ಸ್ಯಾಂಡಲ್ ವುಡ್ ಬ್ಲ್ಯಾಕ್ ಬಸ್ಟರ್ ಸಿನಿಮಾ ಯಜಮಾನ ಚಿತ್ರದಲ್ಲಿ ಸೂಪರ್ ಕಾಂಬಿನೇಶನ್ ಅಂದ್ರೆ ದರ್ಶನ್ ಮಾವನಾಗಿ ಅಂದ್ರೆ ರಶ್ಮಿಕಾಳ ತಂದೆ ಆಗಿ ಅಭಿನಯಿಸಿದ ದೇವರಾಜ್. ಸಿನಿಮಾದಲ್ಲಿ ಮಾತ್ರವಲ್ಲದೇ ನಿಜ ಜೀವನದಲ್ಲೂ ಒಳ್ಳೆಯ ಸಂಬಂಧವಿರುವ ಇವರು ಸಿನಿಮಾ ವೇಳೆ ಕಣ್ಸನ್ನೆ ಮಾತುಕಥೆ ಬಗ್ಗೆ ಹೇಳಿದ್ದಾರೆ.

 

ಸೆಟ್ ನಲ್ಲಿ ದರ್ಶನ್ ಹಾಗೂ ನಿಮ್ಮ ಮಾತುಕಥೆ ಹೇಗಿರುತ್ತದೆ? ಎಂದು ಪ್ರಶ್ನಿಸಿದಾಗ, ‘ಬಹಳ ಡಿಟೇಲ್ ಆಗಿ ಮಾತಾಡಲ್ಲ. ನಿರ್ದೇಶಕರು ಹೇಳಿದನ್ನು ಮಾಡುವ ಪ್ರಯತ್ನ ಮಾಡ್ತೀವಿ. ಆದರೆ ಸಣ್ಣ ಸಣ್ಣ ಬದಲಾವಣೆಯನ್ನು ನಾವೇ ಹೇಳಿಕೊಳ್ಳುತ್ತೀವಿ. ಹೀಗೆ ಮಾಡಿದರೆ ಹೇಗೆ? ಈ ಪಾತ್ರವನ್ನೂ ಇನ್ನೂ ಬೇರೆ ರೀತಿ ಹೇಗೆ ಮಾಡಬಹುದು? ಇದೆಲ್ಲಾ ಕಣ್ಣಲ್ಲೇ ಹೇಳಿಕೊಳ್ಳುತ್ತೇವೆ. ಅಲ್ಲೇ ಎಲ್ಲಾ ಅರ್ಥ ಆಗುತ್ತದೆ’ ಎಂದು ದೇವರಾಜ್ ಹೇಳಿಕೊಂಡಿದ್ದಾರೆ.

ಕೊನೆಯುಸಿರೆಳೆದ ಮಂಡ್ಯದ ಪುಟ್ಟ ಡಿ-ಬಾಸ್ ಅಭಿಮಾನಿ

ದರ್ಶನ್ ಜೊತೆ ಆಫ್ ಸ್ಕ್ರೀನ್ ನಿಮಗೆ ಹೇಗೆ ಅನಿಸುತ್ತದೆ? ಎಂದು ಕೇಳಿದಾಗ ‘ಆಫ್ ಸ್ಕ್ರೀನ್ ಒಳ್ಳೆಯ ಸ್ನೇಹಿತರಂತೆ ಇದ್ದ ಕಾರಣ ಆ್ಯಕ್ಟ್ ಮಾಡಲು ಕಷ್ಟ ಆಗಲ್ಲ’ ಎಂದು ನಗು ನಗುತ್ತಾ ಹೇಳಿದರು.

ಏನೇ ಅದರೂ ದರ್ಶನ್ ತುಂಬಾ ಸಿಂಪಲ್. ಆದರೂ ಎಲ್ಲೂ ತನ್ನ ಸ್ಟಾರ್ ಗಿರಿಯನ್ನು ತೋರಿಸಿಕೊಳ್ಳುವುದಿಲ್ಲ. ಅವರ ಚಿತ್ರ ಯಶಸ್ಸಾಗಲಿ ಎಂದು ಆಶಿಸಿದ್ದಾರೆ.