ಬೆಂಗಳೂರು( ಜ. 24) ಒಟಿಟಿಯಲ್ಲಿ ನೇರವಾಗಿ ಸಿನಿಮಾ ಬಿಡುಗಡೆ ಮಾಡುವುದಕ್ಕೆ ನಟ ಕಿಚ್ಚ ಸುದೀಪ್  ವಿರೋಧ ವ್ಯಕ್ತಪಡಿಸಿದ್ದು ಸಿನಿಮಾ ಮಂದಿರದಲ್ಲೇ ತೆರೆ ಕಾಣಬೇಕು.  ಚಿತ್ರಮಂದಿರಗಳು ನಮಗೆಲ್ಲಾ ಒಂದು ತರ ದೇವಸ್ಥಾನ ಇದ್ದಂತೆ ಎಂದು ಹೇಳಿದ್ದಾರೆ.

ಒಟಿಟಿಯಲ್ಲಿ ಯಾವಾಗ ಬೇಕಾದ್ರು ಸಿನಿಮಾ ಬಿಡುಗಡೆ ಮಾಡಿಕೊಳ್ಳಬಹುದು. ಥಿಯೇಟರ್ ಗೆ ಸಿನಿಮಾ ಬಂದ ಮೇಲೆ ಒಟಿಟಿಗೆ ಬಂದರೆ ಒಳ್ಳೆಯದು ಎಂದು ತಾವೇ ಬ್ಯ್ರಾಂಡ್ ಅಂಬಾಸಿಡರ್ ಆಗಿರುವ ಸುಗಂಧ ಧ್ರ್ಯವದ ಲಾಂಚ್  ಕಾರ್ಯಕ್ರಮವೊಂದರಲ್ಲಿ ಹೇಳಿದರು.

ಶಿವಮೊಗ್ಗ ಸ್ಫೋಟ; ಕಿಚ್ಚ ಸುದೀಪ್ ಪ್ರತಿಕ್ರಿಯೆ

ಕೊರೋನಾ ಆತಂಕದ ಕಾರಣಕ್ಕೆ ಲಾಕ್ ಡೌನ್ ಘೋಷಿಸಿದ ನಂತರ ಸಿನಿಮಾ ಮಂದಿರಗಳನ್ನು ಬಂದ್ ಮಾಡಲಾಗಿತ್ತು. ನಂತರ ನಿಧಾನವಾಗಿ ಚಿತ್ರಮಂದಿರಗಳು ಓಪನ್ ಆಗಿದ್ದು ಇನ್ನು ಮೊದಲಿನ ಪ್ರತಿಕ್ರಿಯೆ ಸಿಗುತ್ತಿಲ್ಲ. ಈ ನಡುವೆ ಬಾಲಿವುಡ್ ಸೇರಿದಂತೆ ಅನೇಕ ಚಿತ್ರಗಳನ್ನು ಆನ್ ಲೈನ್ ಒಟಿಟಿ ಫಾರ್ಮೆಟ್ ನಲ್ಲಿಯೇ ಬಿಡುಗಡೆ ಮಾಡಲಾಗಿತ್ತು.