ಹೊಸ ಹುಡುಗರ ತಂಡವೊಂದು ರಿಲೀಸ್ ಮಾಡಿದ ತೆಲುಗು 'ಕಲರ್‌ ಫೋಟೋ' ಸಿನಿಮಾ ಸೂಪರ್ ಹಿಟ್‌ ಆಗಿದೆ. ನಾಯಕ ಸುಹಾಸ್‌ ಹಾಗೂ ನಾಯಕಿ ಚಾಂದಿನಿ ಅಭಿನಯಕ್ಕೆ ಸಿನಿ ಪ್ರೇಮಿಗಳು ಫಿದಾ ಆಗಿದ್ದಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. 

ಗಾಜನೂರಿನಲ್ಲಿ ಮಿಸ್ಸಿಂಗ್‌ ಕೇಸ್‌;ಸತ್ಯ ಕತೆ ಆಧರಿತ ಸಿನಿಮಾ ಪೋಸ್ಟರ್‌ ರಿಲೀಸ್‌ ಮಾಡಿದ ಧ್ರುವ ಸರ್ಜಾ! 

ನಟಿ ಚಾಂದಿನಿ 'ಕಲರ್ ಫೋಟೋ' ಚಿತ್ರದ ಬಳಿಕ ತುಂಬಾನೇ ಸಿನಿಮಾ ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಈಗಾಗಲೇ 'ಸೂಪರ್ ಓವರ್' ಸಿನಿಮಾ ಬಿಡುಗಡೆ ಹಂತ ತಲುಪಿದ್ದು, ಪ್ರಚಾರ ಕಾರ್ಯಕ್ರಮ ಅರಂಭವಾಗಿದೆ. ಹೀಗೆ ಒಂದು ಖಾಸಗಿ ವೇದಿಕೆಯಲ್ಲಿ ಚಾಂದಿನಿ ಪ್ರಚಾರ ಮಾಡುವಾಗ ಕಣ್ಣೀರಿಟ್ಟಿದ್ದಾರೆ. ಬ್ಯೂಟಿಫುಲ್ ಹುಡುಗಿ ಕಣ್ಣಲ್ಲಿ ನೀರು ನೋಡಿ ವೇದಿಕೆ ಎದುರಿದ್ದ ಜನರೆಲ್ಲಾ ಭಾವುಕರಾಗಿದ್ದಾರೆ.

ನಡೆದದ್ದು ಏನು?
ಚಾಂದಿನಿ ಅಭಿನಯಿಸಿರುವ ಸೂಪರ್ ಓವರ್ ಸಿನಿಮಾಕ್ಕೆ ಪ್ರವೀಣ್ ವರ್ಮಾ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆದರೆ ಚಿತ್ರೀಕರಣ ಎರಡನೇ ಹಂತದಲ್ಲೇ ಪ್ರವೀಣ್ ಆಪಘಾತವೊಂದರಿಂದ ಕೊನೆ ಉಸಿರಳೆದರು. ದುಖಃದಲ್ಲಿದ್ದ ತಂಡ ಪ್ರವೀಣ್ ಕನಸಿನ ಚಿತ್ರಕ್ಕೆ ದಾರಿ ತೋರಬೇಕೆಂದು ಎದುರಾದ ಸಂಕಷ್ಟಗಳನ್ನು ಸಹಿಸಿಕೊಂಡು, ಸಂಪೂರ್ಣ ಚಿತ್ರೀಕರಣ  ಮಾಡಿ ರಿಲೀಸ್ ಹಂತಕ್ಕೆ ತಂದಿದ್ದಾರೆ.

ಉಪ್ಪಿ ಜತೆ 'ಎ' ಚಿತ್ರದಲ್ಲಿ ನಟಿಸಿದ ನಟಿ ಚಾಂದಿನಿ ಫೋಟೋಸ್.

ವೇದಿಕೆ ಮೇಲೆ ಚಿತ್ರದ ಬಗ್ಗೆ ಮಾತನಾಡುತ್ತಿದ್ದ ಚಾಂದಿನಿ ಪ್ರವೀಣ್‌ರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಆ ಸಮಯದಲ್ಲಿ ಚಾಂದಿನಿ ಮಾತ್ರವಲ್ಲದೇ ಇಡೀ ಚಿತ್ರತಂಡ ಕಣ್ಣೀರಿಟ್ಟಿತ್ತು. ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಘಟನೆ ಹೊಂದಿರುವ ಸಿನಿಮಾ ಇದಾಗಿದ್ದು, ಖಂಡಿತ ಹಿಟ್‌ ಆಗುತ್ತದೆ ಡೋಂಡ್ ವರಿ ಎಂದು ಅಭಿಮಾನಿಗಳು ಚಾಂದಿನಿಗೆ ಸಮಾಧಾನ ಮಾಡಿದ್ದಾರೆ.