ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ನಟನೆಯ ಚಿತ್ರಕ್ಕೆ ಮರುಜೀವ ಬರುತ್ತಿದೆ. ತುಂಬಾ ವರ್ಷಗಳ ನಂತರ ಸದ್ದು ಮಾಡಲು ಸಜ್ಜಾಗಿರುವ ಈ ಚಿತ್ರದ ಹೆಸರು ‘ದಿಲ್‌ ಕಾ ರಾಜ’. ಪ್ರಜ್ವಲ್‌ ದೇವರಾಜ್‌ ಚಿತ್ರದ ನಾಯಕ. ಈ ಚಿತ್ರಕ್ಕೆ ರಮ್ಯಾ ನಾಯಕಿ.

ಸಿನಿಮಾ ಸೆಟ್ಟೇರಿ ಒಂದು ಶೆಡ್ಯೂಲ್‌ ಶೂಟಿಂಗ್‌ ಮುಗಿಸಿದ ಮೇಲೆ ಇದ್ದಕ್ಕಿದಂತೆ ಸಿನಿಮಾ ಸದ್ದಿಲ್ಲದೆ ನಿಂತು ಹೋಯಿತು. ರಮ್ಯಾ ಚಿತ್ರದಿಂದ ಹೊರ ನಡೆದಿದ್ದಾರೆ ಎಂಬುದು ಆಗ ಬಂದ ಸುದ್ದಿ. ಹಾಗೆ ಟೇಕಾಫ್‌ ಆಗದೆ ನಿಂತು ಹೋಗಿದ್ದ ಚಿತ್ರದ ರಿಲಿಕಲ್‌ ವಿಡಿಯೋ ಹಾಡು ಈಗ ಬಿಡುಗಡೆ ಆಗುತ್ತಿದೆ ಎಂಬುದು ಲೇಟೆಸ್ಟ್‌ ನ್ಯೂಸ್‌. ಹಾಗಾದರೆ ಇಲ್ಲಿ ನಾಯಕಿಯಾಗಿ ರಮ್ಯಾ ಅವರ ಪಾತ್ರ ಉಂಟಾ ಎನ್ನುವ ಪ್ರಶ್ನೆ ಎದುರಾಗಿದೆ.

ರವಿ ಸ್ಥಾನವೇ ಬದಲು, ಬೆಳಗೆರೆ ಬಿಗ್ ಬಾಸ್ ಕಂಟೆಸ್ಟಂಟ್ ಅಲ್ಲವೇ ಅಲ್ಲ!

ಒಂದು ಮಾಹಿತಿಯ ಪ್ರಕಾರ ‘ನೀರ್‌ದೋಸೆ’ ಸಿನಿಮಾ ವಿವಾದಕ್ಕೆ ಒಳಗಾಗುವ ಹೊತ್ತಿಗೆ ರಮ್ಯಾ ಮುಂದಿದ್ದು ಎರಡು ಚಿತ್ರಗಳು ಮಾತ್ರ. ಶಿವಣ್ಣ ಜತೆಗಿನ ‘ಆರ್ಯ’ ಹಾಗೂ ಪ್ರಜ್ವಲ್‌ ದೇವರಾಜ್‌ ಅವರ ಜತೆಗಿನ ‘ದಿಲ್‌ ಕಾ ರಾಜ’. ಈ ನಡುವೆ ಅವರು ರಾಜಕೀಯದಲ್ಲೂ ಸಕ್ರಿಯರಾದರು. ಈ ಪೈಕಿ ‘ಆರ್ಯ’ ಶೂಟಿಂಗ್‌ ಮುಗಿಸಿ ಹೊರಟವರು ‘ದಿಲ್‌ ಕಾ ರಾಜ’ ಕಡೆ ನೋಡಲಿಲ್ಲವಂತೆ. ಈಗ ಚಿತ್ರದ ಲಿರಿಕಲ್‌ ವಿಡಿಯೋ ಹಾಡು ಬಿಡುಗಡೆ ಆಗುತ್ತಿದೆ.

ಟಾಲಿವುಡ್‌ನಲ್ಲಿ ಹೆಸರು ಮಾಡಿರುವ ಗುಲ್ಬರ್ಗಾ ಮೂಲದ ಕನ್ನಡಿಗ ಸೋಮನಾಥ್‌ ಪಿ ಪಾಟೀಲ್‌ ಈ ಚಿತ್ರದ ನಿರ್ದೇಶಕರು. ಇನ್ನೂ ರಾಜಮೌಳಿ ನಿರ್ದೇಶನದ ‘ಸೈ’, ‘ಛತ್ರಪತಿ’, ‘ಯಮದೊಂಗ’, ‘ಮಗಧೀರ’, ‘ಈಗ’, ‘ಬಾಹುಬಲಿ’ ಹಾಗೂ ಅನುಷ್ಕಾ ಶೆಟ್ಟಿನಟನೆಯ ‘ಅರುಂಧತಿ’ ಚಿತ್ರಗಳಿಗೆ ಕ್ಯಾಮೆರಾ ಹಿಡಿದಿದ್ದ ಕೆ ಕೆ ಸೆಂದಿಲ್‌ ಕುಮಾರ್‌ ‘ದಿಲ್‌ ಕಾ ರಾಜ’ ಚಿತ್ರಕ್ಕೂ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಕೂಡ ಬಿಡುಗಡೆ ಆಗಿದೆ.

marital status ತುಂಬುವಾಗ ಆರ್ಯವರ್ಧನ್ ಬೇಸರಿಸಿಕೊಳ್ಳೋದ್ಯಾಕೆ? 

ತೆಲುಗು ಚಿತ್ರರಂಗದ ಬಹು ದೊಡ್ಡ ತಂಡವೊಂದು ಕನ್ನಡದಲ್ಲಿ ಸಿನಿಮಾ ಮಾಡುತ್ತಿದೆ ಎಂದು ಆಗ ಸುದ್ದಿ ಆಗಿತ್ತು. ತೆಲುಗಿನ ‘ಗಬ್ಬರ್‌ಸಿಂಗ್‌’ ಚಿತ್ರದ ನಿರ್ದೇಶಕ ಹರೀಶ್‌ ಶಂಕರ್‌ ಆಗಮಿಸಿ ‘ದಿಲ್‌ ಕಾ ರಾಜ’ ಚಿತ್ರಕ್ಕೆ ಕ್ಲಾಪ್‌ ಮಾಡಿದ್ದರು. ಆದರೆ, ಇಷ್ಟೆಲ್ಲ ಆದ ಮೇಲೂ ಈ ಸಿನಿಮಾ ಮೂಲೆ ಸೇರಿದ್ದು ರಮ್ಯಾ ಕೈ ಕೊಟ್ಟಮೇಲೆ ಎನ್ನಲಾಗುತ್ತಿದೆ.

ಈಗ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿಕೊಳ್ಳುತ್ತಿರುವ ಈ ಚಿತ್ರಕ್ಕೆ ಶೂಟಿಂಗ್‌ ಮುಕ್ತಾಯವಾಗಿದೆಯೇ, ಆಗಿದ್ದರೆ ಚಿತ್ರದ ನಾಯಕಿಯಾಗಿ ರಮ್ಯಾ ಅವರೇ ಇದ್ದಾರೆಯೇ, ಬೇರೆ ಯಾರಾದರೂ ರಮ್ಯಾ ಜಾಗವನ್ನು ತುಂಬಿಸಿದ್ದಾರೆಯೇ ಎಂಬುದು ಸದ್ಯದ ಕುತೂಹಲ. ಇದಕ್ಕೆ ಚಿತ್ರತಂಡವೇ ಉತ್ತರಿಸಬೇಕು. ಅಥವಾ ಈ ಚಿತ್ರದ ಮೂಲಕ ನಟಿ ರಮ್ಯಾ ಮರಳಿ ಚಿತ್ರರಂಗಕ್ಕೆ ಬರಲಿದ್ದಾರೆ ಎಂಬುದು ಇನ್ನಷ್ಟೆಗೊತ್ತಾಗಬೇಕಿದೆ.