ಬರಿಸಿದರು. ಆ ಸಿನಿಮಾ ಸೌಂಡ್ ಮಾಡ್ತೋ ಇಲ್ವೋ ಬೇರೆ ವಿಚಾರ. ಆದರೆ ಆ ಟೈಮಲ್ಲಿ ಇವ್ರಿನ್ನೂ ಸಿಂಗಲ್ಲಾಗೇ ಉಳಿದಿರೋ ರಹಸ್ಯ ಮಾತ್ರ ಸಖತ್ ಸೌಂಡ್ ಮಾಡ್ತು. ಧನು ಮತ್ತು ಅಮೃತ ನಡುವೆ ಏನೋ ಇದೆ ಅಂತ ಒಂದಿಷ್ಟು ಜನ ಮಾತಾಡ್ಕೊಂಡ್ರು. ಅಮೃತಾನೇ ಎಷ್ಟೋ ಕಡೆ, ಅಯ್ಯೋ ನಮ್ಮಿಬ್ಬರ ನಡುವೆ ಏನೂ ಇಲ್ಲಪ್ಪ, ಹೀಗೆ ಸುದ್ದಿ ಮಾಡಿ ಮಾಡಿ ಧನಂಜಯಂಗೆ ಯಾರೂ ಹೆಣ್ಣು ಕೊಡೋಕೆ ಒಪ್ತಿಲ್ಲ ಅಂದುಬಿಟ್ಟರು. ಹಾಗಿದ್ರೆ ಅವತ್ತು ಟಿವಿ ಸ್ಕ್ರೀನಲ್ಲಿ ಅಮೃತಾಗಾಗಿ ಪ್ರೇಮ ಕವಿತೆ ಓದಿದ್ದು, ಮೊಣಕಾಲೂರಿ ಗುಲಾಬಿ ಕೊಟ್ಟಿದ್ದು, ಅಮೃತಾ ನಾಚಿಕೆಯಲ್ಲಿ ಗುಲಾಬಿಗಿಂತ ಹೆಚ್ಚು ಕೆಂಪಾಗಿದ್ದು ಎಲ್ಲಾ ಏನೂ ಅಲ್ವಾ? ಅದು ಹೋಗ್ವಿ, ಬಡವ ರಾಸ್ಕಲ್ ಸಿನಿಮಾದಲ್ಲೊಂದು ಹಾಡಿದ್ಯಲ್ಲಾ, ಉಡುಪಿ ಹೋಟೇಲು, ಖಾಲಿ ಟೇಬಲ್ಲು.. ಅಂತ. ಅದ್ರಲ್ಲೊಂದು ಸಾಲನ್ನು ಧನಂಜಯ ಬರೆದಿದ್ದು ಅಮೃತಾನ್ನ ನೆನೆಸ್ಕೊಂಡೇ. ಅದನ್ನು ಅವರೇ ಹೇಳಿದ್ದಾರೆ. ಅದೆಲ್ಲ ಹೋಗ್ಲಿ ಮೊನ್ನೆ ಹೊಯ್ಸಳ ಟ್ರೇಲರ್ ಲಾಂಚ್‌ನಲ್ಲೂ ಅಮೃತಾಗಾಗಿ ಬರೆದ ಕವಿತೆ ಓದಿದ್ರಲ್ಲಾ.. ಅದೆಲ್ಲ ಪ್ರೀತಿ ಇಲ್ಲದೇ ಹುಟ್ಟಿದ್ದಾ ಅಂತೆಲ್ಲ ಕನ್ಫ್ಯೂಶನ್.
ಅದಕ್ಕಿಂತ ಮಜಾ ಅಂದರೆ ಈ ಜೋಡಿ ತಮ್ಮಿಬ್ಬರ ನಡುವೆ ಏನೂ ಇಲ್ಲಪ್ಪ ಅಂತ ಹೇಳೋದು. ಮತ್ತೊಂದು ಕಡೆ ಸುದೀಪ್, ರಮ್ಯಾ ಎಲ್ಲ ಆಫ್‌ಲೈನ್ ಕಥೆ ಹೇಳೋದು. ಚಾನ್ಸ್ ಸಿಕ್ಕಲ್ಲೆಲ್ಲ ಇಬ್ರನ್ನೂ ಕಾಲೆಳೆಯೋದು. ಅವರಿಬ್ಬರಿಗೂ ಹತ್ತಿರದಲ್ಲಿರೋ ಸೆಲೆಬ್ರಿಟಿಗಳು ಹೀಗೆಲ್ಲ ಮಾತಾಡ್ತಿದ್ರೆ ಅದನ್ನ ನಂಬೋದಾ, ಅಥವಾ ಈ ಇಬ್ರು ಹೇಳೋದನ್ನು ನಂಬೋದಾ ಅಂತ ತಲೆ ಕೆರ್ಕೊಳ್ಳೋ ಸರದಿ ಬಡಪಾಯಿ ಪ್ರೇಕ್ಷಕರದ್ದು.
ಅದೆಲ್ಲ ಸೈಡಿಗಿಡಾಣ. ಈಗ ಮ್ಯಾಟರಿಗೆ ಬಂದ್ರೆ ಧನಂಜಯ ಒಂದು ಸೀಕ್ರೆಟ್ ಸಂಗತಿ ತಮಗೆ ಗೊತ್ತಿಲ್ಲದಂತೆ ಬಾಯಿ ಬಿಟ್ಟಿದ್ದಾರೆ. ಅದನ್ನ ಕೇಳಿ ಪಕ್ಕದಲ್ಲಿದ್ದ ನಾಗಭೂಷಣ್ ಬಾಯಿ ಬಡ್ಕೊಳ್ಳೋದು ಬಾಕಿ. ಅಷ್ಟಕ್ಕೂ ಧನಂಜಯ ಹೇಳಿದ್ದೇನು ಅಂದರೆ, 'ಐದು ಗಂಟೆ ಹೊತ್ತಿಗೂ ನನಗೆ ಒಮ್ಮೊಮ್ಮೆ ಅನಿಸುತ್ತೆ' ಅಂತ. ಅಷ್ಟಕ್ಕೂ ಅವರಿಗೇನು ಅನಿಸುತ್ತೆ, ಇದೇನು ಮಾತು, ಯಾಕೀ ಮಾತು ಬಂತು ಅಂದರೆ ಅದೂ ಇಂಟರೆಸ್ಟಿಂಗ್.
ಈ ಮ್ಯಾಚ್ ಅಷ್ಟೇಯಲ್ಲ ಇನ್ನೊಂದು ಮ್ಯಾಚ್ ಕೂಡ ಸೋತುಬಿಡಿ ಆದ್ರೆ....; RCBಗೆ ಸಿಂಪಲ್ ಸುನಿ ಮನವಿ
ಧನು ಸ್ಯಾಂಡಲ್‌ವುಡ್‌ನ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್. ಜಗ್ಗೇಶ್ ಅವ್ರ ಹಾಸ್ಯಪ್ರಧಾನ ಚಿತ್ರ 'ರಾಘವೇಂದ್ರ ಸ್ಟೋರ್ಸ್' ನಲ್ಲಿ ಜಗ್ಗೇಶ್ ಅವರೂ ಬ್ಯಾಚ್ಯುಲರ್. ಮದುವೆ ವಯಸ್ಸಾದರೂ ಮದ್ವೆ ಆಗದೇ ಇರೋ ಸಿಂಗಲ್ ಸಿಂಗಳೀಕಗಳ ಕೈಯಲ್ಲಿ ಈ ಸಿನಿಮಾದ(Movie) ಸಿಂಗಲ್ ಸುಂದ್ರ ಅನ್ನೋ ಹಾಡನ್ನು ಬಿಡುಗಡೆ ಮಾಡಿಸಬೇಕು ಅನ್ನೋದು ನಿರ್ದೇಶಕರ, ಸಂಗೀತ ನಿರ್ದೇಶಕರ ಪ್ಲಾನು. ಅವರಿಗೆ ಸಿಕ್ಕಿರೋ ಬಡಪಾಯಿಗಳು ಧನಂಜಯ ಮತ್ತು ರಕ್ಷಿತ್ ಶೆಟ್ಟಿ. ಧನಂಜಯ ಮನೆಗೇ ಸಿನಿಮಾ ಟೀಮವ್ರು ಎಂಟ್ರಿಕೊಟ್ಟಿದ್ದಾರೆ. ಆ ಹೊತ್ತಿಗೆ, 'ಸಿನಿಮಾದವ್ರಿಗೆ ಹೆಣ್ ಕೊಡದಿದ್ರೆ ಬೇಡ ಬಿಡ್ರಿ, ಸಿನಿಮಾದಲ್ಲೇ ಹತ್ ಮದ್ವೆ ಆಗ್ತೀವಂತೆ' ಅನ್ನುತ್ತಾ ದಿ ಗ್ರೇಟ್ ಧನು ಎಂಟ್ರಿ ಕೊಡ್ತಾರೆ. ಬ್ರೋಕರ್ ಮಾತಿಗೆ ಮೊದಲೇ ಸಿಟ್ಟಲ್ಲಿರೋ ಧನು, ಮ್ಯೂಸಿಕ್ ಡೈರೆಕ್ಟರ್ ಅಜನೀಶ್ ಮಾತು. 'ನಿಮ್ಗೂ ವಯಸ್ಸಾಯ್ತು, ಆದ್ರೂ ಸಿಂಗಲ್ಲಾಗೇ ಇದ್ದೀರ. ಹೀಗಾಗಿ ನಮ್ ಸಿನಿಮಾದ ಸಿಂಗಲ್ ಸಾಂಗ್ ರಿಲೀಸ್ ಮಾಡ್ಬೇಕು ಅಂದಾಗ ರೊಚ್ಚಿಗೇಳದೇ ಇರ್ತಾರ? ಆದ್ರೆ ಕ್ಯಾಮರಾ ಅನ್ ಇದೆಯಲ್ಲ, ಕಷ್ಟಪಟ್ಟು ಸಹಿಸಿಕೊಂಡು ವಿಶ್(Wish) ಮಾಡಿ ಕಳಿದ್ತಾರೆ.
ಆಮೇಲೆ ಅಜನೀಶ್ ಹತ್ರ ಧನು, ನಾಗಭೂಷಣ್ ಆಫ್ ದಿ ರೆಕಾರ್ಡ್(Of the record) ಮಾತು. 'ನಂಗೆ ಸಂಜೆ ಐದು ಗಂಟೆ ಮೇಲೆ ಮದ್ವೆ (Marriage)ಆಗಿದ್ರೆ ಚೆನ್ನಾಗಿರ್ತಿತ್ತು ಅಂತನಿಸುತ್ತೆ' ಅಂತ ಬ್ಯಾಚುಲರ್ ಅಜನೀಶ್ ಹೇಳಿದ್ರೆ, 'ನಂಗೂ ಪ್ಯಾಕಪ್ ಆದ್ಮೇಲೆ ಹಾಗನಿಸುತ್ತೆ' ಅಂತ ಧನು ಅಂತಾರೆ. ಈ ಕಡೆ ನಾಗಭೂಷಣ್, 'ನಂಗೆ ಬೆಳಬೆಳಗ್ಗೇ ಹಾಗನಿಸುತ್ತೆ' ಅಂತಾರೆ. ಅಂದಹಾಗೆ ಈ 'ಸಿಂಗಲ್ ಸುಂದ್ರ' ಹಾಡು ಬಿಡುಗಡೆ ಆಗ್ತಿರೋದು ನಾಳೆ ಸಂಜೆ ಐದು ಗಂಟೆಗೆ. ಆ ಐದು ಗಂಟೆ ಅನ್ನೋದು ಕೇಳಿ ಧನೂಗೆ ಏನನಿಸ್ತೋ ಏನೋ, 'ನಂಗೆ ಐದು ಗಂಟೆಗೂ ಒಮ್ಮೊಮ್ಮೆ ಅನಿಸುತ್ತೆ' ಅಂದು ಬಿಡೋದಾ? ಏನನಿಸುತ್ತೆ ಅಂತ ಅವ್ರು ಹೇಳಲಿಲ್ಲ, ಇವ್ರು ಕೇಳಲಿಲ್ಲ!
ಇಳಕಲ್ ಸೀರೆಯಲ್ಲಿ 'ಈ ಸಲ ಕಪ್ ನಮ್ದೇ' ಘೋಷವಾಕ್ಯ! ಆರ್‌ಸಿಬಿ ಅಭಿಮಾನಿ ಸೀರೆಗೆ ಮಹಿಳೆಯರ ಬೇಡಿಕೆ
