ಬೆಂಗಳೂರು(ಸೆ. 24)  ನಟಿ ಮೇಘನಾ ರಾಜ್ ಸ್ಪಷ್ಟನೆಯೊಂದನ್ನು ಕೊಟ್ಟಿದ್ದಾರೆ.  ಮೇಘನಾಗೆ ಅವಳಿ ಮಕ್ಕಳಾಗಗಿವೆ, ಮೇಘನಾ ಕಣ್ಣೀರ ಕತೆ ಎಂದೆಲ್ಲಾ ಹರಿದಾಡುತ್ತಿದ್ದ ಸುದ್ದಿಗಳಿಗೆ ಒಂದೆ ಉತ್ತರದಲ್ಲಿ ನಕಲಿ ಎಂದಿದ್ದಾರೆ.  ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆಗಿದ್ದಾರೆ. 

ನನ್ನ ಬಗ್ಗೆ ಯಾವುದೇ ಸುದ್ದಿ ಹೊರಬರಬೇಕಾದರೂ ಕುಟುಂಬದ ಮೂಲದಿಂದ ಬರುತ್ತದೆ. ದಯವಿಟ್ಟು ಇಂಥ ವಿಡಿಯೋಗಳನ್ನು ನೋಡಬೇಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಅಭಿಮಾನಿಗಳು ಸಹ ಪ್ರತಿಕ್ರಿಯೆ ನೀಡಿದ್ದು ನಾವು ನಂಬಲ್ಲ.. ನಿಮ್ಮ ಅಧಿಕೃತ ಖಾತೆಯಿಂದಲೇ ಸುದ್ದಿ ಹೊರಬರಬೇಕು ಎಂದಿದ್ದಾರೆ. ಕೆಲವರು ನಾವು ಇಂಥ ವಿಡಿಯೋ ಓಪನ್ ಮಾಡುವ ಗೋಜಿಗೆ ಹೋಗುವುದಿಲ್ಲ ಎಂದಿದ್ದಾರೆ. 

ಗರ್ಭಿಣಿ ಮೇಘನಾ ಹೇಗಿದ್ದಾರೆ?

ನಟಿ ಮೇಘನಾ ಟ್ವಿಟ್ಟರ್, ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ಫೇಕ್ ಸುದ್ದಿಗಳ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವಿಡಿಯೋದ ಸ್ಕ್ರೀನ್‍ಶಾಟ್ ತೆಗೆದುಕೊಂಡು ಆ ಫೋಟೋವನ್ನು ಪೋಸ್ಟ್ ಮಾಡಿ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಯೂಟ್ಯೂಬ್ ನಲ್ಲಿರೋ ಸುದ್ದಿಯನ್ನ ನಂಬಬೇಡಿ  ಯಾವುದೇ ಸುದ್ದಿ ಇದ್ದರೂ ನಾನೇ ಖುದ್ದಾಗಿ ತಿಳಿಸುತ್ತೇನೆ. ಅಥವಾ ನಮ್ಮ ಕುಟುಂಬದವ್ರು ತಿಳಿಸುತ್ತಾರೆ. ಯಾರೋ ಹೇಳಿದ ಸುದ್ದಿಯನ್ನ ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.