Asianet Suvarna News Asianet Suvarna News

ಆಗಸ್ಟ್‌ ಬರ್ತಿದೆ, ಥಿಯೇಟರ್‌ಗಳ ಕತೆ ಏನಾಗ್ತಿದೆ!

ಆಗಸ್ಟ್‌ನಲ್ಲಾದ್ರೂ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಾ? ತೆರೆದರೂ ಜನ ಬರುತ್ತಾರಾ? ಎಂಬ ಸಂದಿಗ್ಧತೆ ಮುಂದುವರಿದಿದೆ. ಎರಡನೇ ಹಂತದ ಲಾಕ್‌ಡೌನ್‌ ಆರಂಭದಲ್ಲೇ ಥಿಯೇಟರ್‌ ಪುನರಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಆದರೆ ಈಗ ಚಿತ್ರೋದ್ಯಮವೇ ರೀ ಓಪನಿಂಗ್‌ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣ್ತಿಲ್ಲ. ಈ ಬೆಳವಣಿಗೆ ಬಗ್ಗೆ ಇಂಡಸ್ಟ್ರಿ ಮಂದಿ ಏನಂತಾರೆ?

Cinema Theater likely to open in September
Author
Bengaluru, First Published Jul 29, 2020, 9:45 AM IST

ಬೆಂಗಳೂರು (ಜು. 29): ಆಗಸ್ಟ್‌ನಲ್ಲಾದ್ರೂ ಚಿತ್ರಮಂದಿರಗಳ ಬಾಗಿಲು ತೆರೆಯುತ್ತಾ? ತೆರೆದರೂ ಜನ ಬರುತ್ತಾರಾ? ಎಂಬ ಸಂದಿಗ್ಧತೆ ಮುಂದುವರಿದಿದೆ. ಎರಡನೇ ಹಂತದ ಲಾಕ್‌ಡೌನ್‌ ಆರಂಭದಲ್ಲೇ ಥಿಯೇಟರ್‌ ಪುನರಾರಂಭಿಸುವ ಪ್ರಸ್ತಾವನೆ ಸರ್ಕಾರದ ಮುಂದಿತ್ತು. ಆದರೆ ಈಗ ಚಿತ್ರೋದ್ಯಮವೇ ರೀ ಓಪನಿಂಗ್‌ ಬಗ್ಗೆ ತಲೆ ಕೆಡಿಸಿಕೊಂಡಂತೆ ಕಾಣ್ತಿಲ್ಲ. ಈ ಬೆಳವಣಿಗೆ ಬಗ್ಗೆ ಇಂಡಸ್ಟ್ರಿ ಮಂದಿ ಏನಂತಾರೆ?

1. ಸೆಪ್ಟೆಂಬರ್‌ವರೆಗೂ ಇದೇ ಸ್ಥಿತಿ

ನಾನು ಸೌತ್‌ ಇಂಡಿಯನ್‌ ಫಿಲಮ್‌ ಚೇಂಬರ್‌ ಆಫ್‌ ಕಾಮರ್ಸ್‌ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಚಿತ್ರಮಂದಿರಗಳು ಆರಂಭವಾಗುವ ಕುರಿತು ನನಗೆ ಯಾವುದೇ ಮಾಹಿತಿ ಬಂದಿಲ್ಲ. ಕೊರೋನಾ ರೆಡ್‌ ಜೋನ್‌ನಲ್ಲಿರುವ ಬೆಂಗಳೂರು ಹಾಗೂ ಇತರ ಭಾಗಗಳು ಗ್ರೀನ್‌ ಜೋನ್‌ಗೆ ಬರಬೇಕು. ಅಲ್ಲಿವರೆಗೂ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ಸಿಗಲ್ಲ ಅನ್ನುವ ಮಾಹಿತಿ ಇದೆ. ಜೊತೆಗೆ ಚಿತ್ರಮಂದಿರ ಆರಂಭವಾದ ಕೂಡಲೇ ಯಾರೂ ಸಿನಿಮಾ ಬಿಡುಗಡೆ ಮಾಡಲಾರರು. ರಾಜ್ಯದಲ್ಲಿರುವ ಅಷ್ಟೂಚಿತ್ರಮಂದಿರಗಳಿಗೆ ಸಿನಿಮಾಗಳನ್ನು ಕೊಡಲು ಸಾಧ್ಯನಾ, ನಿರ್ಮಾಪಕರ ನಿಲುವು ಏನು, ಜನ ಚಿತ್ರಮಂದಿರಗಳಿಗೆ ಬರುತ್ತಾರೆಯೇ, ಸರ್ಕಾರ ಏನೆಲ್ಲ ನಿಯಮಗಳನ್ನು ಹಾಕುತ್ತದೆ ಎಂಬುದರ ಮೇಲೂ ಚಿತ್ರಮಂದಿರಗಳ ಬಾಗಿಲು ತೆರೆಯುವ ನಿರ್ಧಾರ ನಿಂತಿದೆ. ನನಗೆ ಗೊತ್ತಿರುವಂತೆ ಸೆಪ್ಟಂಬರ್‌ವರೆಗೂ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ಸಿಗಲಾರದು.

- - ಜೈರಾಜ್‌, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ನಟ ಸುಶಾಂತ್ ಸಿಂಗ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಗೆಳತಿ ರಿಯಾಗೆ ಆತಂಕ!

2. ನಿಯಮ ಸಡಿಲಿಸದೇ ಚಿತ್ರಮಂದಿರ ತೆರೆಯದು

ಸರ್ಕಾರದ ಅದೇಶದ ಮೇರೆಗೆ ಆಗಸ್ಟ್‌ನಲ್ಲಿ ಚಿತ್ರಮಂದಿರಗಳು ಶುರುವಾಗುವ ಸಾಧ್ಯತೆ ಇದೆ. ಆದರೆ, ಸರ್ಕಾರ ವಿಧಿಸಬೇಕು ಎಂದುಕೊಂಡಿರುವ

ನಿಯಮಗಳಡಿ ಚಿತ್ರಮಂದಿರಗಳ ಬಾಗಿಲು ತೆಗೆಯಲು ಸಾಧ್ಯವಿಲ್ಲ. ಮಾಹಿತಿ ಪ್ರಕಾರ ಶೇ.25 ಭಾಗ ಮಾತ್ರ ಸೀಟುಗಳನ್ನು ತುಂಬಿಸಬೇಕು. ಅಂದರೆ ಒಂದು ಚಿತ್ರಮಂದಿರದಲ್ಲಿ 1000 ಸೀಟುಗಳು ಇದ್ದರೆ, 250 ಸೀಟು ಮಾತ್ರ ತುಂಬಿಸಬೇಕು. ಇದನ್ನು ಪಾಲಿಸಿದರೆ ನಿರ್ಮಾಪಕ ಚಿತ್ರಮಂದಿರದ ಬಾಡಿಗೆ ಹೇಗೆ ಕಟ್ಟಬೇಕು, ಎಷ್ಟುಗಳಿಕೆ ಆಗುತ್ತದೆ ಎಂಬುದೇ ಗ್ಯಾರಂಟಿ ಇಲ್ಲ. ಇದೇ ನಿಯಮ ಅಂತಾದರೆ ನಮ್ಮ ನಿರ್ಮಾಪಕರು ಚಿತ್ರಗಳನ್ನು ಬಿಡುಗಡೆ ಮಾಡಲು ಸಿದ್ದರಿಲ್ಲ. ಈ ಕುರಿತು ಶಿವಣ್ಣ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ.

- ಪ್ರವೀಣ್‌ ಕುಮಾರ್‌, ರಾಜ್ಯ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ

3. ಆದೇಶ ಬಂದರೂ ಎಲ್ಲವೂ ಸಲೀಸಲ್ಲ

ಇದುವರೆಗೂ ಅಧಿಕೃತ ಅದೇಶ ಬಂದಿಲ್ಲ. ಆದರೆ, ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಪ್ರತಿನಿಧಿಗಳ ಜೊತೆಗೆ ಕೇಂದ್ರ ಸಚಿವರು ಮಾತನಾಡುವಾಗ ಭರವಸೆ ಕೊಟ್ಟಿದ್ದಾರೆ. ಈ ಭರವಸೆ ಮೇಲೆ ಎರಡು ಸಭೆ ಆಗಿದೆ. ಜು.31ಕ್ಕೆ ಲಾಕ್‌ಡೌನ್‌ ನಿಯಮ ಮುಕ್ತಾಯ ಆಗುತ್ತದೆ. ಹೀಗಾಗಿ ಚಿತ್ರಮಂದಿರಗಳ ಆರಂಭಕ್ಕೆ ಅವಕಾಶ ಸಿಗಬಹುದು ಎನ್ನುವ ನಂಬಿಕೆ ಇದೆ ಅಷ್ಟೆ. ಇನ್ನೊಂದು ವಿಚಾರ ಅಂದರೆ ಸರ್ಕಾರ ಗ್ರೀನ್‌ ಸಿಗ್ನಲ್‌ ಕೊಟ್ಟತಕ್ಷಣ ಚಿತ್ರಮಂದಿರಗಳ ಬಾಗಿಲು ತೆಗೆಯಲು ಆಗಲ್ಲ.

ಸರ್ಕಾರ ಯಾವ ಮಾನದಂಡಗಳು ವಿಧಿಸುತ್ತದೆ, ಅದನ್ನು ಪಾಲಿಸಿಕೊಂಡು ಥಿಯೇಟರ್‌ಗಳು ನಡೆಯಲು ಸಾಧ್ಯವೆ, ನಿರ್ಮಾಪಕರು ಈ ಹೊತ್ತಿನಲ್ಲಿ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಲು ಮುಂದಾಗುತ್ತಾರೆಯೇ, ಬೇರೆ ಭಾಷೆಯ ಚಿತ್ರಗಳ ಬಿಡುಗಡೆ ಮಾಡಬೇಕಾ ಎಂಬಿತ್ಯಾದಿಗಳ ಬಗ್ಗೆ ಇಡೀ ಚಿತ್ರರಂಗ ಕೂತು ಚರ್ಚೆ ಮಾಡಬೇಕಿದೆ. ಆದರೆ, ಲಾಭ ಮತ್ತು ನಷ್ಟವನ್ನು ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಖಂಡಿತ ಈ ಹೊತ್ತಿನಲ್ಲಿ ಕಳೆದ ಐದು ತಿಂಗಳುಗಳಿಂದ ಬಾಗಿಲು ಹಾಕಿಕೊಂಡಿದ್ದ ಚಿತ್ರಮಂದಿರಗಳ ಮರು ಆರಂಭ ಮಾಡುವುದು ಕಷ್ಟ, ಆದರೆ, ಚಿತ್ರರಂಗ ಉಳಿಯಬೇಕು, ಲಾಭಕ್ಕಿಂತ ಹೇಗೋ ಬದುಕಬೇಕು ಎನ್ನುವ ಮನಸ್ಸು ಇದ್ದರೆ ಥಿಯೇಟರ್‌ಗಳು ಓಪನ್‌ ಆಗುತ್ತವೆ. ಅಂದರೆ ಗ್ರಾಹಕರು ಬರುತ್ತಾರೋ ಇಲ್ಲವೋ ಗ್ಯಾರಂಟಿ ಇಲ್ಲದಿದ್ದಾಗ ಅಂಗಡಿಗಳು ಬಾಗಿಲು ತೆಗೆಯುತ್ತಾರಲ್ಲ, ಹಾಗೆಯೇ ಚಿತ್ರಮಂದಿರಗಳು ಕೂಡ.

- ಕೆ ವಿ ಚಂದ್ರಶೇಖರ್‌, ರಾಜ್ಯ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ

ಬಾಲಿವುಡ್ ಹಿರಿಯ ನಕ್ಷತ್ರ ನವಾಬನ ಮಗಳು ಕುಂಕು 986) ನೆನಪು ಮಾತ್ರ

4. ಇನ್ನಷ್ಟುದಿನ ಕಾಯೋಣ

ಚಿತ್ರಮಂದಿರಗಳ ಆರಂಭಕ್ಕೆ ಈಗ ಅವಕಾಶ ಸಿಕ್ಕರೂ, ಇದು ಸರಿಯಾದ ಸಮಯ ಅಲ್ಲ. ಜನ ಇನ್ನೂ ಕೊರೋನಾ ಭಯದಲ್ಲೇ ಇದ್ದಾರೆ. ವಹಿವಾಟಿನ ದೃಷ್ಟಿಯಿಂದ ನಿರ್ಮಾಪಕನಿಗೆ ನಷ್ಟವಾಗುತ್ತದೆ. ಒಂದು ಚಿತ್ರ ಥಿಯೇಟರ್‌ಗೆ ಬಂದು ಅದನ್ನು ಪ್ರೇಕ್ಷಕರು ನೋಡಿಲ್ಲ ಎಂದರೆ ನಿರ್ದೇಶಕ, ತಂತ್ರಜ್ಞರ ಶ್ರಮ ಕೂಡ ವ್ಯರ್ಥ ಆಗುತ್ತದೆ. ಜತೆಗೆ ನಿರ್ಮಾಪಕನಿಗೆ ಹಾಕಿದ ಬಂಡವಾಳ ಬರಲ್ಲ. ಹೀಗಾಗಿ ಈಗ ಸಿನಿಮಾಗಳನ್ನು ಬಿಡುಗಡೆ ಮಾಡುವುದಕ್ಕಿಂತ ಕಾಯುವುದು ಒಳ್ಳೆಯದು. ಆರೋಗ್ಯ, ಗಳಿಕೆ ಮತ್ತು ನಿರ್ದೇಶಕನ ಶ್ರಮದ ದೃಷ್ಟಿಯಿಂದ ಈಗ ಸಿನಿಮಾ ಬಿಡುಗಡೆ ಮಾಡುವುದು ಅಷ್ಟುಸೂಕ್ತವಲ್ಲ. ಒಂದು ವೇಳೆ ಈಗ ಸಿನಿಮಾ ಬಂದರೆ ಕೇವಲ ಪ್ರದರ್ಶಕರಿಗೆ ಮಾತ್ರ ಲಾಭ ಆಗುತ್ತದೆ.

- - ಟೇಶಿ ವೆಂಕಟೇಶ್‌, ರಾಜ್ಯ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ

5. ವಿತರಣೆಗೆ ನಾವು ಸಿದ್ಧ

ಸರ್ಕಾರದ ಅನುಮತಿ ಕೊಟ್ಟರೆ ಸಿನಿಮಾ ವಿತರಣೆಗೆ ನಾವು ಸಿದ್ದ. ಕೊರೋನಾ ಭಯ ಇದೆ ಅಂತ ಎಷ್ಟುದಿನ ಹೀಗೆ ಇರಲಿಕ್ಕೆ ಆಗುತ್ತದೆ. ಹೋಟೆಲ್‌ ಬಾಗಿಲು ತೆಗೆದಿದ್ದಾರೆ, ಬೇರೆ ವ್ಯಾಪಾರಗಳು ನಡೆಯುತ್ತಿವೆ. ಅದೇ ರೀತಿ ಚಿತ್ರಮಂದಿರಗಳು ಕೂಡ. ಸರ್ಕಾರ ಹೇಳುವ ನಿಯಮಗಳನ್ನು ಪಾಲಿಸಬೇಕು.

ಒಂದು ಥಿಯೇಟರ್‌ನಲ್ಲಿ ಚಿತ್ರ ಬಿಡುಗಡೆ ಮಾಡಿ 100 ಜನರನ್ನು ಕೂರಿಸುವ ಬದಲು, ಅದೇ ಜಾಗದಲ್ಲಿರುವ ಎರಡು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡಿ 50-50 ಪ್ರೇಕ್ಷಕರನ್ನು ಕೂರಿಸೋಣ. ಚಿತ್ರಮಂದಿರಗಳ ಬಾಡಿಗೆ ಕಡಿಮೆ ಮಾಡಿಸೋಣ. ಈ ಸಂಕಷ್ಟದಿಂದ ಆಚೆ ಬರುವ ತನಕ ಇಂಥಾ ಹೊಂದಾಣಿಕೆ ಅನಿವಾರ್ಯ. ಮುಖ್ಯವಾಗಿ ನಿಮ್ಮ ಸುರಕ್ಷತೆ ನಮ್ಮ ಜವಾಬ್ದಾರಿ ಎನ್ನುವ ಭರವಸೆ ಪ್ರೇಕ್ಷಕರಿಗೆ ಕೊಡಬೇಕು. ಇಡೀ ಉದ್ಯಮವನ್ನು ನಂಬಿಕೊಂಡು ಸಾವಿರಾರು ಮಂದಿ ಜೀವನ ಮಾಡುತ್ತಿದ್ದರೆ, ಕೇವಲ ಚಿತ್ರಮಂದಿರಗಳನ್ನು ನಂಬಿ 15 ರಿಂದ 20 ಸಾವಿರ ಕಾರ್ಮಿಕರು ಇದ್ದಾರೆ. ನನಗೆ ಗೊತ್ತಿರುವಂತೆ ಆಗಸ್ಟ್‌ 14ರಿಂದ ಚಿತ್ರಮಂದಿರಗಳು ಆರಂಭವಾಗಬಹುದು.

- ಎನ್‌ ಕುಮಾರ್‌, ವಿತರಕರು

6. ಈಗ ಚಿತ್ರಮಂದಿರ ತೆರೆಯೋದು ಬೇಡ

ಚಿತ್ರಮಂದಿರಗಳು ಯಾವಾಗ ಆರಂಭವಾಗಬಹುದು ಎನ್ನುವ ಬಗ್ಗೆ ಮಾಹಿತಿ ಇಲ್ಲ. ಆದರೆ, ಆಗಸ್ಟ್‌ ತಿಂಗಳಲ್ಲಿ ಚಿತ್ರಮಂದಿರಗಳ ಆರಂಭ

-- ಪುಷ್ಕರ್‌ ಮಲ್ಲಿಕಾರ್ಜುನಯ್ಯ, ನಿರ್ಮಾಪಕರು

ಮಾಹಿತಿ ಇರುವಂತೆ ಕೇವಲ 25 ಅಥವಾ 50 ಭಾಗ ಮಾತ್ರ ಸೀಟು ತುಂಬಿಸಬೇಕು ಎನ್ನುವ ಷರತ್ತುಗಳ ನಡುವೆ ಸಿನಿಮಾ ಬಿಡುಗಡೆ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಪೂರ್ತಿ ಚಿತ್ರಮಂದಿರ ತುಂಬಿದಾಗಲೂ ನಿರ್ಮಾಪಕರು ಹಾಕಿದ ಬಂಡವಾಳ ತೆಗೆದುಕೊಳ್ಳಲು ಕಷ್ಟಪಡುತ್ತಿದ್ದರು. ನನ್ನ ಪ್ರಕಾರ ಕೊರೋನಾ ಭಯ ಜನರಿಂದ ದೂರ ಆಗಬೇಕು, ಸೂಕ್ತ ಸಮಯ ನೋಡಿ ಸಿನಿಮಾ ಬಿಡುಗಡೆ ಮಾಡಿದರೆ ಒಳ್ಳೆಯದು ಎಂಬುದು ನಿರ್ಮಾಪಕನಾಗಿ ನನ್ನ ಅಭಿಪ್ರಾಯ. ಆದರೆ, ನಿರ್ಮಾಪಕರ ಸಂಘದ ಸಭೆ ಇದೆ. ಅವರು ಏನು ನಿರ್ಧಾರ ಮಾಡುತ್ತಾರೋ ನೋಡಬೇಕು.

Follow Us:
Download App:
  • android
  • ios