ಮಾಲಾಶ್ರಿ 'ಕೋತಿ' ಹೇಳಿಕೆ ಅಸಲಿಯತ್ತು ಬಹಿರಂಗ; ಕನಸಿನ ರಾಣಿ ನಿಜವಾಗಿ ಹಾಗೆ ಹೇಳಿದ್ರಾ?

ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಸ್ಟಾರ್ ನಟರ ಲೆವಲ್ಲಿಗೇ ಮಾಲಾಶ್ರೀಯವರು ಬೆಳೆದು ನಿಂತರು. 'ನಭೋ ನಭವಿಷ್ಯತಿ' ಎಂಬಂತೆ ಮಿಂಚುತ್ತಿದ್ದ ಮಾಲಾಶ್ರೀ ಅವರಿಗೆ ಬರಸಿಡಿಲಿನಂತೆ ಬಂದು ಎರಗಿ ಅವರ ಸಿನಿಮಾ ಜೀವನವನ್ನೇ ಅಲ್ಲೋಲಕಲ್ಲೋಲ ಎಂಬಂತೆ ಮಾಡಿದ್ದು ಅದೊಂದು ಸುದ್ದಿ!..

Clarification for Kannada actress Nanjundi Kalyana fame Malashri old Controversy srb

ಮಾಲಾಶ್ರೀ (Malashri)ಎಂಬ ಹೆಸರನ್ನು ಕನ್ನಡ ಚಿತ್ರರಂಗ ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ. 90ರ ದಶಕದಲ್ಲಿ ಕನ್ನಡ ಚಿತ್ರರಂಗದ ಅನಭಿಷಿಕ್ತ ರಾಣಿಯಾಗಿ ಮೆರೆದ ಮಾಲಾಶ್ರೀ, ಈಗ ಕನ್ನಡನಾಡಿನ ಸೊಸೆಯೂ ಹೌದು. ಮಾಲಾಶ್ರೀ ಅಪ್ಪ-ಅಮ್ಮ ಪಂಜಾಬಿ ಮೂಲದವರಾದರೂ ಮಾಲಾಶ್ರೀ ಹುಟ್ಟಿ ಬೆಳೆದಿದ್ದು ಆಂಧ್ರ ಪ್ರದೇಶದಲ್ಲಿ. ಹೀಗೆ ನಟಿ ಮಾಲಾಶ್ರೀ ತೆಲುಗು ಮೂಲದವರಾದರೂ ಈಗ ಅವರ ಮಕ್ಕಳು ಕರ್ನಾಟಕದವರು. ಕನ್ನಡದ ನಿರ್ಮಾಪಕ ರಾಮು ಅವರನ್ನು ಮದುವೆಯಾಗಿರುವ ಮಾಲಾಶ್ರೀ, ಈಗ ಕರ್ನಾಟಕವೇ ತಮ್ಮ ಮನೆ ಎಂದು ಇಲ್ಲೇ ಸೆಟ್ಲ್ ಆಗಿದ್ದಾರೆ. 

ನಟಿ ಮಾಲಾಶ್ರೀ ಅವರು 'ನಂಜುಂಡಿ ಕಲ್ಯಾಣ (1989) ರಲ್ಲಿ ನಟ ರಾಘವೇಂದ್ರ ರಾಜ್‌ಕುಮಾರ್ ಜೋಡಿಯಾಗಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಅವರು ದಿನದಿನಕ್ಕೂ ಅದ್ಯಾಪ ಪರಿ ಜನಪ್ರಿಯತೆ ಪಡೆದರು ಎಂದರೆ, ಕನ್ನಡ ಚಿತ್ರರಂಗದಲ್ಲಿ ಮೊಟ್ಟಮೊದಲ ಬಾರಿಗೆ ಸ್ಟಾರ್ ನಟರ ಲೆವಲ್ಲಿಗೇ ಮಾಲಾಶ್ರೀಯವರು ಬೆಳೆದು ನಿಂತರು. ನಟಿಸಿದ ಚಿತ್ರಗಳೆಲ್ಲವೂ ಸೂಪರ್ ಹಿಟ್. ನಂಜುಂಡಿ ಕಲ್ಯಾಣ ವರ್ಷಗಟ್ಟಲೇ ಓಡಿದ್ದರೆ, ಹೆಚ್ಚಿನವು ನೂರು ದಿನ ದಾಟಿರುವ ಚಿತ್ರಗಳೇ. ಸೋಲಿನಲ್ಲಿದ್ದ ಅದೆಷ್ಟೂ ನಿರ್ಮಾಪಕರು ಮಾಲಾಶ್ರೀ ಚಿತ್ರದಿಂದ ಸಾಲ ತೀರಿಸಿಕೊಂಡಿದ್ದೂ ಉಂಟು.

ಮಾಲಾಶ್ರೀ ಮತ್ತು ಸುಧಾರಾಣಿ ಮಧ್ಯೆ ಅಂದು ಏನಾಗಿತ್ತು? ಸೀಕ್ರೆಟ್ ಬಿಚ್ಚಿಟ್ಟ 'ಮನ ಮೆಚ್ಚಿದ ಹುಡುಗಿ'..! 

'ನಭೋ ನಭವಿಷ್ಯತಿ' ಎಂಬಂತೆ ಮಿಂಚುತ್ತಿದ್ದ ಮಾಲಾಶ್ರೀ ಅವರಿಗೆ ಬರಸಿಡಿಲಿನಂತೆ ಬಂದು ಎರಗಿ ಅವರ ಸಿನಿಮಾ ಜೀವನವನ್ನೇ ಅಲ್ಲೋಲಕಲ್ಲೋಲ ಎಂಬಂತೆ ಮಾಡಿದ್ದು ಅದೊಂದು ಸುದ್ದಿ! 'ಮಾಲಾಶ್ರೀ ಅವರು ಯಾವುದೋ ಒಂದು ಮೀಡಿಯಾದಲ್ಲಿ ಮಾತನಾಡುತ್ತ 'ಕನ್ನಡದಲ್ಲಿ ನನ್ನ ಜೊತೆ ಕೋತಿ ನಟಿಸಿದರೂ ಚಿತ್ರ ಹಿಟ್ ಆಗುತ್ತೆ..' ಎಂದಿದ್ದಾರೆ ಎಂಬ ಸುದ್ದಿ ಅದೆಲ್ಲಿಂದಲೂ ಹಾರಿ ಬಂದು ಕನ್ನಡ ನಾಡಿಗೆ ಅಪ್ಪಳಿಸಿತು ನೋಡಿ, ಮಾಲಾಶ್ರೀ ಅವರಿಗೆ ನಿಜವಾಗಿಯೂ ಶಾಕ್ ಆಗಿತ್ತು.  

ಆದರೆ, ಆ ಸುದ್ದಿಯ ಅಸಲಿಯತ್ತೇನು? ನಿಜವಾಗಿಯೂ ಮಾಲಾಶ್ರೀ ಹಾಗೆ ಹೇಳಿದ್ದರೇ ಎಂಬ ಫ್ಯಾಕ್ಟ್ ಚೆಕ್ ಕೂಡ ಯಾರೂ ಮಾಡಲಿಲ್ಲ. ಆ ಗಾಳಿ ಸುದ್ದಿ ಕನ್ನಡ ಚಿತ್ರರಂಗ ಹಾಗು ಸಿನಿಪ್ರೇಕ್ಷಕರ ಕಿವಿಗೆ ಬಿದ್ದ ಬಳಿಕ ಮಾಲಾಶ್ರೀ ಅಭಿಮಾನಿಗಳೇನೂ ಕಮ್ಮಿಯಾಗಲಿಲ್ಲ. ಆದರೆ, ಕೆಲವು ವಿರೋಧಿಗಳು ಹುಟ್ಟಿಕೊಂಡರು. ಮಾಲಾಶ್ರೀ ಅವರ ಬಗ್ಗೆ ಕೆಟ್ಟದಾಗಿ ಟೀಕೆಗಳು ಕೆಲವು ಪತ್ರಿಕೆಗಳಲ್ಲಿ ಮೂಡಿ ಬಂದವು. ಕೆಲವು ನಟರು 'ಮಾಲಾಶ್ರೀ ಅವರೊಂದಿಗೆ ತಾವು ನಟಿಸುವುದಿಲ್ಲ' ಎಂದಿದ್ದೂ ಅಯ್ತು. 

ಆದರೆ, ಅಷ್ಟೊತ್ತಿಗಾಗಲೇ ಮಾಲಾಶ್ರೀ ಅವರು ಕನ್ನಡ ಚಿತ್ರರಂಗವನ್ನು ಆಳಿದ್ದು ಆಗಿತ್ತು. ಯಾವ ನಟಿಯೂ ಗಳಿಸಲಾಗದ ಜನಪ್ರಿಯತೆ ಪಡೆದೂ ಆಗಿತ್ತು. ಅಷ್ಟರಲ್ಲಿ ಅವರ ಬೇಡಿಕೆ ವಯಸ್ಸಿಗೆ ತಕ್ಕಂತೆ ಕಡಿಮೆ ಆಗುತ್ತಲಿತ್ತು. ಅದೇ ವೇಳೆ ಈ ಸುದ್ದಿಯೂ ಸೇರಿಕೊಂಡು ನಟಿ ಮಾಲಾಶ್ರೀ ಅವರು ಸಹಜವಾಗಿ ಚಿತ್ರರಂಗದಲ್ಲಿ ಸ್ವಲ್ಪ ಮಟ್ಟಿಗೆ ಹಿನ್ನಡೆ ಕಂಡರು. ಮದುವೆಯಾಗಿ ಸಂಸಾರಕ್ಕೆ ಕಾಲಿಟ್ಟರು, ಎರಡು ಮುದ್ದು ಮಕ್ಕಳ ತಾಯಿಯೂ ಆಗಿ ಕನ್ನಡ ನಾಡಿನಲ್ಲೇ ನೆಲೆಗೊಂಡರು. 

ಲಕ್ಷ್ಮೀ-ಮಾಲಾಶ್ರೀ ಅವ್ರೆಲ್ಲ ಯಾವುದೇ ಕಂಪ್ಲೇಂಟ್ ಮಾಡ್ತಿರ್ಲಿಲ್ಲ, ಸಿನಿಮಾ ಪ್ರೀತಿ ಅಷ್ಟಿತ್ತು: ಕೆ ಮಂಜು!

ಇಂದಿಗೂ ಮಾಲಾಶ್ರೀ ಅವರಿಗೆ ಬಹಳಷ್ಟು ಅಭಿಮಾನಿಗಳು ಇದ್ದಾರೆ. ಆದರೆ, ಕೆಲವರು ಹಿಂದಿನ ಆ ಸುದ್ದಿಯನ್ನು ನಂಬಿ ಈಗಲೂ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. ಅಂಥವರಿಗೆ ಮಾಲಾಶ್ರೀ ಅವರ ಕಡೆಯಿಂದ ಇತ್ತೀಚೆಗೆ ಯಾವುದೇ ಸ್ಪಷ್ಟೀಕರಣ ಕೂಡ ಬಂದಿರಲಿಲ್ಲ. 'ತಾವು ಹೇಳಿದ್ದೇ ಬೇರೆ, ಸುದ್ದಿಯಾಗಿದ್ದೇ ಬೇರೆ..' ಎಂಬುದನ್ನು ಅರಿತಿದ್ದ ನಟಿ ಮಾಲಾಶ್ರೀ, ಅದೊಂದು ಸುಳ್ಳು ಸುದ್ದಿ, ಯಾವ ಕನ್ನಡಿಗರೂ ಅದನ್ನು ನಂಬಲಾರರು ಎಂದೇ ಭಾವಿಸಿಬಿಟ್ಟರು. ಬಹುತೇಕ ಹಾಗೇ ಆಯಿತು ಕೂಡ. ಆದರೂ ಕೆಲವರು ಸುಳ್ಳನ್ನೇ ನಂಬಿಕೊಂಡು ಈಗಲೂ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಲೇ ಇರುತ್ತಾರೆ!

ಆದರೆ, ಮಾಲಾಶ್ರೀ ಅವರು ಅಂದೇ ಆ ಬಗ್ಗೆ ಸ್ಪಷ್ಟೀಕರಣ ಕೊಟ್ಟುಬಿಡಬೇಕಿತ್ತು ಎಂಬುದು ಹಲವರ ಅನಿಸಿಕೆ, ಕಾರಣ, ಹಿಂದಿನ ಜನರೇಶನ್ನಿಂದ ಆ ಸುದ್ದಿ ಈ ಜನ್ನರೇಶನ್ನಿಗೂ ಹರಡಿ ಮುಂದಿನ ಜನರೇಶನ್ನಿಗೂ ಅದು ಪಾಸ್ ಆಗುತ್ತದೆ ಎಂದೆಲ್ಲ ನಟಿ ಮಾಲಾಶ್ರೀ ಭಾವಿಸಲೇ ಇಲ್ಲ. ತಮ್ಮ ಕೆಲಸವಾಯ್ತು, ತಮ್ಮ ಕುಟುಂಬವಾಯ್ತು ಎಂಬಂತೆ ಇದ್ದುಬಿಟ್ಟರು. ಆದರೆ, ಇತ್ತೀಚೆಗೆ ಹೀಗೆ ಮಾತುಕತೆಯಲ್ಲಿ ಈ ಸಂಗತಿ ಬಂದಾಗ ಅವರು ತಾವು ಅಂದು ಆಡಿದ ಮಾತು ನಿಜವಾಗಿಯೂ ಏನಿತ್ತು ಎಂಬ ಗುಟ್ಟು ಬಿಚ್ಚಿಟ್ಟಿದ್ದಾರೆ. 

ಹೌದು, ಮಾಲಾಶ್ರೀ ಕನ್ನಡದ ಜನಪ್ರಿಯ ನಟಿಯಾಗಿದ್ದ ಕಾಲದಲ್ಲಿ ಯಾವುದೇ ಸಂದರ್ಶನದಲ್ಲಿ ಹಾಗೆ ಹೇಳಿರಲಿಲ್ಲ. 'ನನ್ನನ್ನು ಕನ್ನಡದ ಸಿನಪ್ರೇಕ್ಷಕರು ಅದೆಷ್ಟು ಪ್ರೀತಿಸುತ್ತಾರೆ ಎಂದರೆ, ನನ್ನ ಜೊತೆ ಕೋತಿ ಅಥವಾ ಇನ್ನೇನೋ ಇದ್ದರೂ ಕೂಡ ಕನ್ನಡಿಗರು ನನ್ನನ್ನು ಇಷ್ಟಪಟ್ಟು ನೋಡುತ್ತಾರೆ. ಅಷ್ಟು ಪ್ರೀತಿ, ಅಭಿಮಾನ ನನ್ನ ಮೇಲಿದೆ. ಕನ್ನಡದ ಜನರಿಗೆ ನಾನು ಅದೆಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ನಿಜವಾಗಿಯೂ ಕನ್ನಡ ಸಿನಿಮಾದಲ್ಲಿ ನಟಿಸಲು ಪುಣ್ಯ ಮಾಡಿದ್ದೆ, ವೆರಿ ಗ್ರೇಟ್‌ಫುಲ್.' ಎಂದಿದ್ದಾರೆ.

ಆದರೆ, ಆ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಅದನ್ನು ಬೇರೆಯದೇ ರೀತಿಯಲ್ಲಿ ಪ್ರಾಜೆಕ್ಟ್ ಮಾಡಲಾಯಿತು. 'ಮಾಲಾಶ್ರೀ ಹೇಳಿದ್ದು ನನ್ನ ನನ್ನ ಜೊತೆ ಎಂದು, ನನ್ನ ಎದುರು ನಟಿಸುವ ಹೀರೋ ಕೋತಿ ಎಂದಲ್ಲ. ಅಷ್ಟಕ್ಕೂ ಅವರ ಜೊತೆ ಹೀರೋ ಮಾತ್ರವಲ್ಲ, ಚಿತ್ರದಲ್ಲಿ ಬಹಳಷ್ಟು ನಟನಟಿಯರು ನಟಿಸುತ್ತಾರಲ್ಲವೇ? ಆದರೆ, ಅವರೆಲ್ಲರೂ ಯಾಕೆ ಹಾಗೆ ಅಂದುಕೊಳ್ಳಲಿಲ್ಲ! ಮಾಲಾಶ್ರೀ ಅವರು ಈ ಸಂಗತಿಯನ್ನು ಅಂದು ತಮಗೆ ಆಪ್ತರಾಗಿದ್ದ ನಟ ಅಂಬರೀಷ್ ಬಳಿ ಹೇಳಿಕೊಂಡಿದ್ದರಂತೆ. ಅದಕ್ಕೆ ಅಂಬರೀಷ್ ಅವರು 'ನೀನು ಹಾಗೆ ಹೇಳಿರಲ್ಲ, ಹೇಳುವಂಥವಳೂ ಅಲ್ಲ. ಅದು ನಮಗೂ ಕನ್ನಡ ಪ್ರೇಕ್ಷಕರಿಗೂ ಗೊತ್ತು ಬಿಡು, ತಲೆ ಕೆಡಿಸಿಕೊಳ್ಳಬೇಡ ' ಎಂದಿದ್ದರಂತೆ. 

ಸಾವಿನ ಭಯದಿಂದ ನಡುಗುತ್ತಿರೋ ಸಲ್ಲು, ಅಮ್ಮನ ಕಳ್ಕೊಂಡ ಆತ್ಮೀಯ ಕಿಚ್ಚನಿಗೂ ಹೇಳಲಿಲ್ಲ ಸಂತಾಪ!

ಈ ಬಗ್ಗೆ ಮಾಲಾಶ್ರೀ ಅವರು ಹೇಳುವುದು ಇಷ್ಟು..'ಆ ಸುದ್ದಿ ಹಬ್ಬಿದ ಮೇಲೆ ನಾನು ಪ್ರೆಸ್‌ಮೀಟ್ ಕರೆದು 'ನಾನು ಎಲ್ಲಿಯೂ ಹಾಗೆ ಹೇಳೀಲ್ಲ' ಎಂದು ಆ ಬಗ್ಗೆ ಕ್ಲಾರಿಟಿ ಕೊಟ್ಟಿದ್ದೇನೆ. ಅಂದು ಅಲ್ಲಿ ಅಂಬರೀಷ್, ದೊರೈ ಭಗವಾನ್ ಸೇರಿದಂತೆ ಕನ್ನಡ ಚಿತ್ರಂಗದ ಬಹಳಷ್ಟು ಮಹನೀಯರು ಇದ್ದರು. ಆ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡವರು ಯಾರೂ ಆ ಬಗ್ಗೆ ನೇರವಾಗಿ ನನ್ನನ್ನು ಕೇಳಲಿಲ್ಲ, ಕೇಳದೇ ನಾನು ಏನಂತ ಹೇಳಲಿ? ಇದೊಂಥರಾ 'ದೇವರಿಲ್ಲ ಅಂತ ಕೆಲವರು ವಾದ ಮಾಡಿದ ಹಾಗೆ. ಇಲ್ಲದಿರುವುದಕ್ಕೆ ಅವರು ವಾದ ಮಾಡುವುದಾದಾದರೂ ಯಾಕೆ? ಹಾಗೇ, ನಾನು ಕನ್ನಡದ ನಟರ ಬಗ್ಗೆ ಹಾಗೇ ಹೇಳಿರಲೇ ಇಲ್ಲ, ನಾನು ಹೇಳಿಲ್ಲ ಅಂತ ಹೇಳುವ ಅಗತ್ಯವಾದರೂ ಏನಿತ್ತು? ಯಾರೂ ಆ ಸುದ್ದಿಯ ಬಗ್ಗೆ ನೇರವಾಗಿ ಕೇಳಿಲ್ಲ, ನಾನೂ ಹೇಳಲಿಲ್ಲ. 

ನಾನು ಯಾವತ್ತೂ ಕೇಳಿದರೆ ನೇರವಾಗಿ ಇದ್ದಿದ್ದನ್ನು ಇದ್ದಂತೆ ಹೇಳುವವಳು. ಕೆಲಸದಲ್ಲಿ ಶ್ರದ್ಧೆ, ಅಭಿಮಾನಿಗಳು ಹಾಗೂ ಎಲ್ಲರ ಬಗ್ಗೆ ಪ್ರೀತಿ-ಗೌರವ ಹೊಂದಿರುವವಳು. ನನ್ನ ಜೀವನದಲ್ಲಿ ಕೆಲಸ, ಜನರ ಬಗ್ಗೆ ಗೌರವಾದರ ಬಿಟ್ಟರೆ ಬೇರೆಯದರ ಬಗ್ಗೆ ಯೋಚಿಸುವುದೇ ಗೊತ್ತಿಲ್ಲ. ಹೀಗೊಂದು ಟೀಕೆ ಈಗಲೂ ಓಡಾಡುತ್ತಿದೆ ಎಂದಾಗ, ಇವೆಲ್ಲ ಹೇಳಬೇಕಾಯ್ತು..' ಎಂದಿದ್ದಾರೆ. ಸುಳ್ಳು ಸುದ್ದಿಗೆ ಸ್ಪಷ್ಟನೆ ಕೊಡುವ ಅಗತ್ಯವಾದರೂ ಏನಿದೆ? ಆದರೆ, ಸುಳ್ಳನ್ನು ನಿಜ ಎಂದುಕೊಂಡ ಕೆಲವರಿಗೆ ಸುಳ್ಳನ್ನು ಸುಳ್ಳು ಎಂದು ಹೇಳಬೇಕು ಎಂದರೆ, ಈಗಲಾದರೂ ತಲುಪಲಿ ಎಂದು ಹೇಳುತ್ತಿದ್ದೇನೆ ಅಷ್ಟೇ..' ಎಂದಿದ್ದಾರೆ ನಟಿ ಮಾಲಾಶ್ರೀ. 

ನಟಿ ಮಾಲಾಶ್ರೀ ಅವರಿಗೆ ಈಗಲೂ ಅಪಾರ ಅಭಿಮಾನಿಗಳು ಇದ್ದಾರೆ ಎಂಬುದು ಸತ್ಯ. ಅವರಿಗೆ ಒಪ್ಪುವ ಪಾತ್ರದಲ್ಲಿ ನಟಿಸಿದರೆ ಈಗಲೂ ಮಾಲಾಶ್ರೀ ಸಿನಿಮಾ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮಗಳು ಆರಾಧನಾ ಜೊತೆ ನಟಿಸಿದರೂ ನಾವು ಅವರ ಚಿತ್ರಗಳನ್ನು ನೋಡುತ್ತೇವೆ ಎಂಬ ಮಾತೂ ಕೂಡ ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಕಾಣಿಸುತ್ತಿವೆ. ಆದರೆ, ಮಾಲಾಶ್ರೀ ಮತ್ತೆ ನಟಿಸುತ್ತಾರೆಯೇ? ಗೊತ್ತಿಲ್ಲ, ಅವರಿಗೇ ಈ ಪ್ರಶ್ನೆ ಕೇಳಿ ಉತ್ತರ ಪಡೆಯಬೇಕಷ್ಟೇ..!

Latest Videos
Follow Us:
Download App:
  • android
  • ios