ಎಲ್ಲೆಡೆ ಪವರ್ ಸ್ಟಾರ್ ಫೋಟೋ ಮತ್ತು ಪೇಂಟಿಂಗ್. ವೈರಲ್ ಆಯ್ತು ನಟಿ ಚೈತ್ರಾ ಜೆ ಆಚಾರ್ ಸ್ಟೋರಿ...
ರಕ್ಷಿತ್ ಶೆಟ್ಟಿ ಜೊತೆ ಸಪ್ತ ಸಾಗರದಾಚೆ ಎಲ್ಲೋ ಹಾಗೂ ರಿಷಬ್ ಶೆಟ್ಟಿ ಜೊತೆ ಟೋಬಿ ಸಿನಿಮಾದಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಹೀಗೆ ಪ್ರಯಾಣ ಮಾಡುವಾಗ ಆಟೋ ಮೇಲೆ ಕಂಡು ಬ್ಯೂಟಿಫುಲ್ ಚಿತ್ರವನ್ನು ಶೇರ್ ಮಾಡಿಕೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹೌದು! ಚೈತ್ರಾ ಜೆ ಆಚಾರ್ ಪ್ರಯಾಣ ಮಾಡುವಾಗ ಆಟೋ ಮೇಲೆ ಅಪ್ಪು ಭಾವಚಿತ್ರ ನೋಡಿದ್ದಾರೆ. ಆ ಆಟೋ ಚಾಲಕ ಅಪ್ಪು ಬ್ಲ್ಯಾಕ್ ಆಂಡ್ ವೈಟ್ ಫೋಟೋ ಮತ್ತು ಪರಮಾತ್ಮ ಎಂದು ಬರೆಸಿಕೊಂಡಿದ್ದಾರೆ. ಇದನ್ನು ಶೇರ್ ಮಾಡಿಕೊಂಡ ಚೈತ್ರಾ 'ತಾವು ದುಡ್ಡು ಕೊಟ್ಟು ತಗೊಂಡಿರೋ ಅವರ ಗಾಡಿಗೆ ತೆರೆಯ ಮೇಲೆ ನೋಡಿ ಅಭಿಮಾನ ಬೆಳೆಸಿಕೊಂಡಿರೋ ವ್ಯಕ್ತಿ ಭಾವ ಚಿತ್ರ ಅಥವಾ ಹೆಸರು ಹಾಕ್ಕೋಳೋ ಪ್ರೀತಿ ಯಾವತ್ತಿಗೂ ಅರ್ಥ ಆಗದೆ ಇರುವಂಥದ್ದು. ಅದು ಕಲೆಯನ್ನು ಆರಾಧಿಸುವವರಿಂದ ಮಾತ್ರ ಸಾಧ್ಯವೇನೋ?' ಎಂದು ಬರೆದುಕೊಂಡಿದ್ದಾರೆ. ಚೈತ್ರಾ ಈ ವಿಚಾರವನ್ನು analysis ಮಾಡಿರುವ ರೀತಿ ಅದ್ಭುತವಾಗಿದೆ ಎಂದು ಅನೇಕರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
2019ರಲ್ಲಿ ಮಹಿರ ಸಿನಿಮಾ ಮೂಲಕ ಬಣ್ಣದ ಪ್ರಪಂಚಕ್ಕೆ ಎಂಟ್ರಿ ಕೊಟ್ಟ ಚೈತ್ರಾ ಆ ದೃಶ್ಯ, ತಲೆದಂಡ ಹಾಗೂ ಸ್ಟ್ರಾಬೆರಿ ಸಿನಿಮಾದಲ್ಲಿ ನಟಿಸಿ ಅದ್ಭುತ ಕಲಾವಿದೆ ಎಂದು ಸಾಭೀತು ಮಾಡಿದ್ದಾರೆ. ಜೊತೆಗೆ ಚೈತ್ರಾ ಅದ್ಭುತ ಗಾಯಕಿ, ಕೆಲವು ದಿನಗಳ ಹಿಂದೆ ಸಂಯುಕ್ತಾ ಹೊರನಾಡು ಜೊತೆ ಹಾಡಿರುವ ಹಾಡುಗಳು ಕೂಡ ವೈರಲ್ ಆಗಿತ್ತು.
ಅಭಿಮಾನಿಯಿಂದ Silicon statue:
ಪುನೀತ್ ರಾಜ್ ಕುಮಾರ್ ಅವ್ರ 2022 ಜನ್ಮದಿನದ ಅಂಗವಾಗಿ ಬೆಂಗಳೂರಿನ ಅಭಿಮಾನಿಯೊಬ್ಬರು ಅಪ್ಪು ಅವರ ತದ್ರೂಪಿ ಸಿಲಿಕಾನ್ ಸ್ಟ್ಯಾಚು(Silicone Statue) ಮಾಡಿಸಿದ್ದಾರೆ. ಬೆಂಗಳೂರಿನ ಪೀಣ್ಯ ಇಂಡಸ್ಟ್ರಿ(Peenya industry)ಯ ಉದ್ಯಮಿ ಅದ್ವಿಕ್ ಈ ಪ್ರತಿಮೆ ಮಾಡಿಸಿದ್ದು, ಖ್ಯಾತ ಶಿಲ್ಪ ಕಲಾವಿದರಾದ ಶ್ರೀಧರ್ ಮೂರ್ತಿ ಈ ಮೇಣದ ಪ್ರತಿಮೆಗೆ ಅಪ್ಪುವಿನ ಭಾವ ತುಂಬಿದ್ದಾರೆ ಸುಮಾರು ಎಂಟು ತಿಂಗಳ ಪರಿಶ್ರಮದ ಫಲವಾಗಿ ಈ ಪ್ರತಿಮೆ ಮೂಡಿ ಬಂದಿದ್ದು ಅಭಿಮಾನಿಗಳನ್ನು ಬಹುವಾಗಿ ಸೆಳೆಯುತ್ತಿದೆ.
ಚೂರು ರೆಡಿಯಾಗಲು ಇಷ್ಟವಿಲ್ಲ, ನಾನು ಫುಲ್ ಟಾಮ್‌ಬಾಯ್ ರೀತಿ: ಅಶ್ವಿನಿ ಪುನೀತ್ ರಾಜ್‌ಕುಮಾರ್
ಬೆಂಗಳೂರು ರಸ್ತೆಗೆ ಅಪ್ಪು ಹೆಸರು:
ಬೆಂಗಳೂರಿನ ಮೈಸೂರು ರಸ್ತೆಯಿಂದ ವೆಗಾಸಿಟಿ ಮಾಲ್ ಜಂಕ್ಷನ್ವರೆಗಿನ 12 ಕಿ.ಮೀ ರಸ್ತೆಗೆ ಪುನೀತ್ ರಾಜ್‌ಕುಮಾರ್ ಅವರ ಹೆಸರು ಇಡಲಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಫೆಬ್ರವರಿ 7ರಂದು ಅದ್ದೂರಿಯಾಗಿ ಉದ್ಘಾಟನೆ ಮಾಡಿದರು. ಪವರ್ ಸ್ಟಾರ್ ಹೆಸರು 12 ಕಿ.ಮೀ ಉದ್ದದ ರಸ್ತೆಗೆ ಇಟ್ಟಿರುವುದು ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಪುನೀತ್ ರಾಜ್ ಕುಮಾರ್ ಕುಟುಂಬ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಚಿತ್ರರಂಗದ ಅನೇಕರು ಸರ್ಕಾರಕ್ಕೆ ಧನ್ಯವಾದ ಹೇಳುತ್ತಿದ್ದಾರೆ.
