ಈ ಅಣ್ತಮ್ಮ ಬೇರ‌್ಯಾರೂ ಅಲ್ಲ ಧ್ರುವ ಸರ್ಜಾ ಹಾಗೂ ಚಿರಂಜೀವಿ ಸರ್ಜಾ. ಚಿರಂಜೀವಿ ಸರ್ಜಾ ಹಾಗೂ ತಾನ್ಯಾ ಕಾಂಬಿನೇಷನ್‌ನ ‘ಖಾಕಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಚಿರಂಜೀವಿ ಸರ್ಜಾ ಆ್ಯಕ್ಷನ್‌ಗೆ ನೋಡುಗರು ಭೇಷ್ ಎನ್ನುತ್ತಿದ್ದಾರೆ ಎಂಬುದು ಚಿತ್ರತಂಡದ ಖುಷಿಗೆ ಕಾರಣ.

ಖಾಕಿ ತೊಟ್ಟ ಚಿರುಗೆ ತಾನ್ಯಾ ಹೋಪ್ ಜೋಡಿ!

ಸದ್ಯ ಯೂಟ್ಯೂಬ್‌ನಲ್ಲಿ ಒಂದು ಲಕ್ಷದ ಹಿಟ್ಸ್ ಗಡಿ ದಾಟಿರುವ ‘ಖಾಕಿ’ ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸಿದ್ದು, ನವೀನ್ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ‘ಚಿರಂಜೀವಿ ಸರ್ಜಾ ಹಾಗೂ ನಾಯಕಿ ತಾನ್ಯಾ ಹೋಪ್ ಜೋಡಿ ಈ ಚಿತ್ರಕ್ಕೆ ಸೂಕ್ತವಾಗಿದೆ. ಆ್ಯಕ್ಷನ್ ಸಿನಿಮಾ ಇದು. ಪವರ್ ಫುಲ್ ಟೈಟಲ್ ಜತೆಗೆ ಈಗ ಅಷ್ಟೇ ಜೋಶ್ ಆಗಿರುವ ಚಿತ್ರದ ಟೀಸರ್ ಬಿಡುಗಡೆ
ಮಾಡಿದ್ದೇವೆ.

 

ನಮ್ಮ ನಿರೀಕ್ಷೆಯಂತೆ ನೋಡುಗರಿಂದ ಚಿತ್ರದ ಟೀಸರ್‌ಗೆ ಒಳ್ಳೆಯ ಮಾರ್ಕ್ಸ್ ಸಿಗುತ್ತಿವೆ’ ಎನ್ನುತ್ತಾರೆ ನಿರ್ದೇಶಕ ನವೀನ್ ರೆಡ್ಡಿ. ಬಾಲ ಎಂಬುವವರು ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ.