ದರ್ಶನ್ ತೂಗುದೀಪ್ ಮ್ಯಾನೇಜರ್ ಆಗಿದ್ದ ಶ್ರೀನಿವಾಸ್ ಗೆ ಗೇಟ್ ಪಾಸ್ | ಡಿ ಬಾಸ್ ಫ್ಯಾನ್ಸ್ ಯಿಂದ ಅಧಿಕೃತ ಹೇಳಿಕೆ | 

ಬೆಂಗಳೂರು (ಅ.16): ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಿಸುತ್ತಿದ್ದ ಶ್ರೀನಿವಾಸ್ ಎಂಬುವವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘಧ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಇರಿಸಲಾಗಿದೆ ಎಂದು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಶನ್ ಅಧಿಕೃತಪಡಿಸಿದೆ. 

Add Asianetnews Kannada as a Preferred SourcegooglePreferred

"

ಇನ್ಮುಂದೆ ಶ್ರೀನಿವಾಸ್ ಅವರ ಜೊತೆ ಡಿ ಬಾಸ್ ಹೆಸರಿನಲ್ಲಿ ಯಾವುದೇ ವ್ಯವಹಾರ ಮಾಡುವಂತಿಲ್ಲ ಎಂದು ಡಿ ಕಂಪನಿ ಫ್ಯಾನ್ಸ್ ಅಸೋಸಿಯೇಶನ್ ಹೇಳಿದೆ. ಶ್ರೀನಿವಾಸ್ ಅವರು ಸಾಕಷ್ಟು ಸಮಯಗಳಿಂದ ದರ್ಶನ್ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಗೆಟ್ ಪಾಸ್ ಗೆ ಅಧಿಕೃತ ಕಾರಣ ತಿಳಿದು ಬಂದಿಲ್ಲ. ವೈಯಕ್ತಿಕ ಕಾರಣಗಳಿಂದ ದೂರ ಸರಿಸಲಾಗಿದೆ ಎಂದು ಹೇಳಲಾಗಿದೆ.

ಮತ್ತೆ ಸ್ಯಾಂಡಲ್ ವುಡ್ ಗೆ ಮರುಳುತ್ತಾರಾ ಬ್ಯೂಟಿ ಕ್ವೀನ್ ರಮ್ಯಾ?

ಇವರಿಗೂ ಮೊದಲು ಮಲ್ಲಿಕಾರ್ಜುನ್ ಎಂಬುವವರು ಮ್ಯಾನೆಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಮೇಲೆ ಮೋಸದ ಆರೋಪ ಕೇಳಿ ಬಂದಿತ್ತು. ಅವರನ್ನು ಹೊರಗೆ ಕಳುಹಿಸಲಾಗಿತ್ತು. ಆ ನಂತರ ಶ್ರೀನಿವಾಸ್ ಅವರು ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಕೆಲಸಕ್ಕೆ ಸೇರಿ 8 ತಿಂಗಳಾಗಿತ್ತು. 

ದರ್ಶನ್ ಜೊತೆ ಕೆಲಸ ಬಿಟ್ಟಿರೋ ವಿಚಾರವಾಗಿ ದರ್ಶನ್ ಮ್ಯಾನೇಜರ್ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ. ದರ್ಶನ್ ಮತ್ತು ನನ್ನ ಮಧ್ಯೆ ಮನಸ್ತಾಪ ಇರೋದು ನಿಜ‌. ಕೆಲಸದ ವಿಚಾರವಾಗಿ ಭಿನ್ನಾಭಿಪ್ರಾಯ ಬಂದಿದೆ. ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ ನಾನು ಎಲ್ಲಿಯೂ ಓಡಿಹೋಗಿಲ್ಲ ಎಂದು ಶ್ರೀನಿವಾಸ್ ಮನವಿ ಮಾಡಿಕೊಂಡಿದ್ದಾರೆ.