ಚಂದನ್ ಶೆಟ್ಟಿ ವಿಡಿಯೋ ವೈರಲ್, ಅದ್ಯಾಕೆ ಮುಖದ ತುಂಬಾ ಬೆವರು ಸುರಿದ್ರೂ ಬಿಡ್ತಿಲ್ಲ?
ಚಂದನ್ ಶೆಟ್ಟಿಯವರು ಇತ್ತಿಚೆಗೆ ತಮ್ಮ ಲೈಫ್‌ನಲ್ಲಿ ಬಹಳಷ್ಟು ಹೆಚ್ಚು ಸಕ್ರಿಯರಾಗಿದ್ದಾರೆ, ಹೆಚ್ಚು ಉಲ್ಲಾಸ-ಉತ್ಸಾಹದಿಂದ ಇದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಸಿಡ್ನಿಗೆ ಪ್ರವಾಸ ಹೋಗಿ, ಅಲ್ಲಿ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಲ್ಲಿ..
ಆಸ್ಟ್ರೇಲಿಯಾದ ಸಿಡ್ನಿಯಿಂದ ಮರಳಿ ಮನೆಗೆ ಬಂದಿರುವನಟ-ಗಾಯಕ ಹಾಗು ಸಂಗೀತ ನಿರ್ದೇಶಕರಾದ ಚಂದನ್ ಶೆಟ್ಟಿ (Chandan Shetty) ಸದ್ಯ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದಾರೆ. ದೇಹದ ಭಾರವನ್ನು ಕಡಿಮೆ ಮಾಡಿಕೊಂಡು ಇನ್ನಷ್ಟು ಸ್ಲಿಮ್ ಹಾಗೂ ಫಿಟ್ ಆಗುವ ಪ್ಲಾನ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಚಂದರ್ನ ಶೆಟ್ಟಿ. ಈ ಬಗ್ಗೆ ಸ್ವತಃ ಅವರೇ ಒಂದು ಜಿಮ್ ವರ್ಕೌಟ್ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅವರ ಅಭಿಮಾನಿಗಳಿಗೆ ತಮ್ಮ ಮಾತಿಗೆ ಸಾಕ್ಷಿ ಕೊಟ್ಟಿದ್ದಾರೆ.
ಹೌದು ಚಂದನ್ ಶೆಟ್ಟಿಯವರು ಮೊದಲಿಗಿಂತ ಈಗ ಫಿಟ್ ಆಗಿದ್ದಾರಂತೆ. ಈ ಬಗ್ಗೆ ಅವರೇ ಜಿಮ್‌ನಲ್ಲಿಯೇ ಇರುವಾಗ ಹೇಳುತ್ತ ವಿಡಿಯೋ ಮಾಡಿದ್ದಾರೆ. 'ಎರಡು ತಿಂಗಳ ಹಿಂದೆ ನಾನು 85 ಕೆಜಿ ತೂಕವಿದ್ದೆ. ನಿರಂತರವಾಗಿ ಜಿಮ್‌ನಲ್ಲಿ ಬೆವರು ಹರಿಸಿ ಈಗ 75ಕೆಜಿಗೆ ನನ್ನ ದೇಹದ ಭಾರವನ್ನು ಕಡಿಮೆ ಮಾಡಕೊಂಡಿದ್ದೇನೆ. ಇನ್ನೂ 2 ಕೆಜಿ ಕಡಿಮೆ ಮಾಡಿಕೊಂಡರೆ ನನ್ನ ಐಡಿಯಲ್ ತೂಕ 75 ಆಗುತ್ತದೆ. ಅದೇ ನನ್ನ ಗುರಿ..' ಎಂದು ತಮ್ಮ ಹಣೆಯ ಮೇಲಿಂದ ಮುಖಕ್ಕೆ ಹರಿಯುತ್ತಿದ್ದ ಬೆವರು ಒರೆಸಿಕೊಳ್ಳುತ್ತ ಹೇಳಿದ್ದಾರೆ.
ಅನ್‌ಲಾಕ್ ಮಾಡಿ ಅದೇನು ಆಟ ಆಡಿದಾರೆ ಹ್ಯಾಂಡ್‌ಸಮ್ ಬಾಯ್ ಮಿಲಿಂದ್?
ಹೌದು, ಚಂದನ್ ಶೆಟ್ಟಿಯವರು ಇತ್ತಿಚೆಗೆ ತಮ್ಮ ಲೈಫ್‌ನಲ್ಲಿ ಬಹಳಷ್ಟು ಹೆಚ್ಚು ಸಕ್ರಿಯರಾಗಿದ್ದಾರೆ, ಹೆಚ್ಚು ಉಲ್ಲಾಸ-ಉತ್ಸಾಹದಿಂದ ಇದ್ದಾರೆ. ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಸಿಡ್ನಿಗೆ ಪ್ರವಾಸ ಹೋಗಿ, ಅಲ್ಲಿ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅಲ್ಲಿ ವಿಮಾನ ಚಾಲನೆ ಮಾಡಿ ತಾವು ಚಿಕ್ಕ ವಯಸ್ಸಿನಲ್ಲಿ ಕಂಡಿದ್ದ ಫ್ಲೈಟ್ ಓಡಿಸುವ ಕನಸು ನನಸು ಮಾಡಿಕೊಂಡಿದ್ದಾಗಿ ಅವರೇ ಬರೆದುಕೊಂಡಿದ್ದರು. ಆ ಸಂಗತಿ ಕೂಡ ವೈರಲ್ ಆಗಿತ್ತು.
ಸದ್ಯ ಸಿನಿಮಾ ನಟನೆ, ಸಂಗೀತ ನಿರ್ದೇಶನ, ಕೆಲವು ಲೈವ್ ಕಾರ್ಯಕ್ರಮಗಳು, ದೇಶ-ವಿದೇಶಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಚಂದನದ ಶೆಟ್ಟಿ ಬ್ಯುಸಿ ಆಗಿದ್ದಾರೆ. ಭವಿಷ್ಯದಲ್ಲಿ ಹಲವು ಕಾರ್ಯಕ್ರಮಗಳು ಬುಕ್ ಆಗಿದ್ದು, ಅವುಗಳತ್ತ ಗಮನ ಹರಿಸುತ್ತಲೇ ಇತ್ತ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತ ತಮ್ಮ ದೇಹದ ಫಿಟ್‌ನೆಸ್ ಬಗ್ಗೆ ಕೂಡ ಗಮನ ನೀಡುತ್ತಿದ್ದಾರೆ. ಒಟ್ಟಿನಲ್ಲಿ, ಲೈಫನಲ್ಲಿ ಏನೋ ಒಂದು ಘಟನೆ ಸಂಭವಿಸಿದರೆ ಎಲ್ಲವೂ ಮುಗಿದೇ ಹೋಯಿತು ಎಂಬಂತಹ ಜನರ ಮಧ್ಯೆ ಚಂದನ್ ಶೆಟ್ಟಿ ಥರದ ವ್ಯಕ್ತಿಗಳು ವಿಭಿನ್ನವಾಗಿ ಯೋಚಿಸಿ ಬೆಳೆಯುತ್ತಲೇ ಇರುತ್ತಾರೆ.
ಭಾರತದ ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಸಕ್ಸಸ್ ಹಿಂದಿನ ಗುಟ್ಟು ರಿವೀಲ್ ಆಯ್ತು!