Asianet Suvarna News Asianet Suvarna News

ವಂಚನೆ ಆರೋಪ; ಉಪೇಂದ್ರ ಅಣ್ಣನ ಮಗನ 'ಸೂಪರ್ ಸ್ಟಾರ್' ಸಿನಿಮಾ ನಿರ್ದೇಶಕನ ವಿರುದ್ಧ ದೂರು ದಾಖಲು

ರಿಯಲ್ ಸ್ಟಾರ್ ಉಪೇಂದ್ರ  ಅಣ್ಣನ ಮಗ ನಿರಂಜನ್​ ಸುಧೀಂದ್ರ  ನಾಯಕನಾಗಿ ನಟಿಸುತ್ತಿರುವ ‘ಸೂಪರ್​ ಸ್ಟಾರ್​’ ಸಿನಿಮಾ ಈಗ ವಿವಾದಕ್ಕೆ ಸಿಲುಕಿದೆ. ಈ ಸಿನಿಮಾದ ನಿರ್ದೇಶಕರ ವಿರುದ್ಧ ದೂರು ದಾಖಲಾಗಿದೆ. 

Complaint Against niranjan starrer Super star film director Venkatesh Babu sgk
Author
First Published Nov 14, 2022, 1:24 PM IST

ರಿಯಲ್ ಸ್ಟಾರ್ ಉಪೇಂದ್ರ  ಅಣ್ಣನ ಮಗ ನಿರಂಜನ್​ ಸುಧೀಂದ್ರ  ನಾಯಕನಾಗಿ ನಟಿಸುತ್ತಿರುವ ‘ಸೂಪರ್​ ಸ್ಟಾರ್​’ ಸಿನಿಮಾ ಈಗ ವಿವಾದಕ್ಕೆ ಸಿಲುಕಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ತಡವಾಗಿದ್ದಲ್ಲದೆ ಈ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ. ಸೂಪರ್​ ಸ್ಟಾರ್ ಚಿತ್ರದ ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು  ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ ಮೈಲಾರಿ.  ಅಂದಹಾಗೆ ಈ ಚಿತ್ರಕ್ಕೆ ಆರಂಭದಲ್ಲಿ ಮೈಲಾರಿ ಅವರು ಹಣ ಹೂಡಿದ್ದರು. ನಂತರ ನಿರ್ಮಾಪಕರ ಸ್ಥಾನಕ್ಕೆ ಸತ್ಯನಾರಾಯಣ ಹಾಗೂ ರಮಾದೇವಿ ಬಂದರು. ಈಗ ನಿರ್ಮಾಪಕ ಮೈಲಾರಿ ಅವರು ತಮಗೆ ವಂಚನೆ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ಹೆಣ್ಣೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಮೈಲಾರಿ ನೀಡಿದ ದೂರಿನಲ್ಲಿ ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು ಅವರು ಸಿನಿಮಾ ಸೂಪರ್​ ಹಿಟ್​ ಆಗುತ್ತದೆ, ಹಣ ಬರುತ್ತದೆ ಎಂದು ಪ್ರಚೋದನೆ ನೀಡಿದ್ದರು. ಹಾಗಾಗಿ ಮಾತೃಶ್ರೀ ಎಂಟರ್​ಪ್ರೈಸಸ್​ ಬ್ಯಾನರ್​ ಅಡಿಯಲ್ಲಿ ಹಣ ಹೂಡಿರುವುದಾಗಿ ಹೇಳಿದ್ದಾರೆ. ಕೊವಿಡ್​ ಹಿನ್ನೆಲೆಯಲ್ಲಿ ಚಿತ್ರದ ಕೆಲಸಗಳು ತಡವಾದವು. ಚಿತ್ರೀಕರಣ ಸ್ಥಗಿತಗೊಂಡಿತ್ತು. ಆ ಗ್ಯಾಪ್ ನಲ್ಲಿ ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು ಅವರು ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲಿಕತ್ವ ಬದಲಿಸಿದ್ದಾರೆ ಎಂದು ಮೈಲಾರಿ ಆರೋಪ ಮಾಡಿದ್ದಾರೆ. 

ಫೈಟ್ ನೋಡಿ ನಾನು ಸುದೀಪ್ ಅಚ್ಚರಿ ಪಟ್ವಿ; 'ಸೂಪರ್‌ಸ್ಟಾರ್' ನಿರಂಜನ್ ಹೊಗಳಿದ ಉಪೇಂದ್ರ

ನಿರ್ಮಾಪಕ ಮೈಲಾರಿ ಅವರಿಂದ ನಿರ್ದೇಶಕ ರಮೇಶ್​ ವೆಂಕಟೇಶ್​ ಬಾಬು 1 ಕೋಟಿ 10 ಲಕ್ಷ ರೂಪಾಯಿ ಪಡೆದಿದ್ದರು, ಅದನ್ನು ಕಲಾವಿದರಿಗೂ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಿಸಿದ್ದಾರೆ. ಅಷ್ಟೆಯಲ್ಲದೆ ಮೈಲಾರಿ  ಅವರು ನಿರ್ದೇಶಕರ ವಿರುದ್ಧ ಬೆದರಿಕೆ ಆರೋಪ ಮಾಡಿದ್ದಾರೆ.  ಹಾಕಿದ ಬಂಡವಾಳವನ್ನು ನಿರ್ದೇಶಕರ ಬಳಿ ವಾಪಸ್ ನೀಡುವಂತೆ ಕೇಳಿದಕ್ಕೆ ತಮಗೆ ಪ್ರಾಣ ಬೆದರಿಕೆ ಮತ್ತು ಧಮ್ಕಿ ಹಾಕಿದ್ದಾರೆ ಎಂದು ಮೈಲಾರಿ ಆರೋಪಿಸಿದ್ದಾರೆ. ಮೊದಲೇ ತಡವಾಗಿದ್ದ ಸೂಪರ್ ಸ್ಟಾರ್ ಸಿನಿಮಾ ಇದೀಗ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. 

ಚಿತ್ರರಂಗದಲ್ಲಿ ನೆಲೆ ನಿಲ್ಲಲು ಬ್ಯಾಕ್‌ಗ್ರೌಂಡ್‌ ಇದ್ದರೆ ಸಾಲದು: ನಿರಂಜನ್‌ ಸುಧೀಂದ್ರ

ನಾಯಕ ನಿರಂಜನ್ 2 ಹಾಫ್ ಸಿನಿಮಾ ಮೂಲಕ ಬಣ್ಣದ ಲೋಕದ ಪಯಣ ಪ್ರಾರಂಭ ಮಾಡಿದರು. ಈ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ ಜೊತೆ ನಟಿಸಿದ್ದರು. ಬಳಿಕ ನಮ್ಮ ಹುಡುಗರು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಸೂಪರ್ ಸ್ಟಾರ್  ಮೂಲಕ ಅಭಿಮಾನಿಗಳ ಮುಂದೆ ಬರಬೇಕಿತ್ತು. ಆದರೀಗ ಈ ಸಿನಿಮಾ ಈಗ ಸಂಕಷ್ಟದಲ್ಲಿ ಸಿಲುಕಿದ್ದು ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. 


 

Follow Us:
Download App:
  • android
  • ios