ಚಂದನ್ ಶೆಟ್ಟಿ ಎದೆಗೆ ಕಾಲಿನಿಂದ ಒದ್ದ ಪ್ರಶಾಂತ್ ಸಂಬರ್ಗಿ: ಇಲ್ಲಿದೆ ಕಾರಣ!
ಅರುಣ್ ಅಮುಕ್ತ ನಿರ್ದೇಶನದ, ಚಂದನ್ ಶೆಟ್ಟಿ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸೈಡ್ ಬಿ ಟ್ರೇಲರ್ ಬಿಡುಗಡೆ ಆಗಿದೆ. ಈ ಹಿಂದೆ ಸೈಡ್ ಎ ಟೇಲರ್‌ಬಿಡುಗಡೆ ಆಗಿತ್ತು. ಸೈಡ್ ಬಿ ಟೇಲರ್ ಮೂಲಕ ಚಿತ್ರತಂಡ ವಿಶೇಷ ರೀತಿಯಲ್ಲಿ ಪ್ರೇಕ್ಷಕರಿಗೆ ಹತ್ತಿರಾಗುವ ಪ್ರಯತ್ನ ಮಾಡಿದ್ದು, ಸೈಡ್ ಬಿ ಟೇಲರ್‌ಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ.
ಅರುಣ್ ಅಮುಕ್ತ ನಿರ್ದೇಶನದ, ಚಂದನ್ ಶೆಟ್ಟಿ ನಟನೆಯ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸೈಡ್ ಬಿ ಟ್ರೇಲರ್ ಬಿಡುಗಡೆ ಆಗಿದೆ. ಈ ಹಿಂದೆ ಸೈಡ್ ಎ ಟೇಲರ್‌ಬಿಡುಗಡೆ ಆಗಿತ್ತು. ಸೈಡ್ ಬಿ ಟೇಲರ್ ಮೂಲಕ ಚಿತ್ರತಂಡ ವಿಶೇಷ ರೀತಿಯಲ್ಲಿ ಪ್ರೇಕ್ಷಕರಿಗೆ ಹತ್ತಿರಾಗುವ ಪ್ರಯತ್ನ ಮಾಡಿದ್ದು, ಸೈಡ್ ಬಿ ಟೇಲರ್‌ಗೆ ಉತ್ತಮ ಮೆಚ್ಚುಗೆ ವ್ಯಕ್ತವಾಗಿದೆ. 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಜು. 19ರಂದು ತೆರೆಕಾಣುತ್ತಿದೆ. ಇದು ಕಾಲೇಜು ಕತೆಯ ಜೊತೆಗೆ ಸಸ್ಪೆನ್ಸ್ ಕೈಂ ಅಂಶಗಳನ್ನೂ ಹೊಂದಿರುವ ಸಿನಿಮಾ ಎಂದು ಚಿತ್ರತಂಡ ತಿಳಿಸಿದೆ.
ಜಬರ್ದಸ್ತ್ ಶೈಲಿಯಲ್ಲಿ ಮೂಡಿ ಬಂದಿರುವ ಈ ಟ್ರೈಲರ್ ನೋಡಿದವರೆಲ್ಲ ಸಖತ್ ಥ್ರಿಲ್ ಆಗಿದ್ದಾರೆ. ಶೀರ್ಷಿಕೆ ನೋಡಿದವರು ತಮ್ಮದೇ ಆದಂತಹ ಕಲ್ಪನೆ ಮೂಡಿಸಿಕೊಂಡಿದ್ದಾರೆ. ಆದರೆ, ಈ ಸಿನಿಮಾ ಅದೆಲ್ಲವನ್ನೂ ಮೀರಿದ ರಗಡ್ ಕಥೆಯನ್ನೊಳಗೊಂಡಿದೆ ಎಂಬುದನ್ನು ಚಿತ್ರದ ಸೈಡ್ ಬಿ ಟ್ರೈಲರ್ ಸಾಕ್ಷೀಕರಿಸಿದೆ. ಜೊತೆಗೆ ಟ್ರೈಲರ್ನಲ್ಲಿ ಕಾಣಿಸಿರುವ ಬಿಗುವಿನಲ್ಲಿಯೇ ಒಂದಿಡೀ ಸಿನಿಮಾ ಮೂಡಿ ಬಂದಿದ್ದರೆ ಗೆಲುವು ಗ್ಯಾರಂಟಿ ಎಂಬಂಥಹ ವಿಮರ್ಶೆಗಳೂ ಕೇಳಿ ಬರುತ್ತಿವೆ. ರ್ಯಾಪರ್ ಚಂದನ್ ಶೆಟ್ಟಿಯ ಪಾತ್ರವೂ ನೋಡುಗರ ಗಮನ ಸೆಳೆದಿದೆ.
ಇಲ್ಲಿ ಅವರಿಗೆ ಅಪರೂಪದ ಪಾತ್ರವೊಂದು ಸಿಕ್ಕಿರುವ ಸುಳಿವೂ ಕೂಡಾ ನೋಡುಗರಿಗೆ ಸಿಕ್ಕಿದೆ. ಮತ್ತೊಂದು ದೃಶ್ಯದಲ್ಲಿ ಪ್ರಶಾಂತ್ ಸಂಬರ್ಗಿ ಅವರು ಚಂದನ್ ಶೆಟ್ಟಿ ಎದೆಗೆ ಕಾಲಿನಿಂದ ಒದೆಯುವುದು ಕೂಡಾ ಸಖತ್ ಇಂಟರೆಸ್ಟಿಂಗ್ ಆಗಿದೆ. ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ ಶಿವಲಿಂಗೇಗೌಡ ನಿರ್ಮಾಣದ ಈ ಸಿನಿಮಾದಲ್ಲಿ ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯ, ಕುಮಾರ್ ಗೌಡ ಛಾಯಾಗ್ರಹಣ, ಶ್ರೀಕಾಂತ್ ಜಿ ಕಶ್ಯಪ್ ಕಾರ್ಯಕಾರಿ ನಿರ್ಮಾಪಕ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶವಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಕಾಕ್ರೋಚ್ ಸುಧಿ, ಪ್ರಶಾಂತ್ ಸಂಬರ್ಗಿ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಚಿತ್ರದ ಪಾರ್ಟಿ ಹಾಡು ಬಿಡುಗಡೆ: ಚಂದನ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟೂಡೆಂಟ್ ಪಾರ್ಟಿ ಹಾಡು ಬಿಡುಗಡೆ ಆಗಿದೆ. ಬಹದ್ದೂರ್ ಚೇತನ್ ಬರೆದಿರುವ ಹಾಡು ಇದಾಗಿದೆ. ಹಾಡಿಗೆ ಚಂದನ್ ಶೆಟ್ಟಿ ಹಾಗೂ ಸಂಗೀತ ನಿರ್ದೇಶಕ ವಿಜೇತ್ ಕೃಷ್ಣ ಧ್ವನಿಯಾಗಿದ್ದಾರೆ. ಮನೋಜ್ ವಿವಾನ್, ಮನಸ್ವಿ, ಭಾವನಾ ಅಪ್ಪು, ಅಮರ್ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ನಿರ್ದೇಶಕ ಅರುಣ್ ಅಮುಕ್ತ, ‘ಚಂದನ್ ಶೆಟ್ಟಿ ಅವರ ಎಲ್ಲಾ ಹಾಡುಗಳಂತೆಯೇ ಈ ಹಾಡು ಕೂಡ ಹಿಟ್ ಆಗಲಿದೆ. ವಿದ್ಯಾರ್ಥಿಗಳು ಯಾವ ಯಾವ ಕಾರಣಗಳಿಗೆ ಪಾರ್ಟಿ ಮಾಡುತ್ತಾರೆ ಎಂಬುದರ ಮೇಲೆ ಮೂಡಿ ಬಂದಿರುವ ಹಾಡು ಇದು’ ಎಂದರು.