ಯಜಮಾನ ಚಿತ್ರದಲ್ಲಿ ತಾರಾಂಗಣ ಬಹಳ ದೊಡ್ಡದು. ಬಿಗ್ ಸ್ಕ್ರೀನ್ ನಟರೂ ಹಾಗೂ ಕಿರುತೆರೆ ಕಲಾವಿದರೂ ಸೇರಿ ಮಾಡಿರುವ ಸಿನಿಮಾ ಇದಾಗಿದೆ.

ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಸಯ್ಯಾ, ಶಿವರಾಜ್ ಕೆ. ಆರ್ ಪೇಟೆ ಹಾಗೂ ಹಿತೇಶ್ ಹಾಸ್ಯ ಕಲಾವಿದರಾಗಿ ಸಾಧು ಕೋಕಿಲ ಜೋಡಿ ಆಗಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸಿರುವ ನಟರು ವೇದಿಕೆ ಮೇಲೆ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡುವಾಗ ‘ಏನೂ ಮಾತನಾಡೋಕೆ ನನಗೆ ಗೊತ್ತಿಲ್ಲ. ಸಿನಿಮಾದಲ್ಲಿ ನಮಗೆ ಅವಕಾಶ ಕೊಟ್ಟ ದರ್ಶನ್ ಸರ್ ಹಾಗೂ ಹರಿ ಕೖಷ್ಣ ಸರ್ ಗೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ಭಾವುಕರಾಗಿ ಸಂಜು ಬಸಯ್ಯಾ ಕಣ್ಣೀರಿಟ್ಟರು.

ದರ್ಶನ್ ಹಾಗೂ ದೇವರಾಜ್ ಕಣ್ಣಲ್ಲೇ ಮಾತಾಡ್ತಾರಂತೆ; ಹೌದಾ?

‘ಮೀಡಿಯಾ ಹೌಸ್ ಗೆ ನನ್ನ ಥ್ಯಾಂಕ್ಸ್. ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಅಭಿನಯಿಸುವಾಗ ನಮ್ಮನ್ನು ನೋಡಿ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಕ್ಕೆ. ನಾನು ಯಾವಾಗಲೂ ಹೇಳುತ್ತಿದ್ದೆ. ನಮ್ಮ ಖುಷಿ ಏನಂದ್ರೆ ದರ್ಶನ್ ಅಣ್ಣನ ಹಿಂದೆ ಕೈ ಕಟ್ಟಿ ನಿಲ್ಲುವುದು ಒಂದು ಭಾಗ್ಯ. ನಾನು ಈ ವೇದಿಕೆಯಲ್ಲಿ ನಿಲ್ಲುವುದಕ್ಕೆ ದರ್ಶನ್ ಸರ್, ಹರಿಕೃಷ್ಣ ಸರ್ ಕಾರಣ ’ ಎಂದು ಕಾಮಿಡಿ ಕಿಲಾಡಿ ಹಿತೇಶ್ ಮಾತನಾಡಿದರು.