ನಟಿ ಚೈತ್ರಾ ಹಳ್ಳಿಕೇರಿ ಮಾಡಿದ ಆರೋಪಗಳಿಗೆ ಸ್ಪಷ್ಟನೆ ನೀಡಬೇಕು ಎಂದು ಪತಿ ಬಾಲಾಜಿ ಪೋತರಾಜು ಸುದ್ದಿಗೋಷ್ಠಿ ನಡೆಸಿದ್ದಾರೆ.
ವರದಿ: ಮಂಜುನಾಥ್. ವಿ
ಸಿನಿಮಾ ನಟಿ ಚೈತ್ರ ಹಳ್ಳಿಕೇರಿ ಪೋತರಾಜು ಪತಿ ಬಾಲಾಜಿ ಪೋತರಾಜು ಪ್ರತಿಕಾಗೋಷ್ಠಿ ನಡೆಸಿದ್ದ ತನ್ನ ಪತ್ನಿಯಾಗಿದ್ದ ಚೈತ್ರಾ ಹಳ್ಳಿಕೇರಿ ನಿನ್ನೆ ನನ್ನ ಮೇಲೆ ಆರೋಪ ಮಾಡಿದ್ದಾರೆ ಆದ್ರೆ ಆಕೆ ಮಾಡಿರುವ ಆರೋಪ ಸುಳ್ಳು. ನಾಲ್ಕು ವರ್ಷದ ಹಿಂದೆ ಇದೇ ರೀತಿ ಆರೋಪ ಮಾಡಿದ್ದಾಗ ನಾನೇ ಖುದ್ದು ಚೈತ್ರಾರನ್ನು ಭೇಟಿ ಮಾಡಿ ನಾವು ನಮ್ಮ ಕುಟುಂಬ ಒಳಗೆ ಬಗ್ಗೆ ಹರಿಸಿಕೊಳ್ಳೋಣ ಎಂದಿದ್ದೆ ಆದರೆ ಆಕೆ ಸಮಾಜದಲ್ಲಿ ನನ್ನ ಮಾನ ಕಳೆದಿದ್ದಾರೆ. ಆಕೆಗೆ ನಾನು ಐದು ಕೋಟಿ ಬೆಲೆಬಾಳುವ ಪ್ರಾಪರ್ಟಿ, 40 ಲಕ್ಷ ಕಾರ್, ಕೈತುಂಬಾ ಹಣ ಕೊಟ್ಟು ಸುಮ್ಮನಾಗಿದ್ದೆ. ಇದಾದ ನಂತರ ಡಿವೋರ್ಸ್‌ಗೆ ಅಪ್ಲೈ ಮಾಡಲು ಹಣ ಬೇಡಿಕೆ ಕೂಡಾ ಇಟ್ಟಿದ್ದಾರೆ. ಆಗಲೂ ಸಲ್ಪ ಕೊಟ್ಟಿದ್ದೆ ಆದರೆ ಆಕೆ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು.ಇದರಿಂದ ನಾನೇ ಕೋರ್ಟ್ ಮೂಲಕ ಡಿವೋರ್ಸ್‌ಗೆ ಅಪ್ಲೈ ಮಾಡಿದೆ. ಇದೇ ವೇಳೆ ಡಿಸೆಂಬರ್‌ನಲ್ಲಿ ಮಿಡಿಯೇಷನ್ ಫೇಲ್ ಆಗತ್ತು. ಯಾಕಂದ್ರೆ ಆಕೆ ನಮ್ಮ ಬಳಿ 25 ಕೋಟಿ ಡಿಮ್ಯಾಂಡ್ ಮಾಡಿದ್ದರು. ಅಷ್ಟು ಹಣ ಕೊಡುವುದಕ್ಕೆ ನಮ್ಮ ಕೈಯಲ್ಲಿ ಆಗುವುದಿಲ್ಲ ಎಂದು ಹೇಳಿದಕ್ಕೆ ಮೀಡಿಯೇಷನ್ ಫೇಲ್ ಆಗಿತ್ತು. ಮತ್ತೆ ಆಕೆ ಕರೆ ಮಾಡಿ ನೀವು ನಮ್ಮ ಡಿಮ್ಯಾಂಡ್ ಒಪ್ಪದೇ ಇದ್ದರೆ ನಾನು ಮೀಡಿಯಾಗೆ ಹೋಗುತ್ತೀನಿ ಅಂತಾ ಹೇಳಿದ್ದರು. ನಾನು ಹೆಣ್ಣು ಅಂತ ತುಂಬಾ ಅನುಸರಿಸಿದ್ದೇನೆ. ಇಲ್ಲಿವರೆಗೂ ಆಕೆಗೆ 40-50 ಲಕ್ಷ ಹಣ ಕೊಟ್ಟಿದ್ದೇನೆ. ಇಷ್ಟು ಹಣವನ್ನ ಕೊಟ್ಟಿದ್ದರೂ 12 ಲಕ್ಷಕ್ಕೆ ದೂರು ನೀಡಿದ್ದಾರೆ. ಅಲ್ಲದೆ ಫ್ರಾಡ್ ಆಗಿದೆ ಅಂತ ಪ್ರೆಸ್ ಮೀಟ್ ಮಾಡ್ತಾರೆ ಆದ್ರೆ ಅದಕ್ಕೆ ಯಾವುದೇ ಆಧಾರವಿಲ್ಲ. ಬ್ಯಾಂಕ್‌ನಲ್ಲಿ ನಾನು ಬಡ್ಡಿ ಕಟ್ಟಿದ್ದೇನೆ ಅದಕ್ಕೆ ನನ್ನ ಬಳಿ ಆಧಾರ ಕೂಡಾ ಇದೆ ಅಂತಾರೆ ಬಾಲಾಜಿ.
ಮದುವೆಯಾದ ಕೆಲವು ವರ್ಷಗಳ ನಂತರ ನನ್ನ ಆಕೆ ಮಧ್ಯೆ ಸಾಕಷ್ಟು ಅಂತರವಾಯ್ತು
ಆಕೆ ರಿಯಾಲಿಟಿ ಶೋ ಭಾಗಿ ಯಾಗಬೇಕು, ನಾನು ಸೆಲೆಬ್ರೆಟಿ ನಾನು ಫ್ಯಾಷನ್ ಶೋ ಕೂಡಾ ಮಾಡಬೇಕು ಅಂತಾ ಡಿಮ್ಯಾಂಡ್ ಮಾಡಿದ್ದರು. ನಾವು ವಯಕ್ತಿಕವಾಗಿ ಬದುಕಿದವರು ಹೊರ ಪ್ರಪಂಚದಲ್ಲಿ ಕಾಣಿಸಿಕೊಂಡವರಲ್ಲ ಹೀಗಾಗಿ ನಾನು ಹಲವು ಬಾರಿ ಬೇಡ ನಾನು ಬ್ಯುಸಿನೆಸ್ ಮ್ಯಾನ್ ಈ ರೀತಿ ಎಲ್ಲಾ ನನಗೆ ಸರಿ ಅನ್ನಿಸೋದಿಲ್ಲ ಅಂತ ತಿಳಿ ಹೇಳಿದ್ದೆ. ಆದರೆ ಆಕೆ ಪ್ರತಿಯೊಂದಕ್ಕೂ ತಕರಾರು ತಗೆಯುತ್ತಿದ್ದರು. ನಾನು ತುಂಬಾ ಅನುಸಿರಿಕೊಂಡು ಬಂದಿದ್ದೇನೆ ಆದರೆ ಆಕೆ ಕೊನೆಯದಾಗಿ ನಾನು ಇಂಡಿಪೆಂಡ್ ಆಗಿ ಬದುಕಬೇಕು ಅಂತ ಹೇಳಿದ್ದರು. ನಾನು ಆಗಲೇ ಡಿವೋರ್ಸ್‌ಗೆ ನಿರ್ಧಾರ ಮಾಡಿಕೊಂಡೆ.
ನಟಿ ಚೈತ್ರಾ ಪತ್ರಿಕಾಗೋಷ್ಠಿ: ಬ್ಯಾಂಕ್ ಖಾತೆ ದುರ್ಬಳಕೆ, ಕೌಟುಂಬಿಕ ದೌರ್ಜನ್ಯ; ಪತಿ, ಮಾವನ ವಿರುದ್ಧ ಗಂಭೀರ ಆರೋಪ
ಮಕ್ಕಳ ಮೇಲೆ ಪ್ರೀತಿ ಇಬ್ಬರಲ್ಲೂ ಕಡಿಮೆಯಾಗಿಲ್ಲ
ನಮಗೆ ಇಬ್ಬರು ಮಕ್ಕಳು, ಮುತ್ತಿನಂತ ಮಕ್ಕಳಿದ್ದಾರೆ ಬಹಳ ಒಳ್ಳೆಯವರಿದ್ದಾರೆ. ಅವರಿಗೆ 13 ವರ್ಷದಿಂದ ದಿ ಬೆಸ್ಟ್ ಸ್ಕೂಲ್ ನಲ್ಲಿ ಓದಿಸುತ್ತಿದ್ದೇನೆ. ಚೈತ್ರನೂ ಕೂಡಾ ತುಂಬಾ ಚೆನ್ನಾಗಿ ಓದಿಸುತ್ತಿದ್ದಾರೆ. ಮಕ್ಕಳ ಬಗ್ಗೆ ಇಬ್ಬರಲ್ಲೂ ಕೂಡಾ ತುಂಬಾ ಕೇರ್ ಇದೆ. ಮಕ್ಕಳ ಬಗ್ಗೆ ತೊಂದರೆಯಿಲ್ಲ ಸದ್ಯ ಚೈತ್ರಾ ಬಳಿಯೇ ಇದ್ದಾರೆ.
