‘ಪುನೀತ್‌ ರಾಜ್‌ಕುಮಾರ್‌ ಅವರೊಂದಿಗೆ ಸಿನಿಮಾ ಮಾಡುವುದೇ ದೊಡ್ಡ ಖುಷಿ. ಹೀಗಾಗಿ ಅವರ ಮೂಲಕ ಒಳ್ಳೆಯ ಕಮರ್ಷಿಯಲ್‌ ಸಿನಿಮಾ ಮಾಡುತ್ತಿದ್ದೇವೆ. ಪಕ್ಕಾ ಮನರಂಜನೆಯ ಕತೆಯನ್ನು ಒಳಗೊಂಡಿರುವ ಸಿನಿಮಾ. ಇದು ಬಾಂಡ್‌ ಶೈಲಿಯ ಚಿತ್ರವಲ್ಲ. ಜೇಮ್ಸ್‌ ಎನ್ನುವ ಹೆಸರಿಗೆ ಬೇರೆ ಅರ್ಥವಿದೆ. ಅದನ್ನು ಸದ್ಯದಲ್ಲೇ ರಿವಿಲ್‌ ಮಾಡುತ್ತೇನೆ. ಚಿತ್ರದ ಪೋಸ್ಟರ್‌ ಮೇಲಿರುವ ಡೈಲಾಗ್‌ಗಳನ್ನು ನೋಡಿದರೆ ಗೊತ್ತಾಗುತ್ತದೆ, ಇದು ಯಾವ ರೀತಿಯ ಸಿನಿಮಾ ಎಂಬುದು. ಅಪ್ಪು ಫ್ಯಾನ್ಸ್‌ ಜತೆಗೆ ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾ ಇದಾಗಲಿದೆ ಎನ್ನುವ ನಂಬಿಕೆ ಇದೆ’ ಎಂದರು ಚೇತನ್‌ ಕುಮಾರ್‌.

ಇನ್ನು ಮೇಲೆ ವರ್ಷಕ್ಕೆ ಮೂರು ಸಿನಿಮಾ ಮಾಡುವೆ: ಪುನೀತ್ ರಾಜ್‌ಕುಮಾರ್

ಮೊನ್ನೆ ಚಿತ್ರಕ್ಕೆ ಮುಹೂರ್ತ ಆದಾಗ ಚಿತ್ರದ ಮೊದಲ ದೃಶ್ಯಕ್ಕೆ ಅಶ್ವಿನಿ ಪುನೀತ್‌ರಾಜ್‌ಕುಮಾರ್‌ ಕ್ಲಾಪ್‌ ಮಾಡುವ ಮೂಲಕ ಶುಭ ಕೋರಿದರು. ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರ ನಿರ್ಮಿಸಿದ್ದ ಹೊಸಪೇಟೆಯ ಕಿಶೋರ್‌ ಪತ್ತಿಕೊಂಡ ‘ಜೇಮ್ಸ್‌’ ಚಿತ್ರದ ನಿರ್ಮಾಪಕರು. ‘ಮತ್ತೊಮ್ಮೆ ದೊಡ್ಡ ಸಿನಿಮಾ ಮಾಡುತ್ತಿರುವ ಖುಷಿ ಇದೆ. ಈ ಬಾರಿಯೂ ಒಳ್ಳೆಯ ಚಿತ್ರ ಮಾಡುವ ಆಸೆಯೊಂದಿಗೆ ಬಂದಿದ್ದೇನೆ’ ಎಂದರು ಕಿಶೋರ್‌ ಪತ್ತಿಕೊಂಡ.

ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಾಯ್ತು 'ಜೇಮ್ಸ್‌' ಪವರ್; ಮುಹೂರ್ತ ಹೀಗಿತ್ತು ನೋಡಿ!

ಚಿತ್ರದ ನಾಯಕ ಪುನೀತ್‌ ಅವರಿಗೆ ನಾಯಕಿ ಯಾರೆಂಬುದು ಇನ್ನೂ ಆಯ್ಕೆ ಆಗಬೇಕಿದೆ. ‘ಒಳ್ಳೆಯ ಶೀರ್ಷಿಕೆಯ ಕತೆ ಇಲ್ಲಿದೆ. ಚೇತನ್‌ ಕುಮಾರ್‌ ಜತೆ ಮೊದಲ ಬಾರಿಗೆ ಸಿನಿಮಾ ಮಾಡುತ್ತಿದ್ದೇನೆ. ಒಳ್ಳೆಯ ಕತೆಯನ್ನೇ ಮಾಡಿಕೊಂಡಿದ್ದಾರೆ. ತಡವಾಗಿರುವುದರಿಂದ ಒಂದಿಷ್ಟುಬದಲಾವಣೆ ಮಾಡಿಕೊಂಡಿದ್ದೇವೆ’ ಎಂದಷ್ಟೆಪುನೀತ್‌ ಹೇಳಿದರು. ಚರಣ್‌ರಾಜ್‌ ಸಂಗೀತ, ಶ್ರೀಶ ಕೂದುವಳ್ಳಿ ಕ್ಯಾಮೆರಾ, ಸಾಹಸ ರವಿವರ್ಮ ಅವರದ್ದು. ‘ಅಪ್ಪ ಅಮ್ಮ ಹೆಸರು ಇಟ್ಟರೆ ವಾಡಿಕೆ, ನಮಗೇ ನಾವೇ ಇಟ್ಟುಕೊಂಡರೆ ಬೇಡಿಕೆ’ ಇದು ಚಿತ್ರದಲ್ಲಿ ಬರುವ ಒಂದು ಡೈಲಾಗ್‌.