ಮುಂಬೈ(ಜು. 28)  'ಮದರ್ ಇಂಡಿಯಾ' ಮತ್ತು 'ನಯಾ ದೌರ್' ಚಿತ್ರಗಳಲ್ಲಿ ಕಾಣಿಸಿಕೊಂಡ ಹಿರಿಯ ನಟಿ ಕುಂಕುಂ ( 86) ಮುಂಬೈನ ಬಾಂದ್ರಾದ ನಿವಾಸದಲ್ಲಿ ನಿಧನರಾಗಿದ್ದಾರೆ.  ಹಿರಿಯ ನಟಿಗೆ ಬಾಲಿವುಡ್ ದಿಗ್ಗಜರು ನಮನ ಸಲ್ಲಿಸಿದ್ದಾರೆ.

ಬಿಹಾರದ ಶೇಖ್ ಪುರ್ ಹುಸೇನ್ ಬಾದ್ ನವಾಬರಾರ ಮಗಳಾಗಿದ್ದ ಕುಂಕುಂ ಚಿತ್ರರಂಗಕ್ಕೆ ಬಂದಿದ್ದು ಒಂದು ಆಕಸ್ಮಿಕ.  ಹಿರಿಯ ನಟಿ ನಿಧನಕ್ಕೆ ತವರಿನಲ್ಲೂ ಅಭಿಮಾನಿಗಳು, ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

ಬಾಲಿವುಡ್ ನಿಂದ ಒಂದೇ ದಿನ ಮರೆಯಾದ ನಟ-ನಟಿ

ಕುಂಕುಂ  1954 ರಲ್ಲಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದರು. ಅವರು 'ಆರ್ ಪಾರ್' ಚಿತ್ರದ  'ಕಬಿ ಆರ್ ಕಭಿ ಪಾರ್'  ಹಾಡಿನಲ್ಲಿ ಡ್ಯಾನ್ಸರ್ ಆಗಿ ಮೊದಲಿಗೆ ಕಾಣಿಸಿಕೊಂಡರು. 'ಮದರ್ ಇಂಡಿಯಾ' ಮತ್ತು 'ನಯಾ ದೌರ್', 'ಕೊಹಿನೂರ್', 'ಉಜಲಾ', 'ಮಿಸ್ಟರ್ ಎಕ್ಸ್ ಇನ್ ಬಾಂಬೆ', 'ಶ್ರೀಮನ್ ಫುಂಟೂಶ್', 'ಗಂಗಾ ಕಿ ಲಹರೆನ್', 'ರಾಜ ಔರ್ ರುಂಖ್ ',' ಆಂಖೇನ್ ',' ಲಲ್ಕಾರ್ 'ಮತ್ತು' ಗೀತ್ 'ಸಿನಿಮಾಗಳ ಮೂಲಕ ಅಂದಿನ ಕಾಲದ ಜನಪ್ರಿಯ ನಟಿಯಾದರು. 

ಕುಂಕುಂ ಮೊಟ್ಟ ಮೊದಲ ಭೋಜ್‌ಪುರಿ ಚಿತ್ರದಲ್ಲೂ ನಟಿಸಿದ್ದಾರೆ. 'ಗಂಗಾ ಮಾಯ್ಯ ತೋಹೆ ಪಿಯಾರಿ ಚಾಧೈಬೊ' ಎಂಬ ಶೀರ್ಷಿಕೆಯೊಂದಿಗೆ ಇದು 1963 ರಲ್ಲಿ ಬಿಡುಗಡೆಯಾಗಿ ಯಶಸ್ಸು ಸಾಧಿಸಿತ್ತು. ಅಭಿಮಾನಿಗಳು ಕುಂಕುಂ  ನಟನೆಯ ಹಾಡುಗಳನ್ನು ಶೇರ್ ಮಾಡಿಕೊಂಡು ನಮನ ಸಲ್ಲಿಸುತ್ತಿದ್ದಾರೆ.