Asianet Suvarna News Asianet Suvarna News

Mayura Theater Seized: ಸಾಲ ಕಟ್ಟಿಲ್ಲ, 'ಮಯೂರ' ಚಿತ್ರಮಂದಿರ ಸೀಜ್!

ಬ್ಯಾಂಕ್ ಸಾಲ ಮರುಪಾವತಿ ಮಾಡದ ಕಾರಣ ಶಿಡ್ಲಘಟ್ಟದಲ್ಲಿರುವ 'ಮಯೂರ' ಚಿತ್ರಮಂದಿರವನ್ನು ಸೀಜ್ ಮಾಡಿ, ಬೀಗ ಹಾಕಲಾಗಿದೆ. 

Chikkaballapur Sidlaghatta Mayur film theater seized by Bengaluru Bank vcs
Author
Bangalore, First Published Dec 25, 2021, 4:20 PM IST

ಕೊರೋನಾ (Covid19) ಅಟ್ಟಹಾಸದಿಂದ ಕರ್ನಾಟಕದಲ್ಲಿ (Karnataka) ಅದೆಷ್ಟೋ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚಿ ಹೋದವು. ಅಲ್ಲೊಂದು ಇಲ್ಲೊಂದು ಇರುವ ಸಿಂಗಲ್ ಸ್ಕ್ರೀನ್‌ಗಳು ಮಲ್ಟಿಪ್ಲೆಕ್ಸ್ (Multiplex) ವಿರುದ್ಧ ಹೋರಾಟ ನಡೆಸುತ್ತಿದೆ, ಈ ಸಮಯದಲ್ಲಿ ಜನಪ್ರಿಯ 'ಮಯೂರ' ಚಿತ್ರಮಂದಿರಕ್ಕೆ (Mayura Theater) ಬ್ಯಾಂಕ್ ಮ್ಯಾನೇಜರ್ ಬೀಗ ಜಡಾಯಿಸಿದ್ದಾರೆ. 

ಹೌದು! ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿರುವ ಶಿಡ್ಲಫಟ್ಟ ( Sidlaghatta) ನಗರದ ಮಯೂರ ಸರ್ಕಲ್‌ನಲ್ಲಿರುವ ಮಯೂರ ಚಿತ್ರಮಂದಿರ ಬೆಂಗಳೂರಿನಲ್ಲಿರುವ (Bengaluru) ಸಿಟಿ ಸಹಕಾರ ಸಂಘದಿಂದ ಸಾಲ ಪಡೆದುಕೊಂಡಿತ್ತು. ಸಾಲ ಮರುಪಾವತಿ ಮಾಡಿಲ್ಲವೆಂದು ನ್ಯಾಯಾಲಯದ (Court) ಆದೇಶದಂತೆ ಡಿಸೆಂಬರ್ 24ರಂದು ಸಂಪೂರ್ಣ ಸೀಜ್ ಮಾಡಿ ಬೀಗ ಹಾಕಿದ್ದಾರೆ. 

ಶಾಶ್ವತ ಬೀಗ ಹಾಕಲಿದೆ ಮೈಸೂರಿನ ಅತ್ಯಂತ ಹಳೆಯ ಚಿತ್ರಮಂದಿರ

ಈ ವಿಚಾರದ ಬಗ್ಗೆ ಕನ್ನಡ ವೆಬ್‌ಸೈಟ್‌ ಒಂದು ವರದಿ ಮಾಡಿದೆ. ಶಿಡ್ಲಘಟ್ಟದ ಮಯೂರ ಚಿತ್ರಮಂದಿರ ನಿರ್ವಹಣೆಗಾಗಿ ಬೆಂಗಳೂರಿನ ಸಿಟಿ ಸಹಕಾರ ಬ್ಯಾಂಕ್‌ನಲ್ಲಿ (Bank) ಸಾಲ ಪಡೆದುಕೊಂಡಿದ್ದರು. ಸಾಲ ಮೊತ್ತಕ್ಕೆ ಬಡ್ಡಿ ಸೇರಿ 4 ಕೋಟಿ ರೂಪಾಯಿಯಾಗಿದ್ದು, ಮರುಪಾವತಿ ಮಾಡದ ಕಾರಣ ನ್ಯಾಯಾಲಯ ಅನೇಕ ಬಾರಿ ನೊಟೀಸ್‌ (Notice) ನೀಡಿದೆ.  ನೊಟೀಸ್ ಜಾರಿ ಮಾಡಿದ್ದರೂ ಮರುಪಾವತಿ ಮಾಡದ ಕಾರಣ ನ್ಯಾಯಾಲಯದ ಆದೇಶದಂತೆ ವಕೀಲರೊಂದಿಗೆ ಬಂದಿದ್ದ ಬ್ಯಾಂಕಿನ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಚಿತ್ರ ಮಂದಿರಕ್ಕೆ ಬೀಗ (Lock) ಜಡಿದಿದ್ದಾರೆ. 

ಮಯೂರ ಚಿತ್ರಮಂದಿರದ ಜೊತೆಗೆ 08 ಅಂಗಡಿಗಳನ್ನೂ ಸೀಜ್ (Shops seize) ಮಾಡಿದ್ದಾರೆ ಎನ್ನಲಾಗಿದೆ. ಸಾಲ ಮುರುಪಾವತಿ ಮಾಡಿದರೆ ಬೀಗ ವಾಪಸ್ಸು ನೀಡುವುದು ಎಂದು ವ್ಯವಸ್ಥಾಪಕರಾದ ಅಪ್ಪಾಜಯ್ಯ ಸಿ.ಎಜ್‌ ಅವರು ಹೇಳಿದ್ದಾರಂತೆ. 

Theater Tickets Hike: ಚಿತ್ರಮಂದಿರ ಟಿಕೆಟ್‌ಗೆ ಹೊಸ ದರ, ಸಿಎಂ ವಿರುದ್ಧ ನೆಟ್ಟಿಗರು ಗರಂ

ಹಲವು ವರ್ಷಗಳಿಂದ ಇರುವ ಈ ಮಯೂರು ಚಿತ್ರಮಂದಿರಕ್ಕೆ ಶಿಡ್ಲಘಟ್ಟದಿಂದ ಮಾತ್ರವಲ್ಲದೆ ನೆರೆ ಹೊರೆಯ ಗ್ರಾಮಗಳಿಂದ ಜನರು ಆಗಮಿಸಿ ಸಿನಿಮಾ ನೋಡುತ್ತಿದ್ದರು. ಕನ್ನಡ (Kannada) ಮತ್ತು ತಮಿಳು (Tamil) ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿದ್ದ ಈ ಚಿತ್ರಮಂದಿರ ಸೀಜ್ ಆಗಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತ ಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ ಬಿಡುಗಡೆಯಾದ ಅಲ್ಲು ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆ ಪುಷ್ಪ (Pushpa) ಸಿನಿಮಾ ಪ್ರದರ್ಶನವಾಗುತ್ತಿತ್ತು. 

ಇದೇ ವರ್ಷ ಸೆಪ್ಟೆಂಬರ್‌ (September) ತಿಂಗಳಿನಲ್ಲಿ ಮೈಸೂರಿನಲ್ಲಿರುವ ಸರಸ್ವತಿ (Mysore Saraswathi) ಚಿತ್ರಮಂದಿರವನ್ನು ಮುಚ್ಚಲಾಗಿತ್ತು. ಕೊರೋನಾ ಮತ್ತು ಲಾಕ್‌ಡೌನ್‌ನಿಂದ ಕಳೆದ ಒಂದೂವರೆ ವರ್ಷದಿಂದ ಚಿತ್ರಮಂದಿರಗಳು ಸರಿಯಾಗಿ ತೆರೆಯದ ಕಾರಣ ಮಾಲೀಕರು ತಮ್ಮ ಸಿಬ್ಬಂದಿಗೆ ಸಂಬಳ ಕೊಟ್ಟು ಥಿಯೇಟರ್‌ ನಡೆಸಲು ಕಷ್ಟವಾಗುತ್ತಿತ್ತು ಎನ್ನುವ ಕಾರಣ ಮುಚ್ಚುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಸರಸ್ವತಿ ಚಿತ್ರಮಂದಿರದಲ್ಲಿ ಚಿತ್ರಪ್ರದರ್ಶನಗಳು ನಡೆಯುತ್ತಿತ್ತು. ಸಾಹಸಸಿಂಹ ವಿಷ್ಣುವರ್ಧನ್ (Dr Vishnuvardhan), ಹಿರಿಯ ನಟ ಅಶ್ವತ್ಥ್, ಯಶ್ ಸೇರಿದಂತೆ ಸಾಕಷ್ಟು ನಟನರ ಸಿನಿಮಾ ಇಲ್ಲಿ ತೆರೆಕಂಡಿತ್ತು. ಅಲ್ಲದೆ ಬಹುತೇಕ ಪುನೀತ್ ರಾಜ್‌ಕುಮಾರ್ (Puneeth Rajkumar) ಸಿನಿಮಾಗಳ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರಕ್ಕೂ ಡಾ.ರಾಜ್‌ಕುಮಾರ್ (Dr. Rajkumar) ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.

Follow Us:
Download App:
  • android
  • ios