Asianet Suvarna News Asianet Suvarna News

'ಎಂದೂ ನಿನ್ನ ನೆರಳಾಗಿ ಕಾಯುವೆ'; ಹರಿಪ್ರಿಯಾ ಜೊತೆ ಸಿಂಹ ರೊಮ್ಯಾಂಟಿಕ್‌ ಫೋಟೋ ವೈರಲ್

ನಿಶ್ಚಿತಾರ್ಥದ ಬೆನ್ನಲೆ ದುಬೈ ಪ್ರವಾಸದ ಫೋಟೋ ಹಂಚಿಕೊಂಡ ವಸಿಷ್ಠಸಿಂಹ. ಹರಿದು ಬಂತು ಶುಭಾಶಯಗಳು.... 
 

Celebrity couple Vasishta Simha Haripriya share selfie clicked in Dubai dessert vcs
Author
First Published Dec 4, 2022, 1:10 PM IST

ಕನ್ನಡ ಚಿತ್ರರಂಗದಲ್ಲಿ ಪಿಪ್ಪಿಪಿಡುಂಡುಂ ಸೌಂಡು ಜೋರಾಗಿ ಕೇಳಿ ಬರುತ್ತಿದೆ ಏಕೆಂದರೆ ಸೆಲೆಬ್ರಿಟಿಗಳು ಒಬ್ಬರಾದ ಮೇಲೆ ಮತ್ತೊಬ್ಬರು ನಿಶ್ಚಿತಾರ್ಥ ಮತ್ತು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಈ ಲಿಸ್ಟ್‌ನಲ್ಲಿ ಅನಿರೀಕ್ಷಿತ ಎಂಟ್ರಿ ಅಂದ್ರೆ ಮುದ್ದು ಮುಖದ ಚೆಲುವೆ ಹರಿಪ್ರಿಯಾ ಮತ್ತು ನಟ ವಸಿಷ್ಠಸಂಹ ಎನ್ನಬಹುದು. ಡಿಸೆಂಬರ್ 2ರಂದು ಮನೆಯಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೋ ಮತ್ತು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಅಗುತ್ತಿದೆ. 

ಹೌದು! ನಟಿ ಹರಿಪ್ರಿಯಾ ಕೆಲವು ದಿನಗಳ ಹಿಂದೆ  ಮೂಗು ಚುಚ್ಚಿಸಿಕೊಳ್ಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆಗಲೇ ಮದುವೆ ಫಿಕ್ಸ್‌ ಆಗಿದೆ ಎಂದು ಸುದ್ದಿಯಾಗಿತ್ತು. ಮಾಧ್ಯಮಗಳಿಗೆ ಉತ್ತರ ಕೊಡದೆ ಸೌಲೆಂಟ್ ಆಗಿರುವ ಹರಿಪ್ರಿಯಾ ಪರ ನೆಟ್ಟಿಗರು ಬ್ಯಾಟಿಂಗ್ ಮಾಡಿದ್ದರು, ಯಾವಾಗ ಇಬ್ಬರೂ ಏರ್‌ಪೋರ್ಟ್‌ನಲ್ಲಿ ಕೈ-ಕೈ ಹಿಡಿದುಕೊಂಡು ಓಡಾಡುತ್ತಿರುವ ಫೋಟೋ ವೈರಲ್ ಅಗಿತ್ತು ಆಗ ಲವ್ ಮ್ಯಾರೇಜ್‌ ಫಿಕ್ಸ್‌ ಎಂದು ಗೊತ್ತಾಗುತ್ತದೆ. 

ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ ಫೋಟೋ ರಿವೀಲ್; ಮದುವೆ ಯಾವಾಗ?

ಪೋಸ್ಟ್‌:

ನಿಶ್ಚಿತಾರ್ಥದ ದಿನ ಸಿಂಹದ ಮಡಿಲಿನಲ್ಲಿ ಪುಟ್ಟ ಹುಡುಗಿ ಮಲಗಿರುವಂತೆ ಗ್ರಾಫಿಕ್ಸ್‌ ಮಾಡಿಸಿರುವ ಫೋಟೋ ಅಪ್ಲೋಡ್ ಮಾಡಿ 'ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು' ಎಂದು ಹರಿಪ್ರಿಯಾ ಬರೆದುಕೊಂಡಿದ್ದರು. ಅದೇ ಫೋಟೋನ ಸಿಂಹ ಶೇರ್ ಮಾಡಿ 'ಎಂದೂ ನಿನ್ನ ನೆರಳಾಗಿ ಕಾಯುವೆ ನಾನು' ಎಂದು ಬರೆದಿದ್ದರು.  ನಿಶ್ಚಿತಾರ್ಥ ಮದುವೆ ಕನ್ಫರ್ಮ್‌ ಆದ ಮೇಲೆ ಇಬ್ಬರು ದುಬೈ ಪ್ರವಾಸ ಫೋಟೋ ಅಪ್ಲೋಡ್ ಮಾಡಿ 'Us' ಎಂದು ಹಾಕಿದ್ದಾರೆ. 

 

 
 
 
 
 
 
 
 
 
 
 
 
 
 
 

A post shared by Vasishta N Simha (@imsimhaa)

ಮಾನ್ವಿತಾ ಹರೀಶ್, ಕೃಷಿ ತಾಪಂಡ, ನಿಧಿ ಸುಬ್ಬಯ್ಯ, ಗಾಯಕಿ ನಂದಿತಾ, ಚೈತ್ರಾ ವಾಸುದೇವನ್, ಅಮೂಲ್ಯ ಗೌಡ, ಸೋನು ಗೌಡ, ಕಾವ್ಯಾ ಶೆಟ್ಟಿ, ತೇಜಸ್ವಿನಿ ಪ್ರಕಾಶ್ ಸೇರಿದಂತೆ ಹಲವರು ಶುಭಾಶಯಗಳನ್ನು ತಿಳಿಸಿದ್ದಾರೆ.

ಪ್ರಿಯಾ ಜರ್ನಿ: 

ಶ್ರುತಿ ಚಂದ್ರಸೇನಾ ಹುಟ್ಟಿದ್ದು 1991 ಚಿಕ್ಕಬಳಾಪುರದಲ್ಲಿ. ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವಾಗ ಹರಿಪ್ರಿಯಾ ಎಂದು ಹೆಸರು ಬದಲಾಯಿಸಿಕೊಂಡರು. ಯಶಸ್ಸು ಹಿಟ್ ಬೇಕೆಂದು Haripriya ಎಂದು ಇದ್ದ ಹೆಸರನ್ನು ನ್ಯಾಮರಲಾಜಿಕಲ್‌ ಅಗಿ Harriprriya ಎಂದು ಬದಲಾಯಿಸಿಕೊಂಡರು. ಹಲವು ಸಿನಿಮಾಗಳಲ್ಲಿ ನಟಿಸಿ ಫ್ಲಾಪ್ ಆದ ನಂತರ ಬ್ರೇಕ್ ತೆಗೆದುಕೊಂಡು ಕಮ್ ಬ್ಯಾಕ್ ಮಾಡಿದ್ದು 2014 ಉಗ್ರಂ ಸಿನಿಮಾ ಮೂಲಕ, ಇದಾಗ ಮೇಲೆ ರಾಣಾ, ಬುಲೆಟ್‌ ಬಸ್ಯಾ, ರಿಕ್ಕಿ, ನೀರ್ ದೋಸೆ, ಬೆಲ್ ಬಾಟಮ್, ಡಾಟರ್ ಆಫ್ ಪಾರ್ವತಮ್ಮ, ಬಲೆ ಜೋಡಿ, ಪೆಟ್ರೋಮ್ಯಾಕ್ಟ್‌ ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. 

ಸದ್ಯಕ್ಕೆ ಹರಿಪ್ರಿಯಾ ಕೈಯಲ್ಲಿ ಬೆಲ್‌ಬಾಟಮ್, ಹ್ಯಾಪಿ ಎಂಡಿಂಗ್, ಲಗಾಮ್, ಇವರು ಮತ್ತು ತಾಯಿ ಕಸ್ತೂರಿ ಗಾಂಧಿ ಇನಿಮಾದಲ್ಲಿ ನಟಿಸುತ್ತಿದ್ದಾರೆ.

Follow Us:
Download App:
  • android
  • ios