"ತದ್ವಿರುದ್ಧ ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಲು ನಿಗದಿಯಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಪ್ರಚಾರಕ್ಕೆ ಪ್ರಮುಖ ನಟಿ ಸುಮನ್ ರಂಗನಾಥ್ ಲಭ್ಯವಿಲ್ಲದಿರುವುದು ಚಿತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ತರುವ ಸಾಧ್ಯತೆಯಿದೆ. ಇದೀಗ ನಟಿ ಮೇಲೆ ದೂರು ದಾಖಲಾಗುವಸುದ್ದಿ ಬಂದಿದೆ.

ನಟಿ ಸುಮನ್ ರಂಗನಾಥನ್ ವಿರುದ್ಧ 'ತದ್ವಿರುದ್ಧ' ಚಿತ್ರತಂಡದಿಂದ ವಾಣಿಜ್ಯ ಮಂಡಳಿಗೆ ದೂರು ದಾಖಲು ಮಾಡಲು ಆಗಮಿಸಿತ್ತು.

ಬಹುಭಾಷಾ ನಟಿಯ ಮೇಲೆ ಗಂಭೀರ ಆರೋಪ ಬಂದಿದೆ. ಕೊಡಬೇಕಾದ ಸಂಭಾವನೆ ಕೊಟ್ಟಿದ್ದರೂ ನಟಿ ಸಿನಿಮಾದ ಪ್ರಚಾರಕ್ಕೆ ಆಗಮಿಸುತ್ತಿಲ್ಲ ಎಂದು 'ತದ್ವಿರುದ್ಧ' ಚಿತ್ರತಂಡ ಆರೋಪಿಸಿ ಇಂದು ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲು ಮಾಡಲು ಬಂದಿತ್ತು. ಆದರೆ, ಫಿಲಂ ಚೇಂಬರ್ ಈ ದೂರು ಸ್ವೀಕರಿಸಿಲ್ಲ, ಬದಲಿಗೆ ಇದನ್ನು ಕಲಾವಿದರ ಸಂಘಕ್ಕೆ ನೀಡಿ ಎಂದಿದೆ ಎಂಬ ಸುದ್ದಿ ಇದೆ.

ತ ನಟಿ ಸುಮನ್ ರಂಗನಾಥನ್ ವಿರುದ್ಧ 'ತದ್ವಿರುದ್ಧ' ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೂ, ನಟಿಗೆ ನೀಡಬೇಕಾದ ಸಂಭಾವನೆಯನ್ನು ಸಂಪೂರ್ಣವಾಗಿ ಪಾವತಿಸಿದ್ದರೂ ಅವರು ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಸಹಕರಿಸುತ್ತಿಲ್ಲ ಎಂದು ನಿರ್ಮಾಣ ಸಂಸ್ಥೆ 'ಚಾರ್ಮಿಯನ್ ಮೋಷನ್ ಪಿಕ್ಚರ್ಸ್' ಆರೋಪಿಸಿದೆ.

ದೂರಿನಲ್ಲೇನಿದೆ?

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಲ್ಲಿಸಿರುವ ದೂರಿನ ಪತ್ರದಲ್ಲಿ ಚಿತ್ರತಂಡ ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದೆ. "2023ರ ಏಪ್ರಿಲ್ 7 ರಂದು ಮಾಡಿಕೊಳ್ಳಲಾದ ಒಪ್ಪಂದದ ಪ್ರಕಾರ ಸುಮನ್ ರಂಗನಾಥನ್ ಅವರು ಅಭಿನಯ, ಡಬ್ಬಿಂಗ್ ಹಾಗೂ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಬೇಕಾಗಿತ್ತು. ಕಳೆದ 30 ದಿನಗಳಿಂದ ನಟಿ ಹಾಗೂ ಅವರ ಮ್ಯಾನೇಜರ್ ಫೋನ್ ಕರೆ, ವಾಟ್ಸಾಪ್ ಸಂದೇಶಗಳ ಮೂಲಕ ಸಂಪರ್ಕಿಸಲು ನಿರಂತರ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ" ಎಂದು ಚಿತ್ರತಂಡ ಹೇಳಿದೆ.

‘ತದ್ವಿರುದ್ಧ ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಲು ನಿಗದಿಯಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಪ್ರಚಾರಕ್ಕೆ ಪ್ರಮುಖ ನಟಿ ಲಭ್ಯವಿಲ್ಲದಿರುವುದು ಚಿತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ತರುವ ಸಾಧ್ಯತೆಯಿದೆ. ನಮ್ಮ ಚಿತ್ರದ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿಯು ಅಗತ್ಯ ಮಧ್ಯಸ್ಥಿಕೆ ವಹಿಸಬೇಕು. ನಟಿಯೊಂದಿಗೆ ಸಮನ್ವಯ ಸಾಧಿಸಿ ಶೀಘ್ರದಲ್ಲೇ ಪರಿಹಾರ ಕಂಡುಕೊಡಬೇಕು’ ಎಂದು ನಿರ್ಮಾಪಕರು ಚೇಂಬರ್‌ಗೆ ಮನವಿ ಪತ್ರ ಕೊಟ್ಟಿದ್ದಾರೆ.

ಆದರೆ, ಫಿಲಂ ಚೇಂಬರ್ ಅದನ್ನು ಕಲಾವಿದರ ಸಂಘಕ್ಕೆ ಕೊಡಲು ಹೇಳಿದೆ. ‘ಇದನ್ನ ನಾವು ಪತಿಗಣಿಸೋಕೆ ಆಗಲ್ಲ. ಕಲಾವಿದರ ಸಂಘಕ್ಕೆ ಮನವಿ ಮಾಡಿ’ ಎಂದು ಉಪಾಧ್ಯಕ್ಷ ಸುಂದರ್ ರಾಜ್ ಅವರು ಚಿತ್ರತಂಡಕ್ಕೆ ಹೀಗೆ ಮನವಿ ಮಾಡಿ ದೂರುದಾರರನ್ನ ವಾಪಸ್ ಕಳಿಸಿದ್ದಾರೆ ಎನ್ನಲಾಗಿದೆ. 

ಫಿಲಂ ಚೆಂಬರ್ ಗೆ ದೂರು ನೀಡಲು ಅಗಮಿಸಿದ್ದ 'ಚಾರ್ಮಿಯನ್ ಮೋಷನ್ ಪಿಕ್ಚರ್ಸ್ ಪ್ರೊಡಕ್ಷನ್ ಹೌಸ್ ಪರ ವಕೀಲ ವಿಜಯ್ ಹಾಗೂ ಚಿತ್ರತಂಡಕ್ಕೆ ಫಿಲಂ ಚೇಂಬರ್ ಈ ಮೂಲಕ ಕಲಾವಿದರ ಸಂಘದ ದಾರಿ ತೋರಿಸಿದ್ದಾರೆ. ಈ ಮೂಲಕ ಕರಾವಳಿ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ಹೊಸದೊಂದು ವಿವಾದ ಶುರುವಾಗಿದೆ. ಇದು ಎಲ್ಲಿಗೆ ಹೋಗಿ ತಲುಪುತ್ತೆ ಎಂಬುದನ್ನು ಕಾದು ನೋಡಬೇಕಿದೆ.