ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಡಾ.ರಾಜ್‌ಕುಮಾರ್ ಅವರ ಶ್ರೀ ವಜ್ರೇಶ್ವರಿ ಕಂಬೈನ್ಸ್‌ ಸಾವಿರಾರು ಕಲಾವಿದರಿಗೆ ದಾರಿ ದೀಪವಾಗಿದೆ. ಅವರದ್ದೇ ಹಾದಿಯಲ್ಲಿರುವ  ಹ್ಯಾಟ್ರಿಕ್  ಹೀರೋ ಶಿವರಾಜ್‌ಕುಮಾರ್ ಹಾಗೂ ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ತಮ್ಮದೇ ನಿರ್ಮಾಣ ಸಂಸ್ಥೆ ಆರಂಭಿಸಿ, ನವ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. 

ಡೈನಾಮಿಕ್‌ ಸ್ಟಾರ್‌ ಕೈಲಿ ಭೇಷ್‌ ಅನ್ನಿಸಿಕೊಂಡೆ ಪತ್ನಿ ರಾಗಿಣಿ ಚಂದ್ರನ್‌! 

ಪುನೀತ್ ರಾಜ್‌ಕುಮಾರ್ ಪಿಆರ್‌ಕೆ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿರುವ 'ಫ್ಯಾಮಿಲಿ ಫ್ಯಾಕ್ಸ್'  ಚಿತ್ರ ತಂಡ ಹೊಸ ಕಲಾವಿದರ ಹುಡುಕಾಟ ಆರಂಭಿಸಿದೆ.  ಹೊಸ ಕಲಾವಿದರಿಗೆ ಅವಕಾಶ ನೀಡಬೇಕೆಂದು ಕಾಸ್ಟಿಂಗ್ ಕಾಲ್ ಮಾಡಿದೆ. ಪಾತ್ರಕ್ಕೆ ಬೇಕಾದ ವಿವರವನ್ನು ನೀಡಲಾಗಿದೆ. 

ನಟ-ನಟಿಯರ ಹುಡುಕಾಟ:
ಸುಮಾರು 18 ರಿಂದ 50 ವಯಸ್ಸಿನವರು ಅರ್ಜಿ ಹಾಕಬಹುದು. ನಿಮ್ಮ ಸ್ವಂತ ನಟನೆಯ 1 ನಿಮಿಷದ ವಿಡಿಯೋ, ಫೋಟೋ, ಹೆಸರು ಹಾಗೂ ಮೊಬೈಲ್ ನಂಬರ್‌ ಅನ್ನು Familypackfilm@gmail.comಗೆ ಕಳುಹಿಸಬೇಕು. ವಿವರ ಕಳುಹಿಸಲು ಅಕ್ಟೋಬರ್ 10, 2020 ಕೊನೆ ದಿನಾಂಕವಾಗಿರುತ್ತದೆ.

ವಿಶೇಷ ಅಭಿಮಾನಿಯ ಆಸೆ ಈಡೇರಿಸಿದ ಪುವರ್ ಸ್ಟಾರ್! 

ಪಿಆರ್‌ಕೆ ಸಿನಿಮಾಗಳು:
ಪುನೀತ್ ರಾಜ್‌ಕುಮಾರ್ ನಿರ್ಮಾಣದಲ್ಲಿ ಈಗಾಗಲೆ ಲಾ, ಫ್ರೆಂಚ್ ಬಿರಿಯಾನಿ, ಮಾಯಾ ಬಜಾರ್ ಹಾಗೂ ಕವಲುದಾರಿ ರಿಲೀಸ್‌ ಆಗಿ ಸೂಪರ್‌ ಹಿಟ್ ಆಗಿವೆ. ಪ್ರೇಕ್ಷಕರಿಗೆ ಇನ್ನಷ್ಟು ಮನೋರಂಜನೆ ನೋಡಲು 'ಫ್ಯಾಮಿಲಿ ಫ್ಯಾಕ್' ಹಾಗೂ 'ಓ2' ಸಿನಿಮಾ ಸಿದ್ಧವಾಗುತ್ತಿದೆ. ಓ2 ಚಿತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.